ಕೆ.ಆರ್.ಪೇಟೆ:- ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ಪ್ರಾಮಾಣಿಕವಾಗಿ ಬಡವರ, ಸಾರ್ವಜನಿಕರ ಕೆಲಸವನ್ನು ಉತ್ತಮವಾಗಿ ಮಾಡುತ್ತಾರೆಂಬ ನಂಬಿಕೆಯಿಂದ ಕುಮಾರಣ್ಣ ಉತ್ತಮ ಅಭ್ಯರ್ಥಿಯನ್ನು ಆಯ್ಕೆಮಾಡಿದ್ದಾರೆ. ಎಂದು ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ತಿಳಿಸಿದರು.
ಅವರು ತಾಲ್ಲೂಕಿನ ಮಡುವಿನಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಳ್ಳಹಳ್ಳಿ ಗ್ರಾಮದಲ್ಲಿ ಮನೆಮನೆಗೆ ಮಂಜಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಉಪಚುನಾವಣೆಯಲ್ಲಿ ನಮ್ಮ ತಾಲ್ಲೂಕಿನ ಸುಪುತ್ರ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುತ್ತಾರೆಂಬ ಕಾರಣಕ್ಕಾಗಿ ೮೦% ಬಿಜೆಪಿಗೆ ಮತ ನೀಡಿದ್ದೀರಿ.ಮತ ಪಡೆದ ವ್ಯಕ್ತಿ ನಿಮ್ಮ ಗ್ರಾಮಕ್ಕೆ ಮತ್ತು ನಿಮ್ಮ ಸಮು
ದಾಯಕ್ಕೆ ಯಾವುದೇ ರೀತಿಯ ಕೆಲಸ ಮಾಡದೇ ಕಾಲಾಹರಣ ಮಾಡಿದರು.ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು. ಮಂಜಣ್ಣ ನಿಮ್ಮ ಕೆಲಸಗಳನ್ನು ಮಾಡಿಕೊಡು
ತ್ತಾರೆ.ಎಂಬ ಉದ್ದೇಶದಿಂದಲೇ ಕುಮಾರಣ್ಣ ಉತ್ತಮ ಅಭ್ಯರ್ಥಿ ಎಂದೇ ಮಂಜಣ್ಣನನ್ನು ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿದ್ದಾರೆ.ದಯವಿಟ್ಟು ಜಾತಿಯ ವ್ಯಾಮೋಹ ನೋಡದೇ ಉತ್ತಮವಾಗಿ ಕೆಲಸ ಮಾಡುವ ಮಂಜಣ್ಣನನ್ನು ಗೆಲ್ಲಿಸಿ ನಂತರ ಅವರಿಂದ ಅಭಿವೃದ್ದಿ ಕೆಲಸಗಳನ್ನು ನಿರೀಕ್ಷಿಸೋಣ ಎಂದರು.
ತಾಲ್ಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ವಕೀಲ ಧನಂಜಯ ಮಾತನಾಡಿ ಕಳೆದ ಉಪಚುನಾವಣೆಯಲ್ಲಿ ಮತ ಪಡೆದ ವ್ಯಕ್ತಿ ನಮ್ಮ ಗ್ರಾಮದ ಕಡೆಗೆ ತಿರುಗಿ ನೋಡಲೇ ಇಲ್ಲ. ನಮ್ಮ ಸಮುದಾಯಕ್ಕೆ ಅನ್ಯಾಯಗಿದೆ. ನಮ್ಮ ಮತಕ್ಕೆ ಬೆಲೆ ಸಿಗಬೇಕಾದರೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಮಂಜಣ್ಣನನ್ನು ಗೆಲ್ಲಿಸಬೇಕು ಎಂದರು
ಕಾರ್ಯಕ್ರಮದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು, ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ಕೆ.ಅಶೋಕ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಮಂಜುನಾಥ್, ಜೆಡಿಎಸ್ ಮುಖಂಡರಾದ ಗಂಗಾಧರಪ್ಪ, ಸಾಗರ್, ಗ್ರಾಪಂ ಸದಸ್ಯರಾದ ರವಿಕುಮಾರ್, ಮಹದೇವಪ್ಪ, ಶಂಕರಣ್ಣ, ರಾಜಣ್ಣ ಸೇರಿದಂತೆ ನೂರಾರು ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.