ಆರ್ ಸಿಎಚ್ ವರದಿ
ಮೈಸೂರು: ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರ
ನಾನು ಈ ವಿಚಾರದಲ್ಲಿ ಯಾವ ಪ್ರತಿಕ್ರಿಯೆಯನ್ನು ನೀಡಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಹೊಸ ಬಾರ್ ಲೈಸನ್ಸ್ ಕೊಡುವ ವಿಚಾರ ಸರ್ಕಾರದ ಮುಂದೆ ಇಲ್ಲ. ಡಿ.ಕೆ ಶಿವಕುಮಾರ್ ಎಲ್ಲೂ ಕೂಡ ಹೊಸ ಲೈಸನ್ಸ್ ಕೊಡುತ್ತೇವೆ ಅಂತಾ ಹೇಳಿಲ್ಲ.
ಸದ್ಯಕ್ಕೆ ಆ ವಿಚಾರದಲ್ಲಿ ಯಾವ ಚರ್ಚೆಗಳು ಬೇಡ. ಜನರ ಭಾವನೆಗಳನ್ನು ಕೇಳಬೇಕು, ಗೌರವಿಸಬೇಕು
ನಾನು ಸ್ಪಷ್ಟವಾಗಿಲ್ಲ ಹೇಳುತ್ತಿದ್ದೇನೆ. ಹೊಸ ಲೈಸನ್ಸ್ಗಳು ಯಾವುದು ಇಲ್ಲವೆಂದರು.
ಮಹಿಷ ದಸರವನ್ನ ಸರ್ಕಾರ ಮಾಡಿಲ್ಲ. ನಾವು ಹಿಂದೆಯೂ ಮಾಡಿಲ್ಲ ಈಗಲೂ ಮಾಡುತ್ತಿಲ್ಲ.
ಅವರ್ ಯಾರೋ ಹಿಂದಿನಿಂದ ಮಹಿಷ ದಸರಾ ಮೈಸೂರಿನಲ್ಲಿ ಮಾಡುತ್ತಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಏನು ಮಾಡಿಲ್ಲ.
ಈಗ ಆ ವಿಚಾರದಲ್ಲಿ ಜಿಲ್ಲಾಡಳಿತ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಕೇಂದ್ರದಿಂದ ಬರ ಅಧ್ಯಯನ ವಿಚಾರವಾಗಿ ಮಾತನಾಡಿ, ಎಲ್ಲಾ ಹಳ್ಳಿಯ ಜನರನ್ನು ಖುದ್ದಾಗಿ ಭೇಟಿ ಮಾಡಿ ಸಮಸ್ಯೆ ಆಲಿಸಿ ಎಂದು ಕೇಂದ್ರದ ತಂಡಕ್ಕೆ ಕೇಳಿಕೊಂಡಿದ್ದೇನೆ.
ಬರ ಪ್ರವಾಸದ ಪ್ಲಾನ್ ಅವರೇ ಮಾಡಿಕೊಂಡಿದ್ದಾರೆ. ಆಕಡೆ ಹೋಗಿ ಈ ಕಡೆ ಬನ್ನಿ ಅಂತ ನಾವು ನಿರ್ಧರಿಸಲು ಸಾಧ್ಯವಿಲ್ಲ.
ಹೊಲದಲ್ಲಿ ಹಸಿರು ಇದ್ದ ಕಾರಣಕ್ಕೆ ಅದು ಫಲ ಎಂಬ ಅರ್ಥವಲ್ಲ. ಬೆಳೆ ಬರಬೇಕು
ಹೀಗಾಗಿ ಹಸಿರನ್ನು ನೋಡಿ ತೀರ್ಮಾನವಾಗಬಾರದು. ಹೆಚ್ಚಿನ ಬೆಳೆ, ಮನೆ ಹಾಗೂ ರಸ್ತೆ ಎಲ್ಲವೂ ಸೇರಿ 7 ಸಾವಿರಕ್ಕೂ ಹೆಚ್ಚಿನ ನಷ್ಟ ಆಗಿದೆ. ಆದರೆ, ಎನ್ ಡಿಆರ್ ಎಫ್ ಪ್ರಕಾರ ನಾವು 4500 ಕೋಟಿ ಬರ ಪರಿಹಾರ ಕೇಳಿದ್ದೇವೆ. ಕೇಂದ್ರ ತಂಡ ಇಲ್ಲಿಂದ ಹೋಗಿ ವರದಿ ಕೊಡುತ್ತದೆ. ಆನಂತರ ಅಧ್ಯಯನದ ವರದಿ ಬರುತ್ತದೆ.
ಬರಕ್ಕೂ ಗ್ಯಾರಂಟಿ ಯೋಜನೆಗಳಿಗೂ ಸಂಬಂಧ ಇಲ್ಲ. ಬರದ ಪರಿಸ್ಥಿತಿ ಇದ್ದರೂ ಗ್ಯಾರಂಟಿಗಳು ಎಂದಿನಂತೆ ನಡೆಯುತ್ತವೆಂದರು.
ಜಾತಿ ಗಣತಿ ವಿಚಾರ
ನವೆಂಬರ್ನಲ್ಲಿ ಕರ್ನಾಟಕದ ಜಾತಿಗಣತಿ ವರದಿ ನನ್ನ ಕೈ ಸೇರಬಹುದು. ಆನಂತರ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ. ಸಮಿತಿಯ ಅಧ್ಯಕ್ಷರು ಬದಲಾಗಿದ್ದಾರೆ. ಹೀಗಾಗಿ ನವೆಂಬರ್ನಲ್ಲಿ ವರದಿ ಕೊಡುತ್ತಾರೆ. ಜಾತಿಗಣತಿ ಸಮಾಜವನ್ನ ವಿಂಗಡಿಸುವುದಿಲ್ಲ. ಯಾವ ಸಮುದಾಯ ಎಷ್ಟಿದೆ ಎಂಬುದು ಅಂಕಿಅಂಶಗಳು ಸರ್ಕಾರಕ್ಕೆ ಬೆಡಕು. ಯೋಜನೆಗಳ ಸುದ್ಧಪಡಿಸಲು ಈ ಯೋಜನೆಗಳು ಅವಶ್ಯಕವಾಗಿದೆ. ಪ್ರಧಾನಿ ಬಾಯಲ್ಲಿ ಮಾತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನುತ್ತಾರೆ. ಆದರೆ ಅವರ ನಡೆನುಡಿಗೆ ಬಹಳ ವ್ಯತ್ಯಾಸಗಳಿವೆ. ಹೀಗಾಗಿ ಜಾತಿ ಗಣತಿ ವಿರೋಧಿಸುತ್ತಾರೆ ಎಂದರು.