ಮೈಸೂರು: ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದು ಸರ್ವಾಧಿಕಾರದ ಪರಮಾವಧಿತನ. ಇವರಿಗೆ ಪ್ರಜಾಪ್ರಭುತ್ವದ ಯಾವ ಆಶಯಗಳ ಮೇಲೂ ನಂಬಿಕೆ ಇಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸಂಸತ್ ಸದಸ್ಯರ ಅಮಾನತು ವಿಚಾರವಾಗಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವಿಪಕ್ಷಗಳ ಮಾತನ್ನು ಕೇಳಿಸಿಕೊಳ್ಳಲ್ಲ ಅಂದರೆ ಅರ್ಥ ಏನು..? ಜನ ಇವರ ನಡವಳಿಕೆ ಗಮನಿಸುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲವ ಎಂಬ ವಾತಾವರಣವನ್ನ ಬಿಜೆಪಿ ಸೃಷ್ಟಿಸುತ್ತಿದೆ. ಮುಂಬರುವ ಚುನಾವಣೆಯಲ್ಲೂ ಜನ ಇದನ್ನಲ್ಲಾ ಪರಿಶೀಲನೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದರು.
ಸಚಿವ ಜಮೀರ್ ಜೊತೆ ಐಷಾರಾಮಿ ಜೆಟ್ನಲ್ಲಿ ಪ್ರಯಾಣ ಮಾಡಿದ ವಿಚಾರ.
ಈ ಕುರಿತ ಪ್ರಶ್ನೆಗೆ ಥಟ್ಟನೆ ಗರಂ ಆದ ಸಿಎಂ ಸಿದ್ದರಾಮಯ್ಯ.
ಮೋದಿ ಯಾವ ಫ್ಲೈಟ್ನಲ್ಲಿ ಓಡಾಡುತ್ತಾರೆ..? ಅವರದು ಐಷಾರಾಮಿ ಫ್ಲೈಟ್ ಅಲ್ವಾ..?ದೇಶದಲ್ಲಿ ಯಾವುದೇ ಸ್ಥಿತಿ ಇದ್ದರೂ ಮೋದಿ ಓಡಾಡುವ ಫ್ಲೈಟ್ ಎಂತದ್ದು. ಮೊದಲು ಅದನ್ನು ಬಿಜೆಪಿಯವರಿಗೆ ಕೇಳಿ ಎಂದರು.
ಕೋವಿಡ್ನಿಂದ ಪ್ರವಾಸಿ ತಾಣಗಳನ್ನ ಬಂದ್ ಮಾಡುವ ವಿಚಾರ ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ. ಆದರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಡಲಾಗಿದೆ. ಮೈಸೂರಿನಲ್ಲಿ ಆರು ಜನರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಅವರಿಗೆ ಟ್ರಾವಲ್ ಹಿಸ್ಟರಿ ಇಲ್ಲ. ಅವರಿಗೆ ಬೇರೆ ಬೇರೆ ರೋಗದ ಹಿನ್ನಲೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಎಲ್ಲರೂ ಕೋವಿಡ್ ನಿಯಮಗಳನ್ನ ಪಾಲನೆ ಮಾಡಿ ಎಚ್ಚರಿಕೆಯಿಂದ ಇರಬೇಕು ಎಂದರು.