ನಂಜನಗೂಡು:- ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದ ವೇಳೆ ಇದೇ ದೇವಾಲಯದಲ್ಲಿ ಭಕ್ತರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸುವಂತೆ ಭಕ್ತರು ಸ್ವತಃ ದೇವರಿಗೆ ಪತ್ರ ಮೂಲಕ ದೂರು ನೀಡಿ ಮನವಿ ಮಾಡಿರುವ ಸ್ವಾರಸ್ಯಕರ ಘಟನೆ ನಡೆದಿದೆ.
ಈ ರೀತಿ ಹುಂಡಿಯಲ್ಲಿ ಪತ್ತೆಯಾದ ಪತ್ರಗಳಲ್ಲಿ ಈ ರೀತಿ ದೇವರಲ್ಲಿ ಹಲವಾರು ಆವಾಲು ಹೇಳಿಕೊಂಡಿದ್ದಾರೆ ಆ ಪತ್ರಗಳಲ್ಲಿ ನನ್ನ ತಾತ ನನ್ನ ತಂದೆ ನಾನು ಹಾಗೂ ನನ್ನ ಮಗ ಎಲ್ಲರೂ ನಿನ್ನ ಬುಕ್ಕರೆ ಬಹಳ ದೂರದಿಂದ ನಿನ್ನ ಕಾಣಲು ಪ್ರತಿ ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಬರುತ್ತೇವೆ ತಂದೆ ನಿನ್ನ ದುರುಸನದಿಂದ ನಮ್ಮ ಕಷ್ಟಗಳೆಲ್ಲ ದೂರವಾಗಿದೆ ಒಡೆಯ ಆದರೆ ನಿನ್ನ ನೋಡಲು ಬರುವಾಗ ತುಂಬಾ ಕಷ್ಟವಾಗುತ್ತಿದೆ.
ರಾತ್ರಿ ಮಲಗಲು ಚಿಕ್ಕಜಾಗೂ ಇರುವುದಿಲ್ಲ ಬೆಳಗೆ ಸ್ಥಾನಕ್ಕೆ ಕಪಿಲಾ ನದಿಗೆ ಹೋದರೆ ಎಲ್ಲಿ ನೋಡದು ಕಸ ಕಸ ಕಸ ಸ್ವಚ್ಛತೆ ಇಲ್ಲದೆ ಗಬ್ಬು ನಾರುತಿದೆ ಬಂದಿರುವ ಭಕ್ತಾದಿಗಳಿಗೆ ಸ್ನಾನ ಮಾಡಿ ಬಟ್ಟೆ ಬದಲಿಸಲು ಜಾಗವಿಲ್ಲ ಉರುಳು ಸೇವೆ ಮಾಡಲು ವ್ಯವಸ್ಥೆ ಇಲ್ಲ ಇನ್ನು ಅನೇಕ ತೊಂದರೆಗಳು ಎದ್ದು ಕಾಣುತ್ತಿದೆ ಕೋಟಿಗಟ್ಟಲೆ ಆದಾಯ ಇದೆ ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಪುಟ್ಟದ ಮೂಲಕ ಬರೆದಿದ್ದೇನೆ ಏನು ಪ್ರಯೋಜನವಾಗಿಲ್ಲ ನೀನಾದರೂ ಕೆಟ್ಟ ವ್ಯವಸ್ಥೆಯಿಂದ ಪರಿಹಾರ ಕೊಡುವ ತಂದೆ ಎಂದು ಹೇಳಿಕೊಂಡಿದ್ದಾರೆ.
ಇಂದು ಕೋಟ್ಯಾಂತರ ಆದಾಯ ಇರುವ ದೇವಾಲಯ ಭಕ್ತರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತೋರುತ್ತಿರುವ ನಿರ್ಲಕ್ಷ ಧೋರಣೆ ಹೊಡೆದ ಕನ್ನಡಿಯಾಗಿದೆ. ಇದೇ ರೀತಿಯ ಇನ್ನೊಂದು ಪತ್ರದಲ್ಲಿ ಭಕ್ತರು ತಂಗಲು ವ್ಯವಸ್ಥೆ ಇಲ್ಲ ಎಂಬ ಕೊರಗು ಇದೆ ಇನ್ನು ದೇವಾಲಯದ ಸಿಬ್ಬಂದಿಗಳು ಭಕ್ತರನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ ಅವರಿಗೆ ಒಳ್ಳೆಯ ಬುದ್ದಿ ಕೊಡು ಭಕ್ತರಿಂದ ಸಂಗ್ರಹವಾಗುವ ದ ಹಣದಲ್ಲಿ ವಸತಿ ಸಂಕೀರ್ಣ ಆದಷ್ಟು ಬೇಗ ನಿರ್ಮಿಸಲಿ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಲು ಅವರಿಗೆ ಬುದ್ಧಿ ಕೊಡು ಎಂದು ಪತ್ರದ ಮೂಲಕ ತಿಳಿಸಿದ್ದಾರೆ
ಈ ರೀತಿ ಪತ್ರಗಳು ಬೈರಂಗಗೊಂಡಿದ್ದು ಇನ್ನಾದರೂ ನಂಜುಂಡ ದೇವಾಲಯದ ಆಡಳಿತ ವರ್ಗದ ಕಣ್ಣು ತೆರೆಸುವನೇ ಎಂಬುದು ಕಾದು ನೋಡಬೇಕಾಗಿದೆ.
ಒಂದು ಕೋಟಿ 12 ಲಕ್ಷ ಕೋಟಿ ಸಂಗ್ರಹ:
ದೇವಾಲಯದ ದಾಸೋಪಾನದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದ ಸಂದರ್ಭದಲ್ಲಿ ಒಂದು ತಿಂಗಳು ಅವಧಿಯಲ್ಲಿ ಒಂದು ಕೋಟಿ ಹನ್ನೆರಡು ಲಕ್ಷ ರೂ ಹಣ ಸಂಗ್ರಹವಾಗಿರುವುದು ಲೆಕ್ಕಕ್ಕೆ ಸಿಕ್ಕಿದೆ ಇದರ ಜೊತೆಗೆ 51 380 ಗ್ರಾಂ ಚಿನ್ನ ಒಂದು ಕೆಜಿ 800 ಗ್ರಾಂ ಬೆಳ್ಳಿ 46 ವಿದೇಶಿ ಕರೆನ್ಸಿಗಳು ನಂಜುಂಡನಿಗೆ ಕಾಣಿಕೆಯಾಗಿ ಬಂದಿವೆ
ಇಂಡಿಯನ್ ಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಎಇ ಓ ಸತೀಶ್ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ಗುರು ಮಲ್ಲಯ್ಯ ಮುಜರಾಯಿ ತಹಸಿಲ್ದಾರ್ ವಿದ್ಯಾಲಥ ಕೆನರಾ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದರು