ನಂಜನಗೂಡು:- ಶಾಸಕ ದರ್ಶನ್ ಧ್ರುವನಾರಾಯಣ್ ಅಧಿಕಾರಿಗಳಿಗೆ ಮಾಹಿತಿ ನೀಡದೆ ಶ್ರೀ ಶ್ರೀಕಂಠೇಶ್ವರ ದೇವಾಲಯಕ್ಕೆ ದಿಡೀರ್ ಭೇಟಿ ನೀಡಿ ಸುಮಾರು 2 ಗಂಟೆಗಳ ಕಾಲ ಅಧಿಕಾರಿಗಳ ಜೊತೆ ದೇವಸ್ಥಾನ ಮತ್ತು ಹೊರಗಡೆ ಹಾಗೂ ಕಪಿಲಾ ನದಿ ವಾಹನ ಪಾರ್ಕಿಂಗ್ ಉದ್ಯಾವನ ಭಕ್ತಿ ಮಾರ್ಗ ಮತ್ತು ಮುಕ್ತಿ ಮಾರ್ಗ ಸುತ್ತಮುತ್ತ ಎರಡು ಗಂಟೆಗಳ ಕಾಲ ರೌಂಡ್ ಹಾಕಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ಶಾಸಕ ದರ್ಶನ್ ದ್ರುವ ನಾರಾಯಣ್ ಮಾತನಾಡಿ ಪ್ಲಾಸ್ಟಿಕ್ ಮುಕ್ತ ದೇವಾಲಯ ಆಗಬೇಕು ಪ್ಲಾಸ್ಟಿಕ್ ಉಪಯೋಗಿಸಿದರೆ ದಂಡ ಹಾಕಲು ಸೂಚಿಸಿದರು ಕಪಿಲಾ ನದಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲಿಸಿ ಭಕ್ತಾದಿಗಳು ನದಿಗೆ ಬಿಡುವ ಹಳೆ ಬಟ್ಟೆ ಪ್ಲಾಸ್ಟಿಕ್ ಪದಾರ್ಥಗಳನ್ನು ನದಿಗೆ ಹಾಕುವುದನ್ನು ತಡೆಗಟ್ಟಿ ಎಚ್ಚರಿಕೆ ವಹಿಸಬೇಕು ಅದನ್ನು ಹಾಕಲು ಡಸ್ಟ್ ಬಿನ್ ವ್ಯವಸ್ಥೆ ಮಾಡಬೇಕು ಇರುವ ಪಾರ್ಕಿಂಗ್ ಸ್ಥಳ ಸಾಕಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದಾಗ ಡಾರ್ಮೆಟ್ರಿ ಹಿಂಭಾಗ ಇರುವ ಸ್ಥಳವನ್ನು ಉಪಯೋಗಿಸಿಕೊಳ್ಳಿ ಎಂದರು ದೇವಸ್ಥಾನದ ಹಿಂಭಾಗ ಅಕ್ಕ ಪಕ್ಕ ಯಾವುದೇ ವಾಹನ ಪಾರ್ಕಿಂಗ್ ಮಾಡಬಾರದು ಭಕ್ತಾದಿಗಳಿಗೆ ತೊಂದರೆಯಾಗದ ರೀತಿ ಪಾರ್ಕಿಂಗ್ ವ್ಯವಸ್ಥೆ ಇರಲು ಸೂಚಿಸಿದರು.
ಭಕ್ತಾದಿಗಳು ದೇವಸ್ಥಾನದ ಆನೆಯ ವಿಚಾರವಾಗಿ ಕೇಳಿದಾಗ ಆದಷ್ಟು ಬೇಗ ದೇವಸ್ಥಾನದ ಆನೆಯನ್ನು ತರಲು ಪ್ರಯತ್ನಿಸುತ್ತೇವೆ ಅದಕ್ಕೆ ಸೂಕ್ತ ಸ್ಥಳವನ್ನು ನಿರ್ಮಿಸಿ ನಂತರ ಆನೆಯನ್ನು ತರಿಸಲು ಪ್ರಯತ್ನ ಮಾಡುತ್ತೇನೆ.
ಕಪಿಲಾ ನದಿ ಸ್ವಚ್ಛತೆ ಇಲ್ಲದ ಕಾರಣ ಪಟ್ಟಣದ ಹಲವಾರು ಚರಂಡಿ ನೀರು ಕಪಿಲದೊಂದಿಗೆ ಸೇರುತ್ತಿರುವುದರಿಂದ ಕಪಿಲ ನದಿಯಿಂದ ದೇವರ ಅಭಿಷೇಕಕ್ಕೆ ನೀರನ್ನು ತರಲು ನಿಲ್ಲಿಸಿ ಸುಮಾರು ವರ್ಷಗಳು ಕಳೆದಿವೆ ಬೇರೆ ಕಡೆ ನೀರನ್ನು ತರು ತ್ತಿರುವುದನ್ನು ಗಮನಕ್ಕೆ ತಂದರು ಆದಷ್ಟು ಬೇಗ ಕ್ರಮವಹಿಸಿ ದೇವಸ್ಥಾನದ ಆವರಣದಲ್ಲಿ ನೀರನ್ನು ತರುವ ವ್ಯವಸ್ಥೆ ಮಾಡಲು ಕ್ರಮವಿಸುತ್ತೇನೆ ಎಂದರು
ಇರುವ ಉದ್ಯಾನವನ ಗಳನ್ನು ಸ್ವಚ್ಛತೆಯಿಂದ ಕಾಪಾಡಿ ಉದ್ಯಾನವನ ಅದಕ್ಕೆಟ್ಟಿದೆ ಕುಡುಕರ ತಾಣವಾಗಿದೆ ಇದನ್ನು ಸ್ವಚ್ಛತೆ ಮಾಡಿ ಸೆಕ್ಯೂರಿಟಿ ಗಾರ್ಡುಗಳನ್ನು ನೇಮಿಸಿ, ಉತ್ತಮವಾದ ಉದ್ಯಾನವನ್ನು ಕಾಪಾಡಿಕೊಳ್ಳಿ ಎಂದರು.
ಒಟ್ಟಾರೆ ಶಾಸಕ ದರ್ಶನ್ ಧ್ರುವನಾರಾಯಣ್ ಎರಡು ಗಂಟೆಗಳ ಕಾಲ ದೇವಸ್ಥಾನ ಹೊರಗಡೆ ಸುತ್ತಮುತ್ತ ತಿರುಗಾಡಿ ಭಕ್ತಾದಿಗಳಿಗೋಸ್ಕರ ಸೌಕರ್ಯ ಕಪಿಲಾ ನದಿ ಸ್ವಚ್ಛತೆ ಉದ್ಯಾವನ ಸ್ವಚ್ಛತೆ ಪ್ಲಾಸ್ಟಿಕ್ ಮುಕ್ತ ಪಾರ್ಕಿಂಗ್ ವ್ಯವಸ್ಥೆ ಈ ರೀತಿ ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಬೇಗ ಸೂಕ್ತ ವ್ಯವಸ್ಥೆ ಮಾಡಬೇಕು ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಶ್ರೀ ಶ್ರೀಕಂಠೇಶ್ವರ ದೇವಾಲಯದ ಇಒ ಜಗದೀಶ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬ್ಲಾಕ್ ಅಧ್ಯಕ್ಷ ಸಿಎಂ ಶಂಕರ್ ಮಾಜಿ ನಗರಸಭೆ ಅಧ್ಯಕ್ಷ ಶ್ರೀಧರ್ ಮುಖಂಡರಾದ ಎನ್ ಎ ಮಂಜುನಾಥ್ ರವಿಕುಮಾರ್ ಶಿವಪ್ಪ ಗೋವಿಂದ್ ರಾಜ್ ಹಾಗೂ ಇನ್ನಿತರರು ಇದ್ದರು.