ಮೈಸೂರು: ಮೈಸೂರಿನ ಮದರ್ಹುಡ್ಆಸ್ಪತ್ರೆಯಡಾ. ಸುಹೇಮ್ಅಫ್ಸರ್ ಮತ್ತುಡಾ. ಚೇತನ್ ಬಿ., ಅವರ ನೇತೃತ್ವದ ಸಲಹಾತಜ್ಞರು, ನವಜಾತ ಶಿಶು ತಜ್ಞರು ಮತ್ತುಮಕ್ಕಳ ತಜ್ಞರತಂಡಎನ್ಐಸಿಯುನಲ್ಲಿದ್ದ ನವಜಾತ ಶಿಶುವಿಗೆ ಯಶಸ್ವಿಯಾಗಿ ಚಿಕಿತ್ಸೆ ಕೈಗೊಳ್ಳುವುದರೊಂದಿಗೆ ನೂತನ ಬದುಕಿನ ಭರವಸೆ ನೀಡಿದ್ದಾರೆ. ಹೆಚ್ಚಿನಆರೈಕೆಗಾಗಿ ವಿಜಯನಗರದ ಖಾಸಗಿ ಆಸ್ಪತ್ರೆಯಿಂದಈ ಶಿಶುವನ್ನು ಮೈಸೂರಿನ ಮದರ್ಹುಡ್ಆಸ್ಪತ್ರೆಗೆಕರೆತರಲಾಗಿತ್ತು.
ಮೇ 21, 2023ರಂದು ಬೆಳಿಗ್ಗೆ ಸಾಮಾನ್ಯ ಹೆರಿಗೆಯಲ್ಲಿ ಶ್ರೀಮತಿ ಚಂದ್ರ(ಹೆಸರು ಬದಲಾಯಿಸಲಾಗಿದೆ) ಅವರುಗಂಡು ಶಿಶುವೊಂದಕ್ಕೆ ಜನ್ಮ ನೀಡಿದ್ದರು. ಈ ಶಿಶುವಿಗೆ ರಿಸಸಿಟೇಷನ್(ಮತ್ತೆ ಬದುಕಿಸುವಕ್ರಮ ಕೈಗೊಳ್ಳುವುದು) ಚಿಕಿತ್ಸಾ ವಿಧಾನದಅಗತ್ಯವಿತ್ತು. ಹೆರಿಗೆ ಸಂದರ್ಭದಲ್ಲಿಕರುಳಬಳ್ಳಿ ಶಿಶುವಿನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಇದರಿಂದ ಶಿಶುವಿಗೆ ತೀವ್ರವಾಗಿ ಉಸಿರು ಕಟ್ಟಿದಂತಾಗಿತ್ತು. ಈ ಕಾರಣ ಶಿಶುವಿಗೆ ರಿಸಸಿಟೇಷನ್ ಕ್ರಮದಅಗತ್ಯವಿತ್ತು.ಈ ರೀತಿಕುತ್ತಿಗೆಗೆ ಕರುಳಬಳ್ಳಿ ಸುತ್ತಿಕೊಂಡಾಗಶಿಶುವಿಗೆ `ನೇಣು’ ಬಿಗಿದಂತಾಗಿರುತ್ತದೆ. ಇದರಿಂದಮೆದುಳಿಗೆ ರಕ್ತ ಪೂರೈಸುವ ರಕ್ತನಾಳಗಳ ಮೇಲೆ ಒತ್ತಡಉಂಟಾಗುತ್ತದೆ. ಇದರಿಂದ ಮೆದುಳಿನ ಆಮ್ಲಜನಕದ ಪೂರೈಕೆ ನಿಂತುಹೋಗುತ್ತದೆ. ಇಂತಹ ಸಂದರ್ಭದಲ್ಲಿತಕ್ಷಣ ವೈದ್ಯಕೀಯಕ್ರಮದ ಅಗತ್ಯವಿರುತ್ತದೆ.
ಶಿಶುವನ್ನು ಮೈಸೂರಿನ ಮದರ್ಹುಡ್ಆಸ್ಪತ್ರೆಗೆ ಸೇರಿಸಲು ಶಿಫಾರಸ್ಸು ಮಾಡಿದ ವಿಜಯನಗರದಆಸ್ಪತ್ರೆಯ ವೈದ್ಯರತಂಡಶಿಶುವಿಗೆ ಥೆರಪ್ಯೂಟಿಕ್ ಹೈಪೋಥೆರ್ಮಿಯಾಅಥವಾಕೂಲಿಂಗ್ಥೆರಪಿ(ತAಪುಗೊಳಿಸುವ ಚಿಕಿತ್ಸೆ) ಕೈಗೊಳ್ಳುವುದನ್ನು ಪರಿಗಣಿಸಲುಮದರ್ಹುಡ್ಆಸ್ಪತ್ರೆಯನ್ನು ಸಂಪರ್ಕಿಸಿತ್ತು. ಸಂಚಾರಿ ಎನ್ಐಸಿಯು ಮೂಲಕ ನವಜಾತ ಶಿಶು ತಜ್ಞರು ಮತ್ತುದಾದಿಯರತಂಡವೊAದು ವಿಜಯನಗರಕ್ಕೆ ಧಾವಿಸಿತ್ತು. ಮದರ್ಹುಡ್ಆಸ್ಪತ್ರೆಯ ಈ ಸಂಚಾರಿ ಎನ್ಐಸಿಯು ಆಂಬುಲೆನ್ಸ್ಉನ್ನತತAತ್ರಜ್ಞಾನದ ಮತ್ತುಅತ್ಯಾಧುನಿಕ ಎನ್ಐಸಿಯು ಸೌಲಭ್ಯಗಳನ್ನು ಹೊಂದಿರುವ ವಾಹನವಾಗಿದ್ದು, ನವಜಾತ ಶಿಶುಗಳು ಅಥವಾಗಂಭೀರಅಸ್ವಸ್ಥತೆ ಹೊಂದಿರುವ ಶಿಶುಗಳನ್ನು ಸಾಗಿಸಲು ಬಳಸುವ ವಾಹನವಾಗಿದೆ.
ಮೈಸೂರಿನ ಮದರ್ಹುಡ್ಆಸ್ಪತ್ರೆಗೆ ಕರೆತರಲಾದ ಶಿಶುವಿಗೆ 7 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಆರಂಭದ ಮೂರು ದಿನಗಳಲ್ಲಿ ಶಿಶುವಿಗೆ `ಸರ್ವೋಕಂಟ್ರೋಲ್ಡ್ಕೂಲಿAಗ್ಥೆರಪಿ’ ನೀಡಲಾಯಿತು. ಇದಕ್ಕೆ`ಕ್ರಿಟಿಕೂಲ್’ ಎಂಬ ಹೆಸರಿನತಂಪುಗೊಳಿಸುವ ಘಟಕವನ್ನು ಬಳಸಲಾಯಿತು. ಇದು ನಗರದಲ್ಲಿ ಲಭ್ಯವಿರುವತನ್ನರೀತಿಯ ಏಕೈಕ ಚಿಕಿತ್ಸಾಘಟಕವಾಗಿರುತ್ತದೆ. ಈಕ್ರಿಟಿಕೂಲ್ತಾಪಮಾನ ನಿಯಂತ್ರಿಸುವ ವ್ಯವಸ್ಥೆ ಹೊಂದಿದ್ದು, ಶಿಶುವಿನ ದೇಹದತಾಪಮಾನವನ್ನು ನಿಯಂತ್ರಿಸಲು ಮತ್ತುಸದಾ ಗಮನಿಸುತ್ತಿರಲುಇದನ್ನು ಸೂಚಿಸಲಾಗುತ್ತದೆ. ಮೂರು ದಿನಗಳ ಕಾಲ ತಾಪಮಾನವನ್ನು 33.50 ಡಿಗ್ರಿಗಳಷ್ಟು ಇರಿಸಲಾಗಿತ್ತು. ವೆಂಟಿಲೇಷನ್ಅಡಿಯಲ್ಲಿಸೂಕ್ತ ವಾತಾವರಣದಡಿಶಿಶುವಿಗೆ 72 ಗಂಟೆಗಳ ಕಾಲ ಚಿಕಿತ್ಸೆ ನೀಡಲಾಯಿತು. ಶಿಶುವಿಗೆ ಉನ್ನತ ವೆಂಟಿಲೇಷನ್ ಮತ್ತು ಮಲ್ಟಿಪಾರ ಮಾನಿಟರಿಂಗ್ಒಳಗೊAಡAತೆ ಸಮಗ್ರ ನವಜಾತ ಶಿಶು ಆರೈಕೆಕೈಗೊಳ್ಳಲಾಯಿತು.