ಮೈಸೂರು: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲೆ ದಾಳಿಯನ್ನು ಖಂಡಿಸಿ ಬಿಜೆಪಿಯ ಕೃಷ್ಣರಾಜ ಕ್ಷೇತ್ರದ ಕಾರ್ಯಕರ್ತರು ಮೌನ ಮೆರವಣಿಗೆ ನಡೆಸಿದರು.ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಮೈಸೂರು ಮಹಾನಗರ ಪಾಲಿಕೆಯಿಂದ ಪ್ರಾರಂಭಿಸಿ ನಗರ ಬಸ್ ನಿಲ್ದಾಣದವರೆಗೆ ಬಿತ್ತಿ ಪತ್ರವನ್ನು ಹಿಡಿದು ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.ಇದೇ ವೇಳೆ ಮಾತನಾಡಿದ ಶಾಸಕ ಶ್ರೀವತ್ಸ, ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆಗೆ ನಾವಿದ್ದೇವೆ ಎಂಬ ನೈತಿಕ ಸ್ಥೈರ್ಯ ತುಂಬುವುದಕ್ಕೆ ಹಾಗೂ ಆ ದೇಶದ ಸಂಕಷ್ಟಕ್ಕೆ ದೇಶದ ಜನರನ್ನು ನಿಲ್ಲುವಂತೆ ಪ್ರೇರೆಪಿಸುವ ಜತೆಗೆ ಸರ್ಕಾರದ ಗಮನ ಸೆಳೆಯಲು ಇಂದು ಇಡೀ ದಿನ ಜನ ಜಾಗೃಕಾರ್ಯಕ್ರಮ ರೂಪಿಸಿದ್ದೇವೆ ಎಂದರು.ನನ್ನ ಕ್ಷೇತ್ರದ 19 ವಾರ್ಡಿನಲ್ಲಿ ಪ್ರತಿ ವಾರ್ಡಿನ ಮೂರು ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮದ ಮೂಲಕ ಪ್ರತಿಭಟನೆ ಆಯೋಜಿಸಿದ್ದೇವೆ. ಸರ್ಕಾರ ಬಾಂಗ್ಲಾದೇಶದಲ್ಲಿ ಇರುವ ಹಿಂದೂಗಳ ರಕ್ಷಿಸಬೇಕೆಂದು ಕೋರುತ್ತೇವೆ ಎಂದು ಹೇಳಿದರು.ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜ ಅರಸ್, ಪ್ರಧಾನ ಕಾರ್ಯದರ್ಶಿ ಜೈಶಂಕರ, ಜಯರಾಮ್, ನಗರ ಉಪಾಧ್ಯಕ್ಷ ಎಂ.ಆರ್. ಬಾಲಕೃಷ್ಣ, ಮೈಸೂರು ನಗರ ಮಾಜಿ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಬಿಲ್ಲಯ್ಯ, ಚೇತನ್, ಚಂದ್ರಶೇಖರ್, ವಾದಿರಾಜ ಬಲ್ಲಾಳ್, ಹರೀಶ್, ರವಿ, ಕೀರ್ತಿ, ಕಿಶೋರ್ ಇನ್ನಿತರ ಕಾರ್ಯಕರ್ತರು ಹಾಜರಿದ್ದರು.ಹಿತರಕ್ಷಣ ಸಮಿತಿಯಿಂದಲೂ ಪ್ರತಿಭಟನೆ: ಹಿಂದೂ ಹಿತರಕ್ಷಣ ಸಮಿತಿ ವತಿಯಿಂದ ಬಾಂಗ್ಲಾದೇಶ ಹಿಂದುಗಳ ಮೇಲೆ ದಾಳಿಯನ್ನು ಖಂಡಿಸಿ ಚಾಮುಂಡಿಪುರ ವೃತ್ತ, ವೇದಾಂತ ಹೆಮ್ಮಿಗೆ ವೃತ್ತ, ರಾಮಸ್ವಾಮಿ ವೃತ್ತ, ಗನ್ ಹೌಸ್ ವೃತ್ತ, ನ್ಯಾಯಾಲಯದ ಮುಂಭಾಗ,ಸೇರಿ ನಗರದ ಪ್ರಮುಖ 30 ವೃತದಲ್ಲಿ ಬಿತ್ತಿ ಪತ್ರ ಪ್ರದರ್ಶಿಸಿ ಮೌನವಾಗಿ ಪ್ರತಿಭಟಿಸಲಾಯಿತು. ಹಿಂದೂ ಹಿತರಕ್ಷಣ ಸಮಿತಿಯ ಸಂಚಾಲಕ ರಂಗಸ್ವಾಮಿ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಮೂಲಭೂತವಾದಿಗಳು ಮಾಡುತ್ತಿರುವ ಹಿಂಸಾಚಾರ ಖಂಡನೀಯ.ವಬಾಂಗ್ಲಾದಲ್ಲಿ ಅರಾಜಕತೆ ಉಂಟಾಗಿದ್ದು, ಹಿಂದೂಗಳ ಮನೆ, ಅಂಗಡಿ, ದೇವಸ್ಥಾನ ಮೇಲೆ ದಾಳಿ ನಡೆಸಲಾಗುತ್ತಿದೆ. ಅತ್ಯಾಚಾರ, ಹತ್ಯೆ, ಆಸ್ತಿನಾಶದಂತಹ ಅಮಾನವೀಯ ಕೃತ್ಯ ಎಸಗಲಾಗುತ್ತಿದೆ. ಅಲ್ಲಿನ ಸೇನೆಯೂ ಇದನ್ನು ತಡೆಯುತ್ತಿಲ್ಲ ಎಂದು ತಿಳಿಸಿದರು.ಹಿಂದೂ ಹಿತರಕ್ಷಣ ಸಮಿತಿಯ ಸಂಚಾಲಕರಾದ ಮಹೇಶ್, ಗಿರೀಶ್, ಸಂತೋಷ್, ವಿಕ್ರಂ ಅಯ್ಯಂಗಾರ್, ಚಂದ್ರು ಕುಮಾರ್, ಬೈರತಿ ಲಿಂಗರಾಜು, ಶ್ರೀನಿವಾಸ್, ಎಸ್ ಎನ್ ರಾಜೇಶ್ ಸೇರಿ ಇನ್ನಿತರರು ಭಾಗವಹಿಸಿದರು.