ಬಳ್ಳಾರಿ: ಇಲ್ಲಿನ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯ ಭದ್ರತಾ ಇನ್ಸ್ ಫೆಕ್ಟರ್ ಹುಸೇನಪ್ಪ (54)ನನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಬೀದರ್ ನಲ್ಲಿ ನಡೆಯುತ್ತಿದ್ದ ಚಾಲಕರ ನೇಮಕಾತಿ ಕಾರ್ಯಕ್ಕೆ ರಾತ್ರಿ 8.30 ರ ಸುಮಾರಿಗೆ ಸೆಂಟ್ರಲ್ ಜೈಲ್ ಹಿಂಭಾಗದ ಪ್ರದೇಶದಲ್ಲಿದ್ದ ಮನೆಯಿಂದ ಸ್ಕೂಟರ್ ನಲ್ಲಿ ಬಸ್ ನಿಲ್ದಾಣಕ್ಕೆ ಹೊರೆಟ ಹುಸೇನಪ್ಪ. ಅವರನ್ನು ಮನೆಯಿಂದ ಅನತಿ ದೂರದಲ್ಲಿ
ದುಷ್ಕರ್ಮಿಗಳು ಬೆನ್ನತ್ತಿ ತಲೆಗೆ ರಾಡ್ ಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಂ.ಎ ನಟರಾಜ್ ಅವರು ಸಂಜೆವಾಣಿಗೆ ತಿಳಿಸಿದ್ದಾರೆ.
ತಲೆಗೆ ತೀವ್ರಪೆಟ್ಟಾಗಿ ರಕ್ತ ಸ್ರಾವ ಆಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹುಸೇನಪ್ಪ. ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಕೊಲೆಯ ಕಾರಣದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಹುಸೇನಪ್ಪ ಮೂಲತಃ ರಾಯಚೂರು ಜಿಲ್ಲೆಯವರು ಕಳೆದ 20 ವರ್ಷಗಳ ಹಿಂದೆ ಬಳ್ಳಾರಿಗೆ ಬಂದು ನೆಲಸಿದ್ದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.
ಸಾರಿಗೆ ಸಂಸ್ಥೆಯ ಭದ್ರತಾ ಇನ್ಸ್ಪೆಕ್ಟರ್ ಹುಸೇನಪ್ಪನ ಕೊಲೆ
