ಹನೂರು: ಪಟ್ಟಣ ಪಂಚಾಯ್ತಿಯ 2ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮುಮ್ತಾಜ್ ಭಾನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಾಗೂ ಉಪಾಧ್ಯಕ್ಷರಾಗಿ ಆನಂದ್ ಕುಮಾರ್ ಅವರು ಪ್ರತಿ ಸ್ಪರ್ಧಿಗಿಂತ ಮೂರು ಮತಗಳನ್ನು ಹೆಚ್ಚಾಗಿ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.ಪಟ್ಟಣ ಪಂಚಾಯ್ತಿ ಕಛೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಒಂದನೇ ವಾರ್ಡಿನ ಸದಸ್ಯೆ ಮುಮ್ತಾಜ್ ಭಾನು ಅಧ್ಯಕ್ಷರ ಗಾದೆಗೆ ಉಮೇಧುವಾರಿಕೆ ಸಲ್ಲಿಸಿದರೆ ಉಪಾಧ್ಯಕ್ಷರ ಸ್ಥಾನಕ್ಕೆ 8 ವಾರ್ಡಿನ ಆನಂದ್ ಕುಮಾರ್ ಎಂಬುವವರು ಉಮೇಧುವಾರಿಕೆ ಸಲ್ಲಿಸಿದರು.ಹನೂರು ಪಂಚಾಯ್ತಿಯಲ್ಲಿ ಜೆಡಿಎಸ್-06, ಕಾಂಗ್ರೆಸ್-05, ಬಿಜೆಪಿ-01 ಸಂಸದರ ಗೈರಿನಲ್ಲಿ ಶಾಸಕರ ಒಂದು ಮತ ಸೇರಿ ಒಟ್ಟು 13 ಸದಸ್ಯರ ಸಂಖ್ಯಾ ಬಲವಿದ್ದು, ಅಧ್ಯಕ್ಷರ ಸ್ಥಾನ ಬಿ.ಸಿ.ಎ,ಮಹಿಳೆ ವರ್ಗಕ್ಕೆ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗಧಿಯಾಗಿತ್ತು.ಚುನಾವಣೆ ಅಧಿಕಾರಿ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ನಿಗಧಿತ ಕಾಲ ಮಿತಿಯೊಳಗೆ ಚುನಾವಣೆ ಪ್ರಕ್ರಿಯೆ ಕೈಗೊಂಡು ಚುನಾವಣೆ ಕಣದಲ್ಲಿದ್ದ ಮಮ್ತಾಜ್ ಭಾನು ವಿರುದ್ದ ಸ್ಪರ್ಧೆಸಲು ಸ್ಪರ್ಧಾಳುಗಳು ಇಲ್ಲದಿದ್ದರಿಂದ ಚುನಾವಣೆಗೆ ಆಗಮಿಸಿದ ಸರ್ವ ಸದಸ್ಯರ ಒಕ್ಕೊರಳಿನ ತೀರ್ಮಾನದಂತೆ ಅಧ್ಯಕ್ಷರಾಗಿ ಮುಮ್ತಾಜ್ ಭಾನು ಆವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು.ಹಾಗೂ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಜೆಬಿಎಸ್ ಬೆಂಬಲಿತ 8 ನೇ ವಾರ್ಡಿನ ಸದಸ್ಯ ಆನಂದ್ ಕುಮಾರ್ ಕಾಂಗ್ರೆಸ್ ಬೆಂಬಲಿತ 2ನೇ ಸದಸ್ಯ ಸುದೇಶ್ ನಡುವೆ ಸ್ಪರ್ಧೆ ನಡೆಯಿತು. ಸದಸ್ಯರು ಕೈ ಮೇಲೆ ಎತ್ತುವ ಮೂಲಕ ಜೆಡಿಎಸ್ ಬೆಂಬಲಿತ ಆನಂದ್ ಅವರಿಗೆ 08 ಮತಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುದೇಶ್ ಅವರಿಗೆ 05 ಮತಗಳು ಬಂದಿದೆ. 03 ಮತಗಳ ಅಂತರದಿಂದ ಪರಭವಗೊಂಡಿದ್ದು ಆನಂದ್ ಕುಮಾರ್ ರವರನ್ನು ಉಪಾಧ್ಯಕ್ಷರಾಗಿ ಘೋಷಣೆ ಮಾಡಿದರು.ಹನೂರು ಪಟ್ಟಣ ಪಂಚಾಯಿತಿಗೆ ಇದೆ ಮೊದಲ ಬಾರಿಗೆ ಜೆಡಿಎಸ್ ಅಧ್ಯಕ್ಷರು ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬಸ್ ನಿಲ್ದಾಣದಲ್ಲಿ ಜೆ.ಡಿ.ಎಸ್ , ಬಿ.ಜೆ.ಪಿ. ಕಾರ್ಯಕರ್ತರು ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ಹನೂರು ಪೊಲೀಸರು ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದರು.