ಹನೂರು:- ಸ್ಥಳೀಯ ಪಟ್ಟಣ ಪಂಚಾಯಿತಿಗೆ 2 ನೇ ಅವಧಿಯ ಅದ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕಿದ್ದರೂ ಕಾಂಗ್ರೆಸ್ ಆಡಳಿತ ಕಾಲದ ಕಳೆದ ಭಾರಿಯಂತೆ ಈ ಭಾರಿ ಜೆ.ಡಿ.ಎಸ್ ಅಧಿಕಾರದ ಗದ್ದುಗೆ ಏರುವ ಸಂದರ್ಭದಲ್ಲಿ ಎಸ್.ಸಿ ಗೆ ಉಪಧ್ಯಕ್ಷ ಸ್ಥಾನ ನೀಡುವರೇ ಎಂಬುದೇ ಕುತೂಹಲ ಮೂಡಿಸಿದೆ.
2019 ರಲ್ಲಿ ನಡೆದ ಪ.ಪಂ.ಚುನಾವಣೆಯಲ್ಲಿ 11ನೇ ವಾರ್ಡನ ಸ್ಥಾನ ಎಸ್. ಸಿ ಗೆ ಮೀಸಲಿದ್ದು ಪ್ರಬಲ ಆಕಾಂಕ್ಷಿಯಾಗಿದ್ದ ದಲಿತ ಮುಖಂಡ ಪ್ರಸನ್ನ ಕುಮಾರ್ ಗೆ ಜೆಡಿಎಸ್ ಟಿಕೆಟ್ ತಪ್ಪಿಸಿ ಲಂಬಾಣಿ ಜನಾಂಗದ ಮಹದೇವ್ ಗೆ ನೀಡಿದ್ದ ರೀತಿಯಲ್ಲಿ ಈ ಭಾರಿಯ ಸಾಮಾನ್ಯ ಉಪಾಧ್ಯಕ್ಷ ಸ್ಥಾನವನ್ನು ಎಸ್ಸಿ ಗೆ ನೀಡುವಂತೆ ದಲಿತ ಜನಾಂಗದ ಅನೇಕ ಜೆ.ಡಿ.ಎಸ್ ಮುಖಂಡರು ಆಗ್ರಹಿಸಿದ್ದಾರೆ. ಶಾಸಕ ಮಂಜುನಾಥ್ ಅವರು ಎಸ್ಸಿ ಎಸ್. ಟಿ ಆರು ಜನ ಸದಸ್ಯರಿರುವ ವರ್ಗಕ್ಕೆ ಆದ್ಯತೆ ನೀಡುವರೆ ಅಥವಾ ಒಕ್ಕಲಿಗ ಸಮದಾಯವನ್ನು ಓಲೈಸುತ್ತಾರ,ಕಾದು ನೋಡ ಬೇಕಾಗಿದೆ.
ಅದೇ ರೀತಿ ಈ ಭಾರಿಯ ಚುನಾವಣೆಯಲ್ಲಿ ಪ್ರಸ್ತುತ ಶಾಸಕ ಮಂಜುನಾಥ್ ಅವರು ಅದೇ ರೀತಿ ಸಾಮಾನ್ಯ ಉಪಾಧ್ಯಕ್ಷ ಸ್ಥಾನವನ್ನು ದಲಿತರಿಗೆ ನೀಡುವರೆಂಬ ವಿಶ್ವಾಸ ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿದೆ.
ದಲಿತ ಸಮುದಾಯಗಳ ಮತಗಳಿಂದ ಗೆದ್ದ ಶಾಸಕರಾದ ಎಂ.ಆರ್ ಮಂಜುನಾಥ್ ಅವರು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರ ಸ್ಥಾನವನ್ನು ದಲಿತರಿಗೆ ಮಾನ್ಯತೆ ನೀಡುತ್ತಾರಾ…? ಎಂಬುದು ಯಕ್ಷಪ್ರಶ್ನೆಯಾಗಿದೆ.
ಹನೂರು ವಿಧಾನಸಭಾ ಕ್ಷೇತ್ರದ 2019ರಲ್ಲಿ ಚುನಾವಣೆಯಲ್ಲಿ ಎಸ್ ಸಿ ಮತ 53,000 ಮತಗಳಿದ್ದು ಬಹುತೇಕ ಬಿ.ಎಸ್.ಪಿ ಮತ್ತು ಜೆಡಿಎಸ್ ಮೈತ್ರಿ ಆಗಿದ್ದ ಕಾರಣ ಎಂ.ಆರ್. ಮಂಜುನಾಥ್ ಅವರಿಗೆ ಎಸ್ಸಿ ಮತಗಳು ಅಂದರೆ ದಲಿತ ಮತಗಳು 43,000 ಮತಗಳು ಮೂರನೇ ಸ್ಥಾನಕ್ಕೆ ಬಂದಿದ್ದ ಮಂಜುನಾಥ್ ಈ ಬಾರಿ 2023ರಲ್ಲಿ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ದಲಿತ ಮತಗಳನ್ನು ಪಡೆದು ಜಯಗಳಿಸಿದ ಶಾಸಕ ಮಂಜುನಾಥ ದಲಿತರಿಗೆ ಮಾನ್ಯತೆ ನೀಡುತ್ತಾರಾ…? ಎಂಬ ಮಾತು ಸಾರ್ವಜನಿಕರ ವಲಯಗಳಲ್ಲಿ ಚರ್ಚೆಯಾಗಿದೆ.
ಮೊದಲನೆ ಅವಧಿ ಅಂದರೆ 2019ರಲ್ಲಿ ನಡೆದ ಪಟ್ಟಣ ಪಂಚಾಯತಿ ಚುನಾವಣೆ ಮೊದಲ ಬಾರಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸ್ಥಾನ ಒಕ್ಕಲಿಗರ ಸಮುದಾಯಕ್ಕೆ ನೀಡಿದ್ದು ಈ ಎರಡನೇ ಬಾರಿ ಬಂದ ಮೀಸಲಾತಿ ಇದರಲ್ಲಿ ಈ ಬಾರಿಯಾದರೂ ಮಾನ್ಯ ಶಾಸಕರು ದಲಿತ ಸಮುದಾಯದ ಎಸ್.ಸಿ ಸಮುದಾಯಕ್ಕೆ ಅವಕಾಶವನ್ನು ಕೋಡುತ್ತಾರ…? ಎಂದು ಕಾದು ನೋಡಬೇಕಿದೆ.
29/8/2024 ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ:
ಹನೂರು ಪಟ್ಟಣ ಪಂಚಾಯತಿಯಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಕುಟುಂಬ ರಾಜಕಾರಣದಂತೆ ಅಧಿಕಾರ ಗದ್ದುಗೆ ಹಿಡಿಯಲಾಗುತ್ತಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನು ಪಕ್ಷ ಹೊರತುಪಡಿಸಿ ಜೆಡಿಎಸ್ ಪಕ್ಷ ಪಟ್ಟಣ ಪಂಚಾಯಿತಿ ಅಧಿಕಾರ ಗದ್ದುಗೆ ಹಿಡಿಯುವುದು ಬಹುತೇಕ ಖಚಿತವಾಗಿದೆ.
ಪಟ್ಟಣ ಪಂಚಾಯಿತಿಯಲ್ಲಿ ಜೆ.ಡಿ. ಎಸ್ -6, ಮತ್ತು ಬಿ. ಜೆ. ಪಿ -1, ಕಾಂಗ್ರೇಸ್ -5 ಸದಸ್ಯರಗಳನ್ನು ಹೊಂದಿದೆ. ಇದಲ್ಲಿ ಪರಿಶಿಷ್ಠ ವರ್ಗದ – 5 ಸೀಟುಗಳು ಇದ್ದು.
ಜೆ.ಡಿ. ಎಸ್ – 2, ಜೆ.ಡಿ. ಎಸ್ – 1 ಎಸ್. ಟಿ, ಬಿ. ಜೆ. ಪಿ.- 1, ಕಾಂಗ್ರೇಸ್ – 2, ಒಟ್ಟು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ 6 ಸದಸ್ಯರುಗಳಿದ್ದಾರೆ.
ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಿಗದಿ ಮಾಡಲಾಗಿದ್ದು ಅಧ್ಯಕ್ಷ – ಬಿ.ಸಿ. ಎಂ.(ಎ), ಉಪಾಧ್ಯಕ್ಷ-ಜನರಲ್ ಗೆ ಮೀಸಲಾತಿ ನೀಡಲಾಗಿದೆ.
2014 ರಲ್ಲಿ ಉಪಾಧ್ಯಕ್ಷ ಜನರಲ್ ಗೆ ಬಂದಿದ್ದರು. ಸಹಾ 2014 ರಲ್ಲಿ ಕಾಂಗ್ರೇಸ್ ಉಪಾಧ್ಯಕ್ಷ (ಎಸ್ ಸಿ) ಗೆ ಒಲಿಯಿತು.
ಈ ಬಾರಿ ಮಂಜುನಾಥ್ 2014 ರ ಮಾದರಿಯಲ್ಲಿ ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ವರ್ಗಕ್ಕೆ ಮಣೆ ಹಾಕುತ್ತಾರ ಅಥಾವ ಪರಿಶಿಷ್ಠ ವರ್ಗವನ್ನು ಕಡೆಗಾಣಿಸುತ್ತಾರ ಕಾದು ನೋಡ ಬೇಕು.
ಕಾಂಗ್ರೆಸ್ ದಲಿತರ ಪರವಾಗಿದೆ ಬಿಜೆಪಿ ಮತ್ತು ಜೆಡಿಎಸ್ ದಲಿತರಿಗೆ ವಿರೋಧವಾಗಿದೆ, ಎಂಬುದನ್ನು ನಿಜ ಮಾಡುತ್ತಾರೆ ಎಂ.ಆರ್. ಮಂಜುನಾಥ್…? ಎಂಬುದು ಯಕ್ಷಪ್ರಶ್ನೆಯಾಗಿದೆ.