ಮೈಸೂರು: ಮೈಸೂರು ಮಹಾನಗರಪಾಲಿಕೆ ಚುನಾವಣೆ ಮುಂದುಡುವ ಪ್ರಶ್ನೆಯೇ ಇಲ್ಲ.ಶೀಘ್ರದಲ್ಲೇ ಚುನಾವಣೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದರು.
ನಗರದ ಸರ್ಕಾರಿ ಅತಿಥಿಗೃಹದ ಸಭೆಗೂ ಮುನ್ನ ಮಾತನಾಡಿದ ಅವರು, ಈಗಾಗಲೇ ಸಿಎಂ ಅವರು ಮಹಾನಗರ ಪಾಲಿಕೆ ಚುನಾವಣೆ ಸಮಯಕ್ಕೆ ಸರಿಯಾಗಿ ನಡೆಸುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಅವಧಿ ಮುಗಿದ ಬಳಿಕವೇ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ ಮುಂದಿನ ಎಪ್ರಿಲ್, ಮೇ ಗೆ ಇದ್ದು ಹದಿನೈದು ದಿನಗಳಲ್ಲಿ ಪಾಲಿಕೆ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.
2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪೆರಿಪರಲ್ ರಿಂಗ್ ರಸ್ತೆ ಬಗ್ಗೆ ಈಗಾಗಲೇ ಡಿಪಿಆರ್ ಗೆ ಟೆಂಡರ್ ಕರೆಯಲಾಗಿದೆ. ಅದಾದ ಬಳಿಕ ಭೂಮಿ ಖರೀದಿ ಸೇರಿ ನಾನಾ ಪ್ರಕ್ರಿಯೆಗಳು ಆಗಬೇಕಿದೆ. ಶೀಘ್ರದಲ್ಲೇ ಅವುಗಳೆಕ್ಕೂ ಚಾಲನೆ ಮಾಡಿ ಮುಗಿಸಲಾಗುವುದು ಎಂದರು.
ಇನ್ನೂ ಮಣಿಪಾಲ್ ಆಸ್ಪತ್ರೆ ಸೇರಿ ಹಲವೆಡೆ ಬೆಂಗಳೂರು ಮಾದರಿ ಫ್ಲೆ ಓವರ್ ನಿರ್ಮಾಣದ ಸ್ಥಳ ವೀಕ್ಷಿಸಲಾಗಿದೆ. ಅವುಗಳಿಗೂ ಶೀಘ್ರ ಡಿಪಿಆರ್ ತಯಾರಿಸಿ ಚಾಲನೆ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಸಿಎಂ ಡಿಸಿಎಂ ಹಣ ವಸೂಲಿ ಮಾಡುತ್ತಿದ್ದಾರೆಂಬ ಪ್ರಧಾನಿ ಹೇಳಿಕೆಗೆ ಪ್ರತಿ ಕ್ರಯಿಸಿ ಅವರ ಹೇಳಿಕೆಗೆ ಪ್ರತಿಕ್ರಯಿಸುವಷ್ಟು ದೊಡ್ಡವನು ನಾನಲ್ಲ. ಆದರೂರು ಭ್ರಷ್ಟಾಚಾರ ದ ಪಿತಾಮಹ ಬಿಜೆಪಿಯವರು ಎಂಬುದು ಜನರ ಅನಿಸಿಕೆ ಆಗಿದೆ.
ಸಿಎಂ ಯಾರೆಂಬ ಪ್ರಶ್ನೆಗೆ ಈ ಬಗ್ಗೆ ಪ್ರತಿಕ್ರಯಿಸಲು ನಿರಾಕರಿಸಿದರು.
ಇನ್ನೂ ಎಂಪಿ ಚುನಾವಣೆ ಕುರಿತ ಮಾತನಾಡಿ ಇಂದು ಮೈಸೂರು- ಕೊಡಗು ಲೋಕಸಭಾ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಲಾಗುವುದು ಅನಂತರ ಅದನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು. ಇನ್ನೂ ಇದು ಸಿಎಂಅವರ ಜಿಲ್ಲೆ ಆಗಿರುವ ಸೂಕ್ಷ್ಮ ಕ್ಷೇತ್ರ ಆಗಿರುವ ಕಾರಣಕ್ಕೆ ಅಭಿಪ್ರಾಯ ಸಂಗ್ರಹಿಸುವ ಕೆಲಸ ಇಲ್ಲಿಂದಲೇ ಮಾಡಲಾಗುತ್ತಿದೆ ಎಂದರು.