ೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ನಲ್ಲಿ ಘೋಷಿಸಿದ ಪ್ರಕಾರ, ಮದ್ಯದ ಬೆಲೆ ಇಂದಿನಿAದ (ಜುಲೈ 20) ಅನ್ವಯವಾಗುವಂತೆ ಹೆಚ್ಚಳವಾಗಿದೆ. ಇದರೊಂದಿಗೆ ಗರಿಷ್ಠ ಶೇ.20ರಷ್ಟು ಹೆಚ್ಚಿನ ದರದೊಂದಿಗೆ ಹೊಸ ಬೆಲೆಯಲ್ಲಿ ಶುಕ್ರವಾರದಿಂದ ಮದ್ಯ ಮಾರಾಟವಾಗಲಿದೆ.
ಸರ್ಕಾರಿ ಆದೇಶದ ಪ್ರಕಾರ ಗುರುವಾರ ಮಧ್ಯರಾತ್ರಿಯಿಂದ ಈ ದರ ಹೆಚ್ಚಳ ಜಾರಿಗೆ ಬಂದಿದೆ. ಪ್ರಸಕ್ತ ಸಾಲಿನ ಬಜೆಟ್ನಲ್ಲಿ ರಾಜ್ಯ ಸರ್ಕಾರ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಅಂಥಹ ಇತರ ಮದ್ಯಗಳ ಸುಂಕವನ್ನು ಶೇ.20ರಷ್ಟು ಏರಿಕೆ ಮಾಡಿತ್ತು. ಅಲ್ಲದೆ, ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ.10ರಷ್ಟು ಹೆಚ್ಚಿಸಿದ್ದನ್ನು ತಿಳಿಸಿತ್ತು.
ಹೀಗಾಗಿ ಹಾಲಿ ದರಕ್ಕೆ ಹೋಲಿಸಿದಾಗ ಶೇ.10ರಷ್ಟು ಬಿಯರ್ ದರ ಹೆಚ್ಚಳವಾಗಲಿದೆ. ಭಾರತೀಯ ಮದ್ಯ (ಐಎಂಎಲ್) ಒಂದು ಪೆಗ್ (60 ಎಂಎಲ್ )ಗೆ 10ರಿಂದ 20 ರೂ. ಹಾಗೂ ಬಿಯರ್ ಬೆಲೆ ಪ್ರತಿ ಬಾಟಲ್ಗೆ ಶೇ.10ರಷ್ಟು ಹೆಚ್ಚಳವಾಗಲಿದೆ.