ಹಾಲಿವುಡ್:- ಹಿರಿಯ ನಟ ಅಲ್ ಪಸಿನೊ ನಾಲ್ಕನೇ ಬಾರಿಗೆ ತಂದೆಯಾಗಿದ್ದಾರೆ. 83 ವರ್ಷದ ನಟನ 29 ವರ್ಷದ ಗೆಳತಿ ಮತ್ತು ಚಲನಚಿತ್ರ ನಿರ್ಮಾಪಕಿ ನೂರ್ ಅಲ್ಫಲ್ಲಾಹ್ ಮೊದಲ ಬಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದ್ದಾರೆ.
ಹೌದು.. ಹಾಲಿವುಡ್ ಖ್ಯಾತ್ ನಟ ಅಲ್ ಪಸಿನೊ ಮತ್ತು ನೂರ್ ಅಲ್ಫಲ್ಲಾಹ್ ಗಂಡು ಮಗುವಿಗೆ ಪೆÇೀಷಕರಾಗಿದ್ದಾರೆ ಎಂದು ಪಿಪಲ್ಸ್ ವರದಿ ಮಾಡಿದೆ. ದಂಪತಿಗಳು ತಮ್ಮ ಮಗನಿಗೆ ರೋಮನ್ ಪ್ಯಾಸಿನೊ ಎಂದು ಹೆಸರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಅಲ್ ಪಸಿನೊ ಜಾನ್ ಟ್ಯಾರಂಟ್ ಅವರೊಂದಿಗಿದ್ದರು. ಅವರಿಗೆ ಜೂಲಿ ಮೇರಿ ಎನ್ನುವ 33 ವರ್ಷದ ಮಗಳು ಇದ್ದಾಳೆ. ಅಲ್ಲದೆ ಜಾನ್ ಜೊತೆ ಸಂಬಂಧ ಕಳೆದುಕೊಂಡ ನಂತರ ಅಲ್ ಬೆವರ್ಲಿ ಡಿಏಂಜೆಲೊ ಅವರನ್ನು ಪ್ರಿತಿಸಿದ್ದರು. ಅವರಿಗೆ ಈಗ 22 ವರ್ಷದ ಆಂಟನ್ ಮತ್ತು ಒಲಿವಿಯಾ ಎಂಬ ಅವಳಿ ಮಕ್ಕಳಿದ್ದಾರೆ. ಇದೀಗ ನೂರ್ ಅಲ್ಫಲ್ಲಾಹ್ ಜೊತೆ ಅಲ್ ಸಂಬಂಧ ಹೊಂದಿದ್ದಾರೆ.
ನಿರ್ಮಾಪಕಿ ನೂರ್ ಅಲ್ಫಲ್ಲಾಹ್ ಅವರು ಈ ಹಿಂದೆ ಹಿರಿಯ ಗಾಯಕ ಮಿಕ್ ಜಾಗರ್ ಮತ್ತು ಬಿಲಿಯನೇರ್ ನಿಕೋಲಸ್ ಬರ್ಗ್ರೂನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. 29 ವರ್ಷದ ನೂರ್ ಏಪ್ರಿಲ್ 2022 ರಿಂದ ಅಲ್ ಪಸಿನೊ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇದೀಗ ಅವರ ಪ್ರೇಮ ಪ್ರಣಯದ ಗುರುತಾಗಿ ಗಂಡು ಮಗು ಜನನವಾಗಿದೆ.
ಅಲ್ ಪಸಿನೊ ಅವರು ಕ್ಲಾಸಿಕ್ ದಿ ಗಾಡ್ಫಾದರ್ ಸರಣಿಯ ನಟ ಮತ್ತು ಸ್ಕಾರ್ಫೇಸ್, ಸೆಂಟ್ ಆಫ್ ಎ ವುಮನ್, ಹೀಟ್, ಸರ್ಪಿಕೊ, ಸೀ ಆಫ್ ಲವ್, ದಿ ಡೆವಿಲ್ಸ್ ಅಡ್ವೊಕೇಟ್, ದಿ ಇನ್ಸೈಡರ್ ಮತ್ತು ಜಸ್ಟಿಸ್ ಫಾರ್ ಆಲ್, ಕಾರ್ಲಿಟೊಸ್ ವೇ, ಡೊನ್ನಿ ಬ್ರಾಸ್ಕೊ, ಓಷಿಯನ್ಸ್ ಥರ್ಟೀನ್ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ನಟ ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್, ದಿ ಐರಿಶ್ಮನ್, ಹೌಸ್ ಆಫ್ ಗುಸ್ಸಿ, ದಿ ಪೈರೇಟ್ಸ್ ಆಫ್ ಸೊಮಾಲಿಯಾ, ಡ್ಯಾನಿ ಕಾಲಿನ್ಸ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
83ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾದ ನಟ
