ಮೈಸೂರು: ಅಂಗಳ ಸಾಹಿತ್ಯ ಬಳಗ, ಈದಿನ, ಕಾಮ್ ಮತ್ತು ಮೈಸೂರು ವಿವಿ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಸಹಯೋಗದಲ್ಲಿ ಅ.10ರಂದು ಭಾರತದಲ್ಲಿನ ಮಾನವತೆ ವಿಕಾಸಕ್ಕೆ ಇರುವ ಸವಾಲುಗಳು ವಿಶೇಷ ಉಪನ್ಯಾಸ ಮತ್ತು ಮುಕ್ತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಶೋಧಕ ವರಹಳ್ಳಿ ಆನಂದ ಹೇಳಿದರು.
ಶನಿವಾರ ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಮಾನಸಗಂಗೋತ್ರಿಯ ಇಎಂಎಂಆರ್ ಸಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ ಅವರು ಸನಾತನ ಧರ್ಮದ ಕುರಿತು ವಿಶೇಷ ಉಪನ್ಯಾಸ ನೀಡುವರು. ಮಹಿಳಾ ಹೋರಾಟಗಾರ್ತಿ ಈ.ರತಿರಾವ್ ಅಧ್ಯಕ್ಷತೆ ವಹಿಸುವರು. ಲೇಖಕ ನಾ.ದಿವಾಕರ್ ಭಾಗವಹಿಸುವರು ಎಂದರು.
ಸನಾತನ ಧರ್ಮದ ಕುರಿತು ಸಾರ್ವಜನಿಕವಾಗಿ ಪರ ವಿರೋಧ ಚರ್ಚೆಯಾಗುತ್ತಿದೆ. ಈ ಬಗ್ಗೆ ಸ್ಪಷ್ಟತೆ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ ಅವರು ಸನಾತನ ಧರ್ಮದ ಕುರಿತ ವಿಡಿಯೋ ಪ್ರದರ್ಶನದ ಮತ್ತು ಮುಕ್ತ ಸಂವಾದ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದೆ ವೇಳೆ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಸಂಶೋಧಕರ ಸಂಘದ ಕಾರ್ಯಾಧ್ಯಕ್ಷ ಕಲ್ಲಹಳ್ಳಿ ಕುಮಾರ್, ಅಂಗಳ ಸಾಹಿತ್ಯ ಬಳಗದ ಸಂಜಯ್ ಕುಮಾರ್, ಸಂಶೋಧಕರ ಸಂಘದ ಉಪಾಧ್ಯಕ್ಷ ಎಂ.ಲಿಂಗರಾಜು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.