ಸೌತೆಕಾಯಿ ಅತ್ಯಂತ ಆರೋಗ್ಯಕರ ತರಕಾರಿಗಳಲ್ಲೊಂದು. ಸೌತೆಕಾಯಿಯಲ್ಲಿ ಬಹಳಷ್ಟು ನೀರು ಇರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಸೌತೆಕಾಯಿಯನ್ನು ಸಲಾಡ್ ಅಥವಾ ಸಂಜೆಯ ಸ್ನಾಕ್ಸ್ಗೆ ಸೇವಿಸಲಾಗುತ್ತದೆ. ದೇಹವನ್ನು ಹೈಡ್ರೇಟ್ ಆಗಿಡಲು ಸೌತೆಕಾಯಿ ತಿನ್ನುವುದು ಬಹಳ ಮುಖ್ಯ.
ಸೌತೆಕಾಯಿಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಕೆ, ಪೆÇಟ್ಯಾಸಿಯಮ್ ಮತ್ತು ತಾಮ್ರವು ಸಮೃದ್ಧವಾಗಿದೆ. ಆದ್ದರಿಂದ ಇದನ್ನು ತಿಂದ ನಂತರ ಇಡೀ ದಿನ ಹೈಡ್ರೇಟೆಡ್ ಆಗಿರುತ್ತೀರಿ. ದೇಹಕ್ಕೆ ಪೆÇೀಷಕಾಂಶಗಳ ಕೊರತೆಯ ಜೊತೆಗೆ ರೋಗಗಳಿಂದ ಮುಕ್ತಿ ಸಿಗುತ್ತದೆ. ಆದರೆ ಸೌತೆಕಾಯಿಯನ್ನು ಎಲ್ಲಾ ಸಮಯದಲ್ಲೂ ತಿನ್ನುವಂತಿಲ್ಲ. ಸರಿಯಾದ ಸಮಯದಲ್ಲಿ ಸೇವನೆ ಮಾಡಿದರೆ ಮಾತ್ರ ಇದರಿಂದ ಅನುಕೂಲಗಳಾಗುತ್ತವೆ.
ಪೌಷ್ಟಿಕಾಂಶ-ಭರಿತ ಸೌತೆಕಾಯಿಯನ್ನು ನಾವು ಹಸಿಯಾಗಿಯೇ ತಿನ್ನುತ್ತೇವೆ. ಇದನ್ನು ಸಲಾಡ್ಗಳಲ್ಲಿ ಇತರ ತರಕಾರಿಗಳೊಂದಿಗೆ ಬೆರೆಸಿ ತಿನ್ನಲಾಗುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ ಮತ್ತು ಆಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಅದಕ್ಕಾಗಿಯೇ ತಿನ್ನಲು ತುಂಬಾ ತಂಪಾಗಿರುತ್ತದೆ. ಇದರಲ್ಲಿ ಹಲವು ರೀತಿಯ ಪೆÇೀಷಕಾಂಶಗಳಿದ್ದು, ದೇಹ ಮತ್ತು ಮನಸ್ಸನ್ನು ತಂಪಾಗಿರಿಸುತ್ತದೆ.
ರಾತ್ರಿ ಊಟದ ಜೊತೆ ಸೌತೆಕಾಯಿಯನ್ನು ತಿನ್ನುವವರು ಬಹಳ ಮಂದಿ ಇದ್ದಾರೆ. ಆದರೆ ರಾತ್ರಿ ಸೌತೆಕಾಯಿ ತಿನ್ನಬಾರದು. ಸೌತೆಕಾಯಿ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ಹೊಟ್ಟೆಗೆ ತುಂಬಾ ಭಾರವಾಗಿರುತ್ತದೆ. ಅದು ನಿದ್ರೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸೌತೆಕಾಯಿಯಲ್ಲಿ ನೀರು ಹೇರಳವಾಗಿರುವುದರಿಂದ ರಾತ್ರಿ ಇದನ್ನು ತಿಂದು ಮಲಗಿದರೆ ಹಲವು ಬಾರಿ ಮೂತ್ರವಿಸರ್ಜನೆಗೆ ಏಳಬೇಕಾಗಬಹುದು.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರಿಗೆ ಸೌತೆಕಾಯಿ ಹಾನಿಕಾರಕ. ಅವರು ಅದನ್ನು ತಿನ್ನುವುದನ್ನು ತಪ್ಪಿಸಬೇಕು. ಕ್ಯುಕುರ್ಬಿಟಾಸಿನ್ ಎಂಬ ಪ್ರಬಲ ಅಂಶವು ಸೌತೆಕಾಯಿಯಲ್ಲಿ ಕಂಡುಬರುತ್ತದೆ, ಇದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಜೀರ್ಣಕ್ರಿಯೆಯಲ್ಲಿ ಸ್ವಲ್ಪ ತೊಂದರೆಯಾದರೆ ಗ್ಯಾಸ್ ಸಮಸ್ಯೆ ಕಾಡುತ್ತದೆ.