ಮೈಸೂರು:- ನನ್ನ ವಿರುದ್ಧ ಇದೆ ರೀತಿ ಆರೋಪ ಮುಂದುವರೆದರೆ ಅಂತಹ ವ್ಯಕ್ತಿಗಳಿಗೆ ಲೀಗಲ್ ನೋಟಿಸ್ ಕಳುಹಿಸಿ ದೂರು ದಾಖಲಿಸುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಶಾಸಕ ಜಿ.ಟಿ ದೇವೇಗೌಡ ತಿರುಗೇಟು ನೀಡಿದರು.
ಮೈಸೂರಿನ ಜಲದರ್ಶಿನಿ ಕಚೇರಿಯಲ್ಲಿ ಶಾಸಕ ಜಿ ಟಿ ದೇವೇಗೌಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ನನ್ನ ವಿರುದ್ಧ ಸುಖಾ ಸುಮ್ಮನೆ ಕೆಲವರು ಆರೋಪ ಮಾಡಿದ್ದಾರೆ. ಜಿ ಟಿ ದೇವೇಗೌಡರು ನೂರು ನಿವೇಶನ ಹೊಂದಿದ್ದಾರೆ ಎನ್ನುತ್ತಿದ್ದಾರೆ. ಮಾಧ್ಯಮಗಳಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆಧಾರ ರಹಿತ ಆರೋಪ ಯಾರೇ ಮಾಡಿರಲಿ. ನನ್ನ ವಿರುದ್ಧ ಇದೆ ರೀತಿ ಆರೋಪ ಮುಂದುವರೆದರೆ ಅಂತಹ ವ್ಯಕ್ತಿಗಳಿಗೆ ಲೀಗಲ್ ನೋಟಿಸ್ ಕಳುಹಿಸುತ್ತೇನೆ. ನನ್ನ ತೇಜೋವಧೆಗೆ ಮುಂದಾಗುವವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತೇನೆ. ಆರೋಪ ಮಾಡುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸುತ್ತೇನೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳಿಕೆ. ನೀಡಿದರು.