ನಂಜನಗೂಡು:- ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯಕ್ಕೆ ಇಂದು ಹುಣ್ಣಿಮೆ ದಿನ ಮತ್ತು ಭಾನುವಾರ ಆದುದರಿಂದ ದೇವಾಲಯಕ್ಕೆ ಭಕ್ತಾದಿಗಳು ತಂಡೋಪ ತಂಡವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅರಿದು ಬಂದರು
ಮಧ್ಯರಾತ್ರಿ ಮೂರು ಗಂಟೆಯಿಂದಲೇ ಕಪಿಲಾ ನದಿಯಲ್ಲಿ ಮಿಂದು ದೇವಾಲಯ ಸುತ್ತ ಉರುಳು ಸೇವೆ ದೂಪದ ಸೇವೆ ಮಾಡಿದರು
ಸವಿಧಾನ ಭಕ್ತಾದಿಗಳು ಮುಡಿಸೇವೆ ಪಂಚಮುಡಿ ಸೇವೆ ಬಿಲ್ಪತ್ರೆ ಸೇವೆ ದೀಪದ ಸೇವೆ ದೂಪದ ಸೇವೆ ಮಾಡಿ ದೇವಾಲಯ ಒಳಗಡೆ ಸಾರಥಿ ಸಾಲಿನಲ್ಲಿ ನಿಂತು ದರ್ಶನ ಪಡೆದರು
ದೇವಾಲಯ ಆಡಳಿತ ಮಂಡಳಿ ಭಕ್ತಾದಿಗಳಿಗೆ ದೇವರ ದರ್ಶನ ಮಾಡಲು ವ್ಯವಸ್ಥೆ ಮಾಡಲಾಗಿತ್ತು, ಬಿಸಿಲಿನ ತಾಪ ಹೆಚ್ಚುವುದರಿಂದ ಶಾಮಿಯಾನ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಇದ್ದುದ್ದರಿಂದ ಬಿಗಿ ಪೊಲೀಸ್ ಬಂದು ಬಸ್ ವ್ಯವಸ್ಥೆ ಮತ್ತು ಟ್ರಾಫಿಕ್ ಇಲಾಖೆಯಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು ಅಂಗಡಿಗಳಲ್ಲಿ ಭಕ್ತಾದಿಗಳು ಹೆಚ್ಚಿನ ವ್ಯಾಪಾರ ನಡೆಯಿತು
ಒಟ್ಟಾರೆ ಸಾವಿರಾರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದಿದ್ದರಿಂದ ದೇವಸ್ಥಾನ ಆಡಳಿತಲ ಮಂಡಳಿ ಪೊಲೀಸ್ ಇಲಾಖೆ ಹೆಚ್ಚುವರಿ ಇದು ಭಕ್ತಾದಿಗಳು ಸರ್ವತೆ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಅನುವು ಮಾಡಿಕೊಟ್ಟಿದ್ದರು