ಮಾಂಸಾಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ. ಮಾಂಸಾಹಾರಿ ಖಾದ್ಯಗಳಲ್ಲಿ ಮಟನ್ ಬಿರಿಯಾನಿಯೂ ಒಂದು. ಮಟನ್ ಬಿರಿಯಾನಿ ಕಡಿಮೆ ಪ್ರಮಾಣದ ಮಸಾಲೆಯನ್ನು ಬಳಸಲಾಗುತ್ತದೆ. ಅತಿಥಿಗಳು ಬಂದಾಗ ಅಥವಾ ನಾಲಿಗೆ ಬಿರಿಯಾನಿ ತಿನ್ನಲು ಬಯಸಿದಾಗ ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಮಟನ್ ಬಿರಿಯಾನಿಯನ್ನು ತಯಾರಿಸಬಹುದಾಗಿದೆ. ಇಂದೆ ಈ ರುಚಿಯಾದ ಮಟನ್ ಬಿರಿಯಾನಿ ಮಾಡಲು ಇಲ್ಲಿದೆ ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು:
* ಕುರಿ ಮಾಂಸ-1 ಕೆ.ಜಿ
* ಅಕ್ಕಿ- ಅರ್ಧ ಕೆಜಿ
* ಶುಂಠಿ,ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
* ಕೊತ್ತಂಬರಿಸೊಪ್ಪು, ಪುದಿನಸೊಪ್ಪು- ಸ್ವಲ್ಪ
* ಹಸಿಮೆಣಸಿನಕಾಯಿ-2
* ಮೊಸರು- ಅರ್ಧ ಕಪ್
* ಖಾರದಪುಡಿ- 1 ಚಮಚ
* ಕೊತ್ತಂಬರಿಪುಡಿ- 1 ಚಮಚ
* ಅರಿಸಿಣ ಪುಡಿ -ಸ್ವಲ್ಪ
* ಬಿರಿಯಾನಿ ಮಸಾಲೆ- 1 ಚಮಚ
* ಗೋಡಂಬಿ – ಸ್ವಲ್ಪ
* ಕಾಳುಮೆಣಸು -ಸ್ವಲ್ಪ
* ಏಲಕ್ಕಿ, ಲವಂಗ, ಚಕ್ಕೆ, ಪಲಾವ್ ಎಲೆ,- ಸ್ವಲ್ಪ
* ಈರುಳ್ಳಿ-2
* ಟೊಮೆಟೋ-2
* ಅಡುಗೆ ಎಣ್ಣೆ, ತುಪ್ಪ,- ಅರ್ಧ ಕಪ್
* ಸಾಸಿವೆ- 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
* ಮಾಂಸಕ್ಕೆ, ಅರಿಸಿಣ ಪುಡಿ, ಉಪ್ಪನ್ನು ಬೆರೆಸಿ ಕುಕರ್ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
* ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೋ, ಕೊತ್ತಂಬರಿ, ಪುದಿನ ಕತ್ತರಿಸಿಟ್ಟುಕೊಳ್ಳಿ. ಅಗಲವಾದ ತೆರೆದ
* ಪಾತ್ರೆಗೆ ತುಪ್ಪ ಹಾಕಿ ಬಿಸಿಮಾಡಿ ಸಾಸಿವೆ, ಚಕ್ಕೆ, ಲವಂಗ, ಮೆಣಸು, ಏಲಕ್ಕಿ, ಪತ್ರೆ, ಪಲಾವ್ ಎಲೆ, ಹಸಿಮೆಣಸಿನಕಾಯಿ, ಗೋಡಂಬಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೆ ಹುರಿದುಕೊಳ್ಳಿ.
* ನಂತರ ಬೇಯಿಸಿದ ಮಾಂಸ, ಶುಂಠಿ ? ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಬಿರಿಯಾನಿ ಮಸಾಲೆ, ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಸಿನ ಪುಡಿ, ರುಬ್ಬಿದ ಕೊತ್ತಂಬರಿ ಮತ್ತು ಪುದಿನ, ಹಸಿಮೆಣಸಿನಕಾಯಿ, ಟೊಮೆಟೋ, ಮೊಸರು ಹಾಕಿ ಹಸಿ ವಾಸನೆ ಹೋಗುವತನಕ ಹುರಿದುಕೊಳ್ಳಿ.
* ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಉಪ್ಪು, ಅಕ್ಕಿ ಅಳತೆಗೆ ಸರಿಯಾಗಿ ನೀರು ಹಾಕಿ ಮುಚ್ಚಳ ಮುಚ್ಚಿ. ಕುಕರ್ ಅನ್ನು ಬೇಯಿಸಿದರೆ ರುಚಿಯಾದ ಮಟನ್ ಬಿರಿಯಾನಿ ಸವಿಯಲು ಸಿದ್ಧ.