ಎಸ್ ಮಂಜು ಮಳವಳ್ಳಿ
ಮಳವಳ್ಳಿ: ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆಯು ನೋಡಲು ಆಕರ್ಷಕವಾಗಿದ್ದು ಬೆಂಗಳೂರಿಂದ ಮೈಸೂರಿಗೆ ಹೋಗಲು ಕೇವಲ ಒಂದುವರೆ ತಾಸು ಮಾತ್ರ ಬೇಕಾಗಿದ್ದು ಪ್ರಯಾಣಿಕರು ಹೆಚ್ಚು ಈ ರಸ್ತೆಯನ್ನೇ ಅವಲಂಬಿಸಿಕೊಂಡಿದ್ದಾರೆ .
ಬೆಂಗಳೂರಿನಿಂದ ಮೈಸೂರಿಗೆ ಮೈಸೂರಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಈ ರಸ್ತೆಯಲ್ಲಿ ನಾವು ನಮ್ಮ ಸ್ಥಳವನ್ನು ತಲುಪುತ್ತೇವೆಯೇ ? ಎಂಬ ಆತಂಕಲ್ಲಿ ಜೀವ ಬಿಗಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ .
ಕಾರಣ ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆಯಲ್ಲಿ ಪ್ರತಿನಿತ್ಯ ಅಪಘಾತಗಳ ಸಂಖ್ಯೆ ಹೆಚ್ಚಾಗ ತೊಡಗಿದೆ ಸಾವಿನ ಸಂಖ್ಯೆ ಸಾವಿರ ಗಡಿ ಮೀರುತ್ತಿದೆ .
ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಜೀವಕ್ಕೆ ಬೆಲೆಯೇ ಇಲ್ಲದಂತೆ ಹೆದ್ದಾರಿ ಪ್ರಾದಿಕಾರ ರಾಜ್ಯ ಸರ್ಕಾರ
ಹೆದ್ದಾರಿಯಲ್ಲಿ ಬರುವ ಜಿಲ್ಲಾ ಕೇಂದ್ರಗಳಾದ ಬೆಂಗಳೂರು ರಾಮನಗರ ಮಂಡ್ಯ ಮೈಸೂರು ಜಿಲ್ಲಾ ಆಡಳಿತಗಳು ಪ್ರಯಾಣಿಕರ ಸುರಕ್ಷತೆ ಕಾಪಾಡುವಲ್ಲಿ ಹಾಗೂ ಸಾವು ನೋವುಗಳನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಈ ರಸ್ತೆಯಲ್ಲಿ ಅಪಘಾತ ಸಂಭವಿಸಿ ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ ಅಲ್ಲದೆ ಹೆದ್ದಾರಿ ಪ್ರಾಧಿಕಾರ ರಾಜ್ಯ ಸರ್ಕಾರ ಜಿಲ್ಲಾ ಆಡಳಿತಗಳಿಗೆ ಇಡಿ ಶಾಪ ಹಾಕುತ್ತಿದ್ದಾರೆ.
ಭಾನುವಾರ ಮುಂಜಾನೆ ಬೈಕಿ ನಲ್ಲಿ ಹೋಗುತ್ತಿದ್ದ ಮದ್ದೂರು ಪ್ಲೇ ಓವರ್ ನಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ .
ಈ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಜೀವಗಳೇ ಹೋದ ಮೇಲೆ ಈ ಕುಟುಂಬಕ್ಕೆ ಆಧಾರ ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ .
ಹೆದ್ದಾರಿ ಪ್ರಾದಿಕಾರ ರಾಜ್ಯ ಸರ್ಕಾರ ಹೆದ್ದಾರಿಯಲ್ಲಿ ಬರುವ ಜಿಲ್ಲಾ ಕೇಂದ್ರಗಳಾದ ಬೆಂಗಳೂರು ರಾಮನಗರ ಮಂಡ್ಯ ಮೈಸೂರು ಜಿಲ್ಲಾ ಆಡಳಿತಗಳು ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆಯಲ್ಲಿ ಅಪಘಾತ ತಡೆಗಟ್ಟುವಲ್ಲಿ ವಿಫಲವಾಗಿರುವುದರಿಂದ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ .
ಮೃತ ಕುಟುಂಬದವರ ನೋವು ವೇದನೆ ಆಕ್ರಂದನ ಇವರುಗಳ ಶಾಪ ಎಂದು ಸುಮ್ಮನೆ ಬಿಡುವುದಿಲ್ಲ ಎಂಬ ಮೃತರ ಅಳಲಾಗಿದೆ .
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಕೆನರ ಅನುಕೂಲಕ್ಕಾಗಿ ಈ ರಸ್ತೆಯನ್ನು ಉದ್ಘಾಟಿಸಿ ಹೋಗಿದ್ದಾರೆ ಆದರೆ ಈ ರಸ್ತೆಯು ದಿನೇ ದಿನೇ ಮೃತ್ಯು ಕೋಪವಾಗುತ್ತಿದೆ.
ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆಯಲ್ಲಿ ಪ್ರಯಾಣಿಕರು ಸಂಚರಿಸುವುದಕ್ಕೆ ಬೆಚ್ಚಿ ಬೀಳುತ್ತಿದ್ದಾರೆ ಜೀವ ಇದ್ದರೆ ಇಂತಹ ಹತ್ತು ರಸ್ತೆಗಳಲ್ಲಿ ಓಡಾಟ ನಡೆಸಬಹುದು ಜೀವವೇ ಇಲ್ಲದೆ ಹೋದರೆ ಯಾವ ರಸ್ತೆಯಲ್ಲಿ ಸಂಚಾರ ಮಾಡೋದು ಎಂಬ ಆತಂಕ ಎದುರಾಗಿದೆ .
ಮುಂದಿನ ದಿನಗಳಲ್ಲಿ ಮೈಸೂರು ಬೆಂಗಳೂರು ಹೆದ್ದಾರಿ ರಸ್ತೆಯಲ್ಲಿ ಅಪಘಾತ ಹಾಗೂ ಸಾವು ನೋವು ತಡೆಗಟ್ಟುವಲ್ಲಿ ಹೆದ್ದಾರಿ ಪ್ರಾದಿಕಾರ ರಾಜ್ಯ ಸರ್ಕಾರ
ಹೆದ್ದಾರಿಯಲ್ಲಿ ಬರುವ ಜಿಲ್ಲಾ ಕೇಂದ್ರಗಳಾದ ಬೆಂಗಳೂರು ರಾಮನಗರ ಮಂಡ್ಯ ಮೈಸೂರು ಜಿಲ್ಲಾ ಆಡಳಿತಗಳು ಯಾವ ಕ್ರಮ ಕೈಗೊಳ್ಳುವರು ಎಂಬುದನ್ನು
ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಕಾದು ನೋಡುತ್ತಿದ್ದಾರೆ .
ಸರಣಿ ಅಪಘಾತಗಳ: ಸಾವುಗಳ ತಾಣವಾಗುತ್ತಿರುವ ಬೆಂಗಳೂರು-ಮೈಸೂರು ಹೆದ್ದಾರಿ
