ಬೆಂಗಳೂರು: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ಗೆ ಪ್ರವಾಸ ತೆರಳಿದ್ದ ವೇಳೆ ಹೃದಯಾಘಾತದಿಂದ ಹಠಾತ್ ನಿಧನರಾದ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹದ ಹಸ್ತಾಂತರ ಪ್ರಕ್ರಿಯೆ ಇಂದು ಮಧ್ಯಾಹ್ನವಾಗಲಿದೆ ಎಂದು ಅವರ ಕುಟುಂಬಸ್ಥರಿAದ ಮಾಹಿತಿ ಸಿಕ್ಕಿದೆ.
ಸ್ಪಂದನಾ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಮಧ್ಯಾಹ್ನದ ವೇಳೆಗೆ ಕಸ್ಟಮ್ಸ್? ಕ್ಲಿಯರೆನ್ಸ್? ಬಳಿಕ ಸ್ಪಂದನಾ ಮೃತದೇಹ ಹಸ್ತಾಂತರ ಪ್ರಕ್ರಿಯೆ ಮುಗಿಯಲಿದೆ. ಥೈಲ್ಯಾಂಡ್ನಿAದ ಇಂದು ಸಂಜೆ 7 ಗಂಟೆಗೆ ವಿಮಾನದಲ್ಲಿ ರವಾನೆ ಆಗಲಿದೆ. ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ ತಲುಪಲಿದೆ.
ನಂತರ ಸ್ಪಂದನಾ ಅಂತ್ಯಕ್ರಿಯೆ, ಅಂತಿಮ ವಿಧಿ ವಿಧಾನಗಳನ್ನು ಬೆಂಗಳೂರಿನಲ್ಲಿಯೇ ನಡೆಸಲಾಗುತ್ತದೆಯೇ ಅಥವಾ ಮಂಗಳೂರು ಸಮೀಪ ಬೆಳ್ತಂಗಡಿಗೆ ಕೊಂಡೊಯ್ಯಲಾಗುತ್ತದೆಯೇ ಎಂಬುದನ್ನು ಕುಟುಂಬಸ್ಥರು ನಿರ್ಧರಿಸಲಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಸ್ಪಂದನಾ ಚಿಕ್ಕಪ್ಪ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್, ನಾಳೆ ರಾತ್ರಿ ಬೆಂಗಳೂರಿಗೆ ಸ್ಪಂದನಾ ಮೃತದೇಹ ತಲುಪಲಿದೆ. ಬುಧವಾರ ಸ್ಪಂದನಾ ಅಂತ್ಯ ಸಂಸ್ಕಾರ ನೆರವೇರಲಿದೆ. ಅಂತ್ಯಕ್ರಿಯೆಯ ಸ್ಥಳದ ಬಗ್ಗೆ ವಿಜಯ್ ?ರಾಘವೇಂದ್ರ ಅವರ ತೀರ್ಮಾನವೇ ಅಂತಿಮ ಎಂದಿದ್ದಾರೆ.
ಸದ್ಯ ವಿಜಯ್ ರಾಘವೇಂದ್ರ ಹಾಗೂ ಕುಟುಂಬ ಬ್ಯಾಂಕಾಕ್??ನಲ್ಲೇ ಇದೆ. ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ಸಂಜೆ ಅಥವಾ ರಾತ್ರಿ ಬ್ಯಾಂಕಾಕ್?ನಿAದ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.
ಸ್ಪಂದನಾ ಹಾಗೂ ವಿಜಯ ರಾಘವೇಂದ್ರ 26 ಆಗಸ್ಟ್ 2007ರಂದು ಮದುವೆ ಆಗಿದ್ದರು. ಸ್ಪಂದನಾ ತಂದೆ ನಿವೃತ್ತ ಸಹಾಯಕ ಕಮಿಷನರ್ ಬಿಕೆ ಶಿವರಾಮ್ ಅವರ ಪುತ್ರಿ. ದಂಪತಿಗೆ ಶೌರ್ಯ ಎಂಬ ಮಗ ಇದ್ದಾನೆ.
ಸ್ಪಂದನಾ ಮೃತದೇಹ ಹಸ್ತಾಂತರ, ರಾತ್ರಿ ಬೆಂಗಳೂರಿಗೆ ಪಾರ್ಥಿವ ಶರೀರ
