ಬೆಂಗಳೂರಿನ ಮಳೆ ಸಮಸ್ಯೆ ಕುರಿತ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲು ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರು ವ್ಯಾಪ್ತಿಯ ಶಾಸಕರು, ಸಂಸದರ ಸಭೆ ಕರೆದಿದ್ದರು. ಆದರೆ, ಸಭೆಗೆ ಡಿಕೆಶಿ 1 ಗಂಟೆ ತಡವಾಗಿ ಬಂದ ಕಾರಣ, ಬಿಜೆಪಿಯ ಕೆಲ ಶಾಸಕರು ಸಭೆಯಿಂದ ಎದ್ದು ಹೊರ ನಡೆದರು. ಈ ವೇಳೆ ಜಮೀರ್ ಅಹ್ಮದ್ ಖಾನ್ ಅವರನ್ನು ಸಭೆಗೆ ಮನವೊಲಿಸಿ ಕರೆಯುವ ಯತ್ನವೂ ನಡೆಸಿದರು.
ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಬೇಕಾದ ಸರ್ವ ಪಕ್ಷಗಳ ಸಭೆಗೆ ಬಿಜೆಪಿ ಶಾಸಕರು ಬಹಿಷ್ಕಾರ ಹಾಕಿದ್ದಾರೆ.
ಸೋಮವಾರ 11 ಗಂಟೆಗೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಗೆ ವಿರೋಧ ಪಕ್ಷ ಬಿಜೆಪಿ ಶಾಸಕರು ಆಗಮಿಸಿದ್ದರು, ಮಾಜಿ ಸಚಿವ ಅಶ್ವತ್ಥ ನಾರಾಯಣ, ಬೈರತಿ ಬಸವರಾಜು, ಎಸ್ ಟಿ ಸೋಮಶೇಖರ್, ಮುನಿರತ್ನ, ಎಸ್ ಆರ್ ವಿಶ್ವನಾಥ್ ಆಗಮಿಸಿದ್ದರು.
ಆದರೆ 11 ಗಂಟೆಗೆ ಶುರುವಾಗಬೇಕಾದ ಸಭೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಒಂದು ಗಂಟೆ ತಡವಾಗಿ ಆಗಮಿಸಿದರು. ಇದರಿಂದ ಅಸಮಾಧಾನಗೊಂಡ ಮಾಜಿ ಸಚಿವರು ಹಾಗೂ ಶಾಸಕರು ಡಿಸಿಎಂ ನಡವಳಿಕೆ ಸಿಟ್ಟಾಗಿ ಸಭೆ ಆರಂಭಕ್ಕೂ ಮೊದಲೇ ಹೊರನಡೆದರು.
ಮನವೊಲಿಕೆಗೆ ಯತ್ನಿಸಿದ ಜಮೀರ್: ಸಭೆ ವಿಳಂಬ ಕಾರಣಕ್ಕಾಗಿ ಸಭೆ ಆರಂಭಕ್ಕೂ ಮೊದಲು ಹೊರ ನಡೆದ ಬಿಜೆಪಿ ಶಾಸಕರ ಮನವೊಲಿಕೆ ಮಾಡಲು ಸಚಿವ ಜಮೀರ್ ಅಹ್ಮದ್ ಖಾನ್ ಯತ್ನಿಸಿದರು. ವಿಧಾನಸೌಧ ಕಾರಿಡಾರ್ನಲ್ಲಿ ಏ ಸೋಮಣ್ಣ, ಏ ಮುನಿ ಬಾ, ಬಾ ಎಂದು ಕರೆದುಕೊಂಡು ಅವರ ಹಿಂದೆಯೇ ಹೋಗಿ ನಿಂತುಕೊಳ್ಳುವAತೆ ಕರೆದರು. ಆದರೆ ಶಾಸಕರು ಹೊರ ನಡೆದರು. ಸಭೆಯಿಂದ ಹೊರ ನಡೆಯುತ್ತಿದ್ದ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಭೆಗೆ ಆಗಮಿಸಿದರು.
ಇದರ ಬಳಿಕ ಮಾತನಾಡಿದ ಮಾಜಿ ಸಚಿವ ಅಶ್ವತ್ಥ ನಾರಾಯಣ, ಬೆಂಗಳೂರಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ಸಲುವಾಗಿ ಸಭೆ ಕರೆಯಲಾಗಿತ್ತು. ನಮಗೆ ಸಭೆಗೆ ಕರೆದು ಒಂದು ಗಂಟೆಯಿAದ ಡಿ.ಕೆ ಶಿವಕುಮಾರ್ ಕಾಯಿಸಿದ್ದಾರೆ. ಸಭೆಗೆ ತಡವಾಗಿ ಆಗಮಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದರೆ ತಡವಾಗಿ ಆಗಮಿಸುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ನಿನ್ನೆ ಸಂಜೆ ವಾಟ್ಸಪ್ ಮೂಲಕ ಸಭೆಗೆ ಆಹ್ವಾನ ನೀಡಿದ್ದಾರೆ. ಈ ಮೂಲಕ ಉದ್ದೇಶಪೂರ್ವಕವಾಗಿ ಅವರ ನಡುವಳಿಕೆ ಪ್ರದರ್ಶಿಸಿದ್ದಾರೆ. ಹೀಗಾಗಿ ಸಭೆಯಿಂದ ನಿರ್ಗಮಿಸುತ್ತಿದ್ದೇವೆ ಎಂದರು.
ಬೆAಗಳೂರು ಸಮಗ್ರ ಅಭಿವೃದ್ಧಿ ಸಂಬAಧ ಸಮಾಲೋಚನೆ ನಡೆಸಲು ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಬೆಂಗಳೂರು ನಗರದ ಎಲ್ಲ ಶಾಸಕರು, ಸಂಸದರು, ಎಂಎಲ್ಸಿಗಳ ಸಭೆಯಲ್ಲಿ ಸಚಿವರಾದ ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್, ಸಂಸದರಾದ ಡಿ ಕೆ ಸುರೇಶ್, ತೇಜಸ್ವಿ ಸೂರ್ಯ, ಪಿ ಸಿ ಮೋಹನ್, ರಾಜ್ಯಸಭೆ ಸದಸ್ಯರಾದ ಜಿ ಸಿ ಚಂದ್ರಶೇಖರ್, ಶಾಸಕರಾದ ರಿಜ್ವಾನ್ ಅರ್ಶದ್, ಎ ಸಿ ಶ್ರೀನಿವಾಸ್, ಎ ಕೃಷ್ಣಪ್ಪ, ರವಿ ಸುಬ್ರಮಣ್ಯ, ಟಿ ಎ ಶರವಣ, ಗೋಪಾಲಯ್ಯ, ಗರುಡಾಚಾರ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜ್, ನಜೀರ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು. ಪ್ರವಾಹ ತಡೆಯುವ ಬಗ್ಗೆ, ತುರ್ತು ಕ್ರಮಗಳ ಅಗತ್ಯಗಳ ಬಗ್ಗೆ ಚರ್ಚಿಸಿದರು.