ನಂಜನಗೂಡು:- ಶ್ರೀ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಅಂಗಡಿಗಳನ್ನು ಟೆಂಡರ್ ಮೂಲಕ ತೆಗೆದುಕೊಂಡಿದ್ದ ಅಂಗಡಿ ಮಾಲೀಕರು ರಸ್ತೆಯನೆ ನುಂಗಿಕೊಂಡು ಮುಂದೆ ಮುಂದೆ ಬರುತ್ತಿದ್ದಾರೆ ಇದನ್ನು ಕೇಳುವವರು ಇಲ್ಲ ಹೇಳುವರು ಇಲ್ಲ ಕಣ್ಣು ಮುಚ್ಚಿ ಕುಳಿತ ದೇವಸ್ಥಾನದ ಆಡಳಿತ ಮಂಡಳಿ.
ಶ್ರೀ ಶ್ರೀಕಂಠೇಶ್ವರ ದೇವಾಲಯಕ್ಕೆ ನಾನಾ ಜಿಲ್ಲೆಗಳಿಂದ ಭಕ್ತಾದಿಗಳು ತಮ್ಮ ಸೇವೆಗಳನ್ನು ತೀರಿಸಲು ಬರುತ್ತಾರೆ ಅದರಂತೆ ಕಪಿಲಾ ನದಿಯಲ್ಲಿ ಮಿಂದು ಕಪಿಲಾ ರಸ್ತೆಯಲ್ಲಿ ಅಡ್ಡ ನಮಸ್ಕಾರ ಹಾಕಿಕೊಂಡು ಮತ್ತು ಹೆಜ್ಜೆ ನಮಸ್ಕಾರ ಹಾಕುತ್ತ ದೇವಸ್ಥಾನದ ಸುತ್ತ ಹುರುಳು ಸೇವೆ ಮಾಡುತ್ತಾರೆ ಆದರೆ ಇಲ್ಲಿನ ಅಂಗಡಿ ಮಾಲೀಕರು ತೆಗೆದುಕೊಂಡಿರುವ ಅಂಗಡಿ ಎಲ್ಲಿ ವ್ಯಾಪಾರ ಮಾಡದೆ ಓಡಾಡುವ ಪಾದಾಚಾರಿಗಳ ರಸ್ತೆ ಸೇರಿದಂತೆ ಭಕ್ತಾದಿಗಳು ಸೇವೆ ಮಾಡುವ ರಸ್ತೆಯನ್ನು ಅಕ್ರಮಿಸಿಕೊಂಡು.
ದಬ್ಬಾಳಿಕೆ ನಡೆಸುತ್ತಿದ್ದಾರೆ ಇದನ್ನು ಕೇಳುವವರು ಇಲ್ಲ ಹೇಳುವವರು ಇಲ್ಲ ಅವರ ಮನಸ್ಸಿಗೆ ಬಂದಂತೆ ಅಂಗಡಿಗಳ ಸ್ಥಳ ಹೆಚ್ಚಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಇದರಿಂದ ಭಕ್ತಾದಿಗಳಿಗೆ ಕಿರಿಕಿರಿ ಉಂಟು ಮಾಡಿದ್ದಾರೆ ದೇವಸ್ಥಾನದ ಆಡಳಿತ ಮಂಡಳಿ ಅಧಿಕಾರಿಗಳ ಕಚೇರಿಯ ಕೆಳಭಾಗದಲ್ಲಿ ಮತ್ತು ಅಕ್ಕಪಕ್ಕ ಮುಂಭಾಗದಲ್ಲಿ ಭಕ್ತಾದಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಮಾಲೀಕರನ್ನು ಕಂಡು ಕಾಣದಂತೆ ಇರುವುದನ್ನು ಕಂಡು ಭಕ್ತಾದಿಗಳು ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಮುಂದಾದರು ಕಪಿಲಾ ನದಿಯಲ್ಲಿ ಮಿಂದು ಸೇವೆ ಮಾಡಲು ಬರುವ ಭಕ್ತಾದಿಗಳಿಗೆ ಈ ರಸ್ತೆಯನ್ನು ಮುಕ್ತಗೊಳಿಸಬೇಕು ಮತ್ತು ಪಾದಾಚಾರಿಗಳು ಓಡಾಡುವುದಕ್ಕೆ ಅನುಕೂಲ ಮಾಡಿಕೊಡಬೇಕು ಅಂಗಡಿಯ ಮಾಲೀಕರು ಪಡೆದಿರುವ ಅಂಗಡಿಯಲ್ಲೇ ವ್ಯಾಪಾರ ಮಾಡಲು ಸೂಚನೆ ನೀಡಬೇಕು ಅಧಿಕಾರಿಗಳು ಇನ್ನಾದರೂ ಎಚ್ಚೆತ್ತಿಕೊಂಡು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಶಿವನ ಸುತ್ತ ಕಸದ ರಾಶಿ:
ಕಪಿಲಾ ನದಿಯಲ್ಲಿ ಮಿಂದು ಬರುವಾಗ ರಸ್ತೆಯ ಮಧ್ಯದಲ್ಲಿ ಇತಿಹಾಸ ಹೊಂದಿರುವ ಕಾರಂಜಿ ಮಧ್ಯದಲ್ಲಿ ಶಿವನ ವಿಗ್ರಹ ಇದೆ ಈ ಶಿವನ ತಲೆಯ ಮೇಲೆ ಗಂಗೆ ಸುರಿಯುವಂತೆ ಮಾಡಿದ್ದರು ಆದರೆ ವರ್ಷಗಳೆಲ್ಲ ಕಳೆದರೂ ಕೂಡ ಶಿವ ತಲೆಯ ಮೇಲೆ ಗಂಗೆ ಸುರಿಯದೆ ಸ್ವಚ್ಛತೆ ಇಲ್ಲದೆ ಕಸ ಕಡ್ಡಿಗಳಿಂದ ಗಬ್ಬು ನಾರುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಯಾರು ಕೂಡ ಗಮನ ಹರಿಸದೆ ಕ್ರಮ ಕೈಗೊಳ್ಳದೆ ದಿನ ಕಳೆಯುತ್ತಿದ್ದಾರೆ
ದೇವಸ್ಥಾನಕ್ಕೆ ಭಕ್ತಾದಿಗಳಿಂದ ಕಾಣಿಕ ರೂಪದಲ್ಲಿ ಹೆಚ್ಚು ಹೆಚ್ಚು ಆದಾಯ ಬರುತ್ತಿದೆ ಹೊರತು ದೇವಸ್ಥಾನದ ಆಡಳಿತದ ಮಂಡಳಿ ಇಂಥ ಕೆಲಸಗಳನ್ನು ಪರಿಗಣಿಸಿ ಮಾಡಿದರೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುತ್ತದೆ ನೋಡುಗರ ಮನಸ್ಸು ಚೆನ್ನಾಗಿರುತ್ತದೆ ಮುಂದಾದರು ಅಧಿಕಾರಿಗಳು ಕ್ರಮವಹಿಸಿ ಇಂಥ ಕೆಲಸಗಳನ್ನು ಮಾಡಬೇಕು ಎನ್ನುತ್ತಾರೆ ಭಕ್ತಾದಿಗಳು.
ದೇವಸ್ಥಾನದ ಆವರಣವನ್ನು ಗುಜರಿ ಮಾಡಿಕೊಂಡಿರುವ ಅಂಗಡಿ ಮಾಲೀಕರು:
ದೇವಸ್ಥಾನದ ಆವರಣದಲ್ಲಿ ತಮಗೆ ಇಷ್ಟ ಬಂದ ರೀತಿ ಹಳೆಯ ಪದಾರ್ಥಗಳು ಮುರಿದ ಗಾಡಿಗಳು ತಳ್ಳುವ ಗಾಡಿಗಳು ತಮಗಿಷ್ಟ ಬಂದ ರೀತಿಯಲ್ಲಿ ಹಾಕಿಕೊಂಡು ಗುಜುರಿಯಾಗಿ ಮಾಡುತ್ತಿದ್ದಾರೆ ಯಾವ ಅಧಿಕಾರಿಗಳು ತಮಗೆ ಸಂಬಂಧವಿಲ್ಲದ ರೀತಿ ಇದ್ದಾರೆ ಇದರ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದಕ್ಕೆ ಈ ರೀತಿಯಾಗಿದೆ ಇದಕ್ಕೆ ಕ್ರಮ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದರು.
ಬಿಸಿಲಿನಲ್ಲಿ ಒಣಗುತ್ತಿರುವ ರಥಗಳು:
ಪ್ರತಿ ವರ್ಷ ಜಾತ್ರೆಗಳು ಮುಗಿದ ನಂತರ ಮತಗಳಿಗೆ ಬಿಸಿಲು ಮಳೆ ರಕ್ಷಣೆಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಟಾರ್ಪಲ್ ನಿಂದ ಮುಚ್ಚುವ ವ್ಯವಸ್ಥೆ ಮಾಡಿ ರಕ್ಷಣೆ ಮಾಡುತ್ತಿದ್ದರು ಆದರೆ ಈ ವರ್ಷ ರಕ್ಷಣೆ ಇಲ್ಲದೆ ಬಿಸಿಲು ಮಳೆಯಿಂದ ಒಣಗುತ್ತದೆ ಇದರ ಜವಾಬ್ದಾರಿ ಯಾರದು ಎಂಬುದ ಪ್ರಶ್ನೆಯಾಗಿದೆ.