ಬೀದರ್: ಕಲ್ಲಿನ ನಂದಿ ವಿಗ್ರಹ ಹಾಲು ಮತ್ತು ನೀರು ಕುಡಿಯುತ್ತಿರುವ ಸುದ್ದಿ ಹರಡಿದ್ದು, ವಿಸ್ಮಯಕಾರಿ ಘಟನೆ ಕಣ್ತುಂಬಿಕೊಳ್ಳಲು ಜನರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.
ಗಡಿ ಜಿಲ್ಲೆ ಬೀದರ್ನಲ್ಲಿರುವ ದೇವಸ್ಥಾನದಲ್ಲಿ ವಿಸ್ಮಯವನ್ನು ನೋಡಲು ಭಕ್ತರ ದಂಡೇ ಆಗಮಿಸುತ್ತಿದೆ. ಜಿಲ್ಲೆಯ ಹಲವು ದೇವಸ್ಥಾನಗಳು ಈ ವಿಸ್ಮಯಕಾರಿ ಘಟನೆಗೆ ಸಾಕ್ಷಿಯಾಗಿದೆ. ಬೀದರ್ ತಾಲೂಕಿನ ಧೂಮಸಾಪೂರ್, ಮರಕುಂದ, ಕಪಲಾಪೂರ್ ಹಾಗೂ ಚಿಟ್ಟಗುಪ್ಪ ತಾಲೂಕಿನ ನಿರ್ಣಾ, ಮಂಗಲಗಿ ಬಸವಕಲ್ಯಾಣ ತಾಲೂಕಿನಲ್ಲಿ ನಾರಾಯಣಪೂರ್ ಸೇರಿದಂತೆ ಜಿಲ್ಲೆಯ ಹಲವೆಡೆ ವಿಸ್ಮಯಕಾರಿ ಘಟನೆಯಾಗುತ್ತಿದೆ.
ಕಲ್ಲಿನ ನಂದಿ ವಿಗ್ರಹ ಹಾಲು ಮತ್ತು ನೀರು ಕುಡಿಯುತ್ತೆ ಎನ್ನುವ ವದಂತಿ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದ ಕಡೆ ಮಹಿಳಾ ಭಕ್ತರು ಮುಖ ಮಾಡುತ್ತಿದ್ದಾರೆ. ಕಲ್ಲಿನ ನಂದಿ ವಿಗ್ರಹಕ್ಕೆ ಭಕ್ತಾದಿಗಳು ಅಚ್ಚರಿಯಿಂದಲೇ ಹಾಲು ಮತ್ತು ನೀರು ಕುಡಿಸುತ್ತಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.