ಮಂಡ್ಯ: ಕ್ಷಣ ಕ್ಷಣಕ್ಕೂ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಸದ್ಯ 110.60 ಅಡಿಗೆ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ ತಲುಪಿದೆ.ರಾಜ್ಯದಲ್ಲಿ ಮಳೆಯಾರ್ಭಟ ಮುಂದುವರೆದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ನಿರಂತವಾಗಿ ಸುರಿಯುತ್ತಿದೆ. ಪರಿಣಾಮ ಕಾವೇರಿ ಒಡಲು ತುಂಬಿಸಿಕೊಳ್ಳುತ್ತಿದ್ದಾಳೆ. ಮಳೆಯಿಂದಾಗಿ ಕೆಆರ್ಎಸ್ ಡ್ಯಾಂಗೆ 36,674 ಕ್ಯೂಸೆಕ್ ಒಳಹರಿವು ಹರಿದುಬಂದಿದೆ. 24 ಗಂಟೆಯಲ್ಲಿ 3 ಅಡಿ ನೀರು ಹೆಚ್ಚಳವಾಗಿದೆ. ನಿನ್ನೆ 107.60 ಅಡಿ ಇದ್ದ ಕೆಆರ್ಎಸ್ ನೀರಿನ ಮಟ್ಟ, ಇಂದು 110.60 ಅಡಿಗೆ ತಲುಪಿದೆ.ಕೆಆರ್ಎಸ್ ಡ್ಯಾಂನ ನೀರಿನ ಸಂಗ್ರಹದಲ್ಲಿ ಭಾರೀ ಏರಿಕೆ ಕಂಡಿದ್ದು, 24 ಗಂಟೆಯಲ್ಲಿ 3 ಟಿಎಂಸಿ ನೀರು ಕೆಆರ್ಎಸ್ಗೆ ಹರಿದು ಬಂದಿದೆ. ನಿನ್ನೆ ಕೆಆರ್ಎಸ್ನಲ್ಲಿ 29.378 ಟಿಎಂಸಿ ನೀರು ಸಂಗ್ರವಾಗಿತ್ತು. ಇಂದು 32.330 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಕೆಆರ್ಎಸ್ ಡ್ಯಾಂ ಭರ್ತಿಯಾಗುವ ಹಂತದಲ್ಲಿದೆ. ಸದ್ಯ ಈ ವಿಚಾರವಂತೂ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಇಂದಿನ ಕೆಆರ್ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ : 124.80 ಅಡಿ.
ಇಂದಿನ ಮಟ್ಟ : 110.60 ಅಡಿ.
ಗರಿಷ್ಠ ಸಾಮಥ್ರ್ಯ : 49.452 ಟಿಎಂಸಿ
ಇಂದಿನ ಸಾಮಥ್ರ್ಯ : 32.330 ಟಿಎಂಸಿ
ಒಳ ಹರಿವು : 36,674 ಕ್ಯೂಸೆಕ್
ಹೊರ ಹರಿವು : 2,361 ಕ್ಯೂಸೆಕ್