ಮೈಸೂರು: ಶೀಘ್ರದಲ್ಲಿ ಜಿಪಂ, ತಾಪಂ ಚುನಾವಣೆಗಳು ಬರುತ್ತಿದ್ದು, ಹಣದಿಂದ ಚುನಾವಣೆ ಎದುರಿಸುವುದು ಬಿಡಿ. ಸಾಲದ ಸುಳಿಯ ಇಕ್ಕಟ್ಟಿಗೆ ಸಿಲುಕದೇ ಗ್ರಾಮದಲ್ಲೇ ಕುಳಿತು ಚರ್ಚಿಸಿ ಅವಿರೋಧ ಆಯ್ಕೆ ಮಾಡಿ ಇಲ್ಲದಿದ್ದರೆ ಅನೇಕರು ಬೀದಿಗೆ ಬರುತ್ತೀರಿ ಎಂದು ಶಾಸಕ ಜಿ.ಟಿ.ದೇವೇಗೌಡ ಆಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದರು.
ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ಜನತಾದಳ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಧನ್ಯತಾ ಸಮಾಗಮ ಕಾರ್ಯಕ್ರಮದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ಕೋಟಿ ರೂ. ಖರ್ಚು ಮಾಡಿ ಜಿಪಂ ಗೆದ್ದು ವರ್ಷಕ್ಕೆ ೧೦ಲಕ್ಷ ಅನುದಾನ ಪಡೆಯಬೇಕಾದ ಸ್ಥಿತಿಯಿದೆ. ೫೦ರಿಂದ ೭೦ ಲಕ್ಷ ಖರ್ಚು ಮಾಡಿ ೫ಲಕ್ಷ ಅನುದಾನ ಪಡೆಯಬೇಕಾದ ಸ್ಥಿತಿ ತಾಲ್ಲೂಕು ಪಂಚಾಯಿತಿ ಸ್ಥಿತಿಯಲ್ಲಿದೆ. ಇನ್ನೂ ಗ್ರಾಪಂಗಳಲ್ಲಿಯೂ ನರೇಗಾ ಬಿಟ್ಟರೆ ಸದಸ್ಯರಿಗೂ ಯಾವುದೇ ಅನುದಾನ ಸಿಗುತ್ತಿಲ್ಲ. ಹೀಗಾಗಿ ಗ್ರಾಮ ಸ್ವರಾಜ್ಯವನ್ನು ರಕ್ಷಿಸಿಕೊಳ್ಳಬೇಕಾದ ಅಗತ್ಯತೆ ಎಲ್ಲರಿಗೂ ಇದೆ ಎಂದು ಹೇಳಿದರು.
ಅತಿ ಜರೂರಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯಲಿವೆ. ಪಕ್ಷ ಯಾವುದಾದರೂ ಇರಲಿ ಗ್ರಾಮಗಳಲ್ಲಿಯೇ ಎಲ್ಲರೂ ಕುಳಿತು ಚರ್ಚಿಸಿ ಅವಿರೋಧ ಆಯ್ಕೆಗೆ ಒತ್ತು ನೀಡಿ.ದುಡ್ಡಿನಿಂದ ಚುನಾವಣೆ ನಡೆಸಲು ಹೋದರೆ ನಿಮ್ಮವರೇ ಬೀದಿಗೆ ಬಂದೂ ನಿಲ್ಲಬೇಕಾಗುತ್ತದೆ. ಇಂತಹ ಚುನಾವಣೆ ಗಮನಿಸಿ ಅನೇಕರು ಚುನಾವಣೆಗೆ ನಿಲ್ಲುವುದಕ್ಕೆ ಹೆದರುವ ಸನ್ನಿವೇಶ ಎದುರಾಗಿದೆ. ಹೀಗಾಗಿ ಚುನಾವಣೆ ವ್ಯವಸ್ಥೆಗೆ ನೀವೇ ಬದಲಾಯಿಸುವ ನಿಟ್ಟಿನಲ್ಲಿ ಅವಿರೋಧ ಆಯ್ಕೆ ಮಾಡಿ ಎಂದು ಕರೆ ನೀಡಿದರು.
ನಾನೂ ಪಕ್ಷ ಕಟ್ಟಿದ್ದೇನೆ: ಜಿಲ್ಲೆಯಲ್ಲಿ ನಾನು ದೇವೇಗೌಡರು ಹಾಗೂ ಸಿದ್ದರಾಮಯ್ಯ ಮೂವರು ಸೇರಿ ಪಕ್ಷ ಕಟ್ಟಿದ್ದೇವೆ. ಅವರ ಉಪಚುನಾವಣೆಯಲ್ಲಿ ನಾನು ತಟಸ್ಥನಾಗಿ ಉಳಿದಿದ್ದರಿಂದ ಅವರಿಗೆ ಜಯವಾಯಿತು. ನಾನು ಪ್ರಚಾರಕ್ಕೆ ಹೋಗಿದ್ದರೆ ಅಂದೇ ಅವರು ಸೋಲುತ್ತಿದ್ದರು. ಆದರೆ, ಜಿಲ್ಲೆಯಲ್ಲಿ ೧೯೮೯ರಿಂದ ಪಕ್ಷ ಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಬಹುಮತವನ್ನು ಜನತೆ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಾವೆಲ್ಲ ಶಾಸಕರಾಗಿದ್ದೇವೆ. ಚಾಮುಂಡೇಶ್ವರಿ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿಯನ್ನು ಈಡೇರಿಸಲಿ ಎಂದು ಒತ್ತಾಯ ಮಾಡೋಣ.
ಹಿಂದೆ ಇದೇ ಸಿದ್ದರಾಮಯ್ಯನವರು ಒಂದು ರೂಪಾಯಿಯೂ ಕೊಡದೇ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿದರು. ಕೆಂಪೇಗೌಡರು ಬೂತ್ಗೆ ನೂರು ರೂಪಾಯಿ ಕೊಟ್ಟರೂ ಆಗ ನಾನು ಸೇರಿ ಒಬ್ಬೊಬ್ಬರು ಒಂದು ಹೋಬಳಿಯ ಬೂತ್ ನೋಡಿಕೊಂಡಿದ್ದೇವು. ಆಗ ಗೆದ್ದು ಹೆಗಡೆಯವರ ಸರ್ಕಾರದಲ್ಲಿ ಕನ್ನಡ ಕ್ರಿಯಾ ಸಮಿತಿ ಅಧ್ಯರಾದ. ಅದಾದ ಬಳಿಕ 1985ರಲ್ಲಿ ಮತ್ತೆ ಗೆದ್ದು ಸಚಿವರಾದರೆ, 1989 ರಲ್ಲಿ ಸೋತರು. ಜಾಲಪ್ಪ ನೇತೃತ್ವದಲ್ಲಿ
1994ರಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದರು. 2004ರಲ್ಲಿ ಧರ್ಮಸಿಂಗ್ ಸಿಎಂ ಆದಾಗಿನಿಂದ ಈಚೆಗೆ ನನ್ನನ್ನು ಸಿದ್ದರಾಮಯ್ಯನವರೊಟ್ಟಿಗೆ ತಡೆದರೂ. ಜೆಡಿಎಸ್ನಲ್ಲಿ ನಾನೊಬ್ಬನೇ ಉಳಿದೆ. ಬಳಿಕ ನಡೆದ ಉಪಚುನಾವಣೆಯಲ್ಲಿ ನಾನು ಕೆಲಸ ಮಾಡಲಿಲ್ಲ. ಅನಂತರ ಸಿದ್ದರಾಮಯ್ಯನವರ ಎದುರು ನಿಲ್ಲಬಾರದೆಂದು ಸುಮ್ಮನಾದೆ, ಅನಂತರ ಸತ್ಯನಾರಾಯಣಗೆ ಕೊಟ್ಟರೂ ಆಗ ಹುಣಸೂರಲ್ಲಿ ಸೋತಿದ್ದ ನಾನು ಮತ್ತೆ ನನ್ನ ಕ್ಷೇತ್ರಕ್ಕೆ ಹೋಗಬೇಕೆಂದು ಬಯಸಿ ಕ್ಷೇತ್ರಕ್ಕೆ ಬಂದೆ ಎಂದು ಸ್ಮರಿಸಿಕೊಂಡರು.
ಬರಡನಪುರ ಸ್ವಾಮೀಜಿ, ತಳೂರಿನ ಯುವಕರ ಆಹ್ವಾನದ ಮೇರೆಗೆ ಬಂದೆ, 2018ರಲ್ಲಿ ಸುಮ್ಮನೇ ಚಾಮುಂಡೇಶ್ವರಿಗೆ ಸಿದ್ದರಾಮಯ್ಯನವರನ್ನು ಕರೆದುಕೊಂಡು ಬಂದೂ ಸೋಲಿಸಿದರು. ಆ ಸೋಲಿನ ಕೊರಗು ಇದೆ. ಸಮ್ಮಿಶ್ರ ಸರ್ಕಾರದಲ್ಲಿ ಕೇಳಿದ ಖಾತೆ ಕೊಡದೇ ಕೊನೆಗೆ ಅವಿದ್ಯಾವಂತನಾಗಿ 12 ತಿಂಗಳು ನಿರೀಕ್ಷೆಗೂ ಮೀರಿದ ಜವಾಬ್ದಾರಿ ನಿಭಾಯಿಸಿ ಹೆಸರು ತಂದಿಕೊಟ್ಟಿದ್ದೇನೆ. ಸಮ್ಮಿಶ್ರ ಸರ್ಕಾ ಪತನದಲ್ಲಿ ನಾನು ಬಿಜೆಪಿ ಸೇರುತ್ತೇನೆಂದು ಅನೇಕರು ಹೇಳಿದರು. ಆದರೆ, ಮತದಾರರ ತೀರ್ಪಿಗೆ ವಿರುದ್ಧವಾಗಿ ನಾನು ಹೊಗುವ ಮನಸ್ಸು ಬರಲಿಲ್ಲ. ಹೋಗಿದ್ದರೆ ಉಪಮುಖ್ಯಮಂತ್ರಿಯ ಅಧಿಕಾರ ಸಿಗುತ್ತಿತ್ತು.
ಕತ್ತೆಯಾಗಿ ಹೊತ್ತಿದ್ದೇನೆ: ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ತಿಮ್ಮಯ್ಯ ಹಾಗೂ ಕೌಟಿಲ್ಯ ರಘು ಪರವಾಗಿಯೇ ಕೆಲಸ ಮಾಡಿದ್ದೇನೆ. ಇದನ್ನೂ ಈಗಲೂ ಹೇಳುತ್ತೇನೆ. ಆದರೆ, ಫಲಿತಾಂಶದ ಬಳಿಕ ಒಬ್ಬರೂ ನನ್ನನ್ನು ಕತ್ತೆಗೆ ಹೊಲಿಕೆ ಮಾಡಿದರು. ಅದಾದ ಬಳಿಕ ನನ್ನ ಚುನಾವಣೆಯಲ್ಲಿ ಎನೇನೂ ಮಾಡಿದ್ದಾರೆಂಬುದು ಗೊತ್ತಿದೆ. ಕತ್ತೆ ನೋಡುವುದು ಭಾಗ್ಯ ಎಂದು ಜನರು ಭಾವಿಸಿದ್ದಾರೆ. ಕತ್ತೆಯಾಗಿಯೇ ಎಲ್ಲವನ್ನೂ ಹೊತ್ತಿದ್ದೇನೆ. ಜಾತಿ ನೋಡದೆ ಹೊತ್ತಿದ್ದಿನಿ, ಉತ್ತಿದ್ದಿನಿ, ಬೆಳೆದಿದ್ದಿನೆಂದು ಕಿಡಿಕಾರಿದರು.
ಯಾರಿಗೂ ಅನ್ಯಾಯ ಮಾಡಿಲ್ಲ: ಅನೇಕರು ಜಿ.ಟಿ.ದೇವೇಗೌಡರದ್ದನ್ನು ಎಲ್ಲವನ್ನೂ ಬಹಿರಂಗ ಮಾಡುತ್ತೇವೆ. ಅಪ್ಪ-ಮಕ್ಕಳು ಗೆದ್ದರೆ ಚಾಮುಂಡೇಶ್ವರಿಗೆ ಅಪಮಾನ ಆಗುತ್ತದೆ ಎಂದು ಅಪಪ್ರಚಾರ ಮಾಡಿದರು. ನಾನು ಹೌಸಿಂಗ್ ಬೋರ್ಡ್ ವಿಚಾರವಾಗಿ ಹೋಗಿಲ್ಲ. ಎಪಿಎಂಸಿಯಲ್ಲಿ ಪಾಲು ಕೇಳಿಲ್ಲ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯಿಂದಲೂ ಎನನ್ನೂ ಬಯಸಿಲ್ಲ. ಆಡಳಿತ ನಡೆಸಲು ಮುಕ್ತ ಅಕವಾಶ ನೀಡಿದ್ದೇನೆ. ನಾನು ಹಿರಿಯ ರಾಜಕಾರಣಿ ಎಂಬುದನ್ನು ಕಾಣದ ಎಕವಚನದಲ್ಲಿ ನಿಂದಿಸಿದವರಿಗೆ ಜನತೆಯೇ ಉತ್ತರ ಕೊಟ್ಟಿದ್ದಾರೆಂದರು.
ಎಂಪಿ ಆಗುತ್ತಿದ್ದ: ಸಿದ್ದರಾಮಯ್ಯನವರು ನೀನು ಚಾಮುಂಡೇಶ್ವರಿ ನಿಲ್ಲು ಸಚಿವನಾಗ್ತಿಯಾ ಹಾಗೂ ಪುತ್ರ ಹರೀಶ್ಗೌಡನ್ನು ಸಂಸದನಾಗಿ ಮಾಡೋಣ ಎಂದಿದ್ದರು. ಆದರೆ, ಕಳೆದ ೧೦ ವರ್ಷಗಳಿಂದ ಹುಣಸೂರಿನಲ್ಲಿ ಹರೀಶ್ಗೌಡ ಕೆಲಸ ಮಾಡಿದ್ದಾನೆ. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷನಾಗಿದ್ದಾನೆ. ಅನೇಕ ಕಾರಣಗಳಿಂದ ಈಗಾಗಲೇ ಆತ ಶಾಸಕನಾಗಬೇಕಾಗಿದ್ದು ನಿಂತು ಹೋಗಿದೆ. ಅದಕ್ಕೆ ಯಾರೆಲ್ಲಾ ಕಾರಣ ಎಂಬುದು ಜನರಿಗೂ ಗೊತ್ತಿದೆ. ಮಾತ್ರವಲ್ಲದೆ, ಜೆಡಿಎಸ್ ವರಿಷ್ಠರಾದ ದೇವೇಗೌಡರೂ ಮನೆಗೆ ಬಂದು ನನ್ನ ಮೇಲೆ ಇಟ್ಟ ನಂಬಿಕೆ ದಾಟಿ ಹೋಗಲಿಲ್ಲ ಎಂದರು.
ಮಾತನಾಡುವುದಕ್ಕೇನೂ ನಿಮಗೆ: ೧೦ ವರ್ಷಗಳ ಹಿಂದೆ ವಿಜಯನಗರ ೪ನೇ ಹಂತ, ಶಾರದದೇವಿನಗರ, ರೂಪನಗರ ಯಾವ ಸ್ಥಿತಿಯಲ್ಲಿತ್ತು. ಈಗ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ನೋಡಬೇಕಿದೆ. ಆ ಭಾಗದಲ್ಲಿ ಬಿಜೆಪಿ ಮುಖಂಡರು ಅಭಿವೃದ್ಧಿ ವಿಚಾರವನ್ನೂ ತಾವೇ ಮಾಡಿಸಿದ್ದು ಎನ್ನುತ್ತಿದ್ದರೂ ನಮ್ಮ ಮುಖಂಡರು ಮಾತನಾಡುವುದಕ್ಕೇನಾಗಿತ್ತು ಎಂಬುದು ಗೊತ್ತಿಲ್ಲ. ಕುಡಿಯುವ ನೀರು, ಚರಂಡಿ ಹಾಗೂ ರಸ್ತೆ ಸೇರಿ ಎಲ್ಲಾ ಅಭಿವೃದ್ಧಿ ಮಾಡಿದ್ದರೂ ಆ ಭಾಗದಲ್ಲಿ ಮತ ಹೆಚ್ಚು ಬಾರದಿರುವುದಕ್ಕೆ ಬೇಸರವಿದೆ. ಇದಕ್ಕೆ ಮತದಾರರು ಕಾರಣವಲ್ಲ, ಆ ಭಾಗದ ಮುಖಂಡರು ಅಭಿವೃದ್ದಿ ಕೆಲಸ ಶಾಸಕರದ್ದು ಎಂದು ಹೇಳುವಲ್ಲಿ ಹಿಂದೆ ಉಳಿದಿರುವುದು ಗೊತ್ತಾಗಿದೆ ಎಂದರು.
ಕುಮಾರಸ್ವಾಮಿಯವರು ಮುಂದಿನ ೫೦ ವರ್ಷಕ್ಕೆ ನಗರಕ್ಕೆ ಬೇಕಾಗುವ 545 ಕೋಟಿ ರೂ.ಗಳ ಉಂಡುವಾಡಿ ಯೋಜನೆಗೆ ಅನುಮೋದನೆ ಕೊಟ್ಟರು. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರಗಳು ಅನುದಾನ ಬಿಡುಗಡೆ ಮಾಡಿಕೊಟ್ಟರು. ಇದೆಲ್ಲಾ ಕಾರಣದಿಂದ ಕ್ಷೇತ್ರದ ನೀರಿನ ಸಮಸ್ಯೆ ಶೀಘ್ರ ಬಗೆಹರಿಯಲಿದೆ. ಈಗಿನ ಸಿದ್ದರಾಮಯ್ಯನವರೂ ಸಹ ಸದರಿ ಯೋಜನೆಯನ್ನು ಮುಕ್ತಾಯಗೊಳಿಸುವ ವಿಶ್ವಾಸವಿದೆ. ಡಿ.ಸಾಲುಂಡಿ, ಹುಯಿಲಾಳು ಸೇರಿ ಅನೇಕ ಕಡೆಗಳಲ್ಲಿ ಇಂದಿಗೂ ಗ್ರಾಪಂ ಸದಸ್ಯರು ಮಾಡಬೇಕಾದ ರಸ್ತೆ, ಚರಂಡಿ, ಸ್ವಚ್ಛತೆ ಕೆಲಸವನ್ನು ಶಾಸಕನಾಗಿ ನಾನು ಮಾಡಿಸುತ್ತಿದ್ದೇನೆ. ಆ ಭಾಗದ ಜನಪ್ರತಿನಿಧಿಗಳು ಇವೆಲ್ಲವನ್ನೂ ಮುಂದಾದರೂ ಮಾಡಿಕೊಳ್ಳಿ ಎಂದರು.
ತಡೆದಿದ್ದೂ ಯಾರು?: ಬೃಹತ್ ಮಹಾನಗರ ಪಾಲಿಕೆಗೆ ಕ್ಷೇತ್ರದ ಅನೇಕ ಭಾಗಗಳ ಸೇರ್ಪಡೆಗೆ ಮುಂದಾದಾಗ ರಾಕೇಶ್ ಪಾಪಣ್ಣ ಮಾಡದಂತೆ ತಡೆದರು. ಬಳಿಕ ಸಂಸದ ಪ್ರತಾಪಸಿಂಹರ ಬಳಿಗೆ ಹೋದಾಗ ಸ್ಪಂದಿಸಿದರು. ಅವರ ಮೂಲಕ ಜಿಲ್ಲಾ ಸಚಿವರು ಹಾಗೂ ಅಂದಿನ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಲ್ಲಿ ಕೇಳಿಕೊಂಡಾಗ ೪ ಪಟ್ಟಣ ಪಂಚಾಯಿತಿ, ೧ನಗರ ಸಭೆಯಾಗಿ ಮಾಡಿ ಇಡೀ ರಾಜ್ಯದಲ್ಲೇ ಇಂತಹದೊಂದು ಕೆಲಸ ಮಾಡಲಾಗಿದೆ. ಈಗಲೂ ಹೂಟಗಳ್ಳಿಗೆ 50 ಕೋಟಿ, ಶ್ರೀರಾಂಪುರಕ್ಕೆ 40ಕೋಟಿ, ರಮ್ಮನಹಳ್ಳಿಗೆ 39ಕೋಟಿ ಕೊಟ್ಟಿದ್ದು ಇನ್ನೂ ಯಾವುದೇ ಅಭಿವೃದ್ಧಿ ಕೆಲಸಗಳಿದ್ದರೂ ಮಾಡಲಾಗುವುದು. ಕೆಲವು ಕ್ಷೇತ್ರಗಳಲ್ಲಿ ನಿವೇಶನ ರಚನೆ, ಆಶ್ರಯ ಮನೆ ವಿತರಣೆ ಶಾಸಕರ ಅನುಮಾತಿ ಪಡೆಯುತ್ತಾರೆ. ಆದರೆ, ನಾನು ಅದಾವುದನ್ನೂ ನೋಡದೇ ಕೆಲಸ ಮಾಡಿದ್ದೇನೆ. ಇದಾವುದನ್ನೂ ಸಹಿಸದೇ ಕೆಲವರೂ ನನ್ನ ವಿರುದ್ಧ ಸಿಒಡಿ, ಲೋಕಾಯುಕ್ತಕ್ಕೂ ಹಾಕಿದ್ದಾರೆ. ಆದರೆ, ನಾನು ಪ್ರಾಮಾಣಿಕನಿದ್ದೇನೆ ಎಂದರು.