ತಿ.ನರಸೀಪುರ:- ವಿಳಾಸ ಕೇಳುವ ನೆಪದಲ್ಲಿ ಶಾಲಾ ಬಾಲಕನೊಬ್ಬನನ್ನು ಹಾಡಹಗಲೇ ಅಪಹರಿಸುವ ವಿಫಲ ಯತ್ನ ಪಟ್ಟಣದ ತ್ರಿವೇಣಿ ನಗರದಲ್ಲಿ ನಡೆದಿದ್ದು, ಸೀನಿಮಿಯ ರೀತಿಯಲ್ಲಿ ಬಾಲಕ ತಪ್ಪಿಸಿಕೊಂಡಿದ್ದಾನೆ.
ಪಟ್ಟಣದ ತ್ರಿವೇಣಿನಗರದ ವಾಸಿ ಅಭಿಷೇಕ್ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಓಮಿನಿ ಕಾರ್ ನಲ್ಲಿ ಬಂದ ದುಷ್ಕರ್ಮಿಗಳು ಬಾಲಕ ಹತ್ತಿರ ಬಂದು ವಿಳಾಸ ಕೇಳುವ ನೆಪದಲ್ಲಿ ಬಾಲಕನಿಗೆ ಮತ್ತು ಬರುವ ಔಷದ ಸಿಂಪಡಿಸಿ ಬಾಲಕನನ್ನು ಪ್ರಜ್ಞೆ ತಪ್ಪಿಸಿ ಓಮಿನಿಯಲ್ಲಿ ಕರೆದೊಯ್ದಿದ್ದಾರೆ.ಬಾಲಕನಿಗೆ ಪ್ರಜ್ಞೆ ಬಂದಾಗ ಮೂತ್ರ ಮಾಡಲು ಒತ್ತಾಯಿಸಿ ಕಾರಿನಿಂದ ಇಳಿದು ಆರ್ಯಮಹಲ್ ಕಲ್ಯಾಣ ಮಂಟಪದ ಸಮೀಪ ಅಪಹರಣಕಾರರ ಹಿಡಿತದಿಂದ ತಪ್ಪಿಸಿಕೊಂಡು ಓಡಿ ಬರುತ್ತಿದ್ದದ್ದನ್ನು ಕಂಡ ದಾರಿಹೋಕರು ಬಾಲಕನನ್ನು ವಿಚಾರಿಸಿ ಪೆÇಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.ಓಮಿನಿಲ್ಲಿದ್ದ ನಾಲ್ಕು ದುಷ್ಕರ್ಮಿಗಳು ಪರಾರಿಯಾಗಿದ್ದರೆಂದು ತಿಳಿದುಬಂದಿದೆ.
ಈ ಬಗ್ಗೆ ತಿ.ನರಸೀಪುರ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು,ತನಿಖೆ ಪ್ರಗತಿಯಲ್ಲಿದೆ.
ಸೀನಿಮಿಯ ರೀತಿಯಲ್ಲಿ ಬಾಲಕನ ಅಪರಣಕ್ಕೆ ಯತ್ನ
