ಮಂಡ್ಯ: ಅಧಿಕಾರ ಸಿಗುತ್ತಲೇ ಹಣ ಮಾಡಬೇಕೆಂಬ ಭಾವನೆ ಕೆಲವರಿಗೆ ಬರುತ್ತದೆ. ಇಂತಹ ಭಾವನೆ ಇರೋ ಸರ್ಕಾರ ಕಳೆದ ಮೂರೂವರೆ ವರ್ಷದ ಹಿಂದೆ ರಚನೆ ಆಗಿದೆ. ಶಾಸಕರನ್ನು ಖರೀದಿಸಿ ಸರ್ಕಾರವನ್ನು ರಚಿಸಿದ್ದು, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿ ಜನರಿಂದ ವಸೂಲಿ ಮಾಡುತ್ತಿದೆ ಎಂದರು.
ಈ ಸರ್ಕಾರ ಶೇ. 40 ಪರ್ಸಂಟೇಜ್ ಸರ್ಕಾರ ಎಂದೇ ಗುರುತಿಸಿಕೊಂಡಿದೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಬೆಲೆ ಏರಿಕೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ರೈತರ ಎಲ್ಲ ವಸ್ತುಗಳ ಮೇಲೆ ಜಿಎಸ್ಟಿ ಹಾಕಲಾಗಿದೆ. ಎಲ್ಲ ಹಂತದಲ್ಲೂ ರೈತರು, ಮಹಿಳೆಯರಿಗೆ ಮೋಸ ಆಗಿದೆ. 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದನ್ನು ತುಂಬಿಕೊಳ್ಳುವ ಕೆಲಸ ಸರ್ಕಾರ ಮಾಡಿಲ್ಲ. ಪಿಎಸ್ಐ ನೇಮಕಾತಿಯಲ್ಲಿ ಅವ್ಯವಹಾರ ಆಗಿದೆ. ಶಾಸಕನ ಪುತ್ರರ ಬಳಿ 8 ಕೋಟಿ ರೂ. ಸಿಕ್ಕರೂ ಯಾವುದೇ ಶಿಕ್ಷೆ ಆಗಿಲ್ಲ. ಶೇ. 40 ಪರ್ಸಂಟೇಜ್ ಬಗ್ಗೆ ಗುತ್ತಿಗೆದಾರ ಸಂಘ ಪ್ರಧಾನ ಮಂತ್ರಿಗಳೀಗೆ ಪತ್ರ ಬರೆದರೂ ಯಾವುದೇ ಕ್ರಮ ಆಗಿಲ್ಲ. ಮುಂದಿನ ಬಾರಿಯೂ ಇದೇ ಸರ್ಕಾರ ಇರಬೇಕೋ ಬದಲಾವಣೆ ಮಾಡಬೇಕೋ ಎಂಬುದನ್ನು ನೀವೇ ನಿರ್ಧಾರ ಮಾಡಬೇಕು ಎಂದು ಹೇಳಿದರು.
ನಾನು ನೋಡಿದ ಹಾಗೆ ಕರ್ನಾಟಕದ ಜನತೆ ಬಹಳ ವಿದ್ಯಾವಂತರು. ಪ್ರಸ್ತುತ ಯಾರನ್ನು ಮಾತನಾಡಿಸಿದರೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ಬಹಳ ಕಷ್ಟ ಎನ್ನುತ್ತಿದ್ದಾರೆ. ನೀರು ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಆದರೆ, ಈ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರಿಗೆ ಹೊರೆ ಮಾಡಿದೆ ಎಂದು ಎಐಸಿಸಿ ಪ್ರಧಾನ ಕರ್ಯದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲ್ಲು ಕಟ್ಟಡ) ಆವರಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯನ್ನು ಉದ್ಘಾಟಿಸಿ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸಿ ಮಾತನಾಡಿದ ಅವರು,ಪ್ರತಿಯೊಂದರಲ್ಲೂ ಹಗರಣ, ಲೂಟಿ ಲೂಟಿ. ರೈತರಿಗೆ ಅಗತ್ಯವಾಗಿ ಬೇಕಾಗಿರುವ ಗೊಬ್ಬರ ಕೊಡಬೇಕಾದರೂ ಲಂಚ ನೀಡಬೇಕಾಗಿದೆ. ಕರ್ನಾಟಕ ರೈತರ ನಾಡು. ಆದರೆ, ಪ್ರತಿ ಎಕರೆಗೆ 25 ಸಾವಿರ ತೆರಿಗೆ, ಜಿಎಸ್ಟಿ ಹಾಕಲಾಗುತ್ತಿದೆ. ಟ್ರಾö್ಯಕ್ಟರ್ ಕೊಳ್ಳಲೂ ಶೇ. 12ರಷ್ಟು ತೆರಿಗೆ ಕಟ್ಟಬೇಕಾಗಿದೆ. ಅಧಿಕಾರಕ್ಕೆ ಬರುವ ಮುನ್ನ ರೈತರ ಬದುಕನ್ನು ಹಸನು ಮಾಡುವುದಾಗಿ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ, ಪ್ರತಿಯೊಂದರಲ್ಲೂ ಶೇ.2ರಷ್ಟು ಬೆಲೆ ಹೆಚ್ಚಳ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿರುದ್ಯೋಗ ಸಮಸ್ಯೆ:
ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಯುವಕರ ಭವಿಷ್ಯ ಕ್ಷೀಣಿಸುತ್ತಿದೆ. ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಣ್ಣ ಸಣ್ಣ ಕಾರ್ಖಾನೆಗಳು ಮುಚ್ಚಿವೆ. 1.5 ಲಕ್ಷ ಕೋಟಿ ರೂ. ಲೂಟಿ ಮಾಡಿದ್ದಾರೆ. ಕೇವಲ ಲೂಟಿಯಾದರೆ ಇನ್ನೆಲ್ಲಿಂದ ಅಭಿವೃದ್ಧಿ ಮಾಡಲು ಸಾಧ್ಯ, ಇಂತಹ ಸರ್ಕಾರ ನಿಮಗೆ ಬೇಕಾ ಎಂದು ಪ್ರಶ್ನಿಸಿದರು.
ವೇದಿಕೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಂಸದೆ ರಮ್ಯಾ, ರಾಜ್ಯ ಸಭಾ ಸದಸ್ಯ ಹಾಗೂ ಜಿಲ್ಲಾ ಉಸ್ತುವಾರಿ ಜಿ.ಸಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಅಭ್ಯರ್ಥಿಗಳಾದ ಎನ್. ಚಲುವರಾಯಸ್ವಾಮಿ, ಪಿ.ಎಂ.ನರೇAದ್ರಸ್ವಾಮಿ, ಗಣಿಗ ರವಿಕುಮಾರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ನೆಟ್ಟಾ ಡಿಸೋಜ, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಅಮರಾವತಿ ಚಂದ್ರಶೇಖರ್, ಡಾ. ಎಚ್.ಕೃಷ್ಣ, ಅಪ್ಪಾಜಿ, ಹಾಲಹಳ್ಳಿ ಅಶೋಕ್, ಇತರರು ಉಪಸ್ಥಿತರಿದ್ದರು.