ಸುಬ್ರಹ್ಮಣ್ಯ : ನಾಗಾರಾಧನೆಗೆ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಈ ಬಾರಿ ರಾಜ್ಯದಲ್ಲಿ ನಂ.1 ಪಟ್ಟಕ್ಕೇರಿ ರಾಜ್ಯದ ಶ್ರೀಮಂತ ದೇವಸ್ಥಾನವಾಗಿ ಗುರುತಿಸಿಕೊಂಡಿದೆ.
ಕರೋನಾ ಸಾಂಕ್ರಾಮಿಕದ ಹಿನ್ನೆಲೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದ ಕಾರಣ 2021- 22 ನೇ ಸಾಲಿನಲ್ಲಿ ಕೇವಲ 72,73,23,758 ರೋ ಆದಾಯ ಪಡೆದಿತ್ತು.
ದೇವಾಲಯಕ್ಕೆ ಬರುವ ಹರಕೆ ಸೇವೆ, ಕಾಣಿಕೆ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ, ಹಾಗೂ ಕೃಷಿ ತೋಟದಿಂದಲು ಆದಾಯ ಪಡೆಯುತ್ತಿದ್ದು, 2022ರ ಏಪ್ರಿಲ್ ನಿಂದ 2023ರ ಮಾರ್ಚ್ ವರೆಗಿನ ಆದಾಯದ ವರದಿಯಲ್ಲಿ 123,64,49,480 ರೂ ಆದಾಯಗಳಿಸಿದೆ ಎಂದು ತಿಳಿದು ಬಂದಿದೆ. ಈ ಮೂಲಕ ರಾಜ್ಯದಲ್ಲಿ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಗಳಿಸಿದೆ.
123 ಕೋಟಿ ರೂ. ಆದಾಯ ಗಳಿಸಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
