ಮೇಷ ರಾಶಿ: ಬೇಸರದಿಂದ ಹೊರಬರಲು ನಿಮಗೆ ಕಷ್ಟವಾದೀತು. ನಕಾರಾತ್ಮಕ ಆಲೋಚನೆಗಳೇ ನಿಮ್ಮ ಮನಸ್ಸಿನಲ್ಲಿ ಓಡಾಡುತ್ತವೆ. ಒತ್ತಡದಿಂದ ಕೆಲಸವನ್ನು ಮಾಡಬೇಕಾಗಬಹುದು. ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವ ಸಾಧ್ಯತೆ ಇದೆ. ಸ್ತಿçÃಯರ ಸಹಾಯದಿಂದ ಜವಾಬ್ದಾರಿಯನ್ನು ಮುಗಿಸುವಿರಿ. ಮಕ್ಕಳ ಬಗ್ಗೆ ಹೆಚ್ಚು ಗಮನ ಅಗತ್ಯ. ಕಾರಣಾಂತರಗಳಿAದ ಇಂದು ನೀವು ಮನೆಯಲ್ಲಿಯೇ ಇರುವಿರಿ. ತಿಳಿವಳಿಕೆ ಇಲ್ಲದವರ ಮುಂದೆ ನಿಮ್ಮ ಉದ್ಯಮವನ್ನು ಹೇಳಿ ಪ್ರಯೋಜನವಿಲ್ಲ. ಯಾರದೋ ತಪ್ಪನ್ನು ನೀವು ಸರಿ ಮಾಡಬೇಕಾದೀತು. ಆಪದ್ಧನವನ್ನು ಕೂಡಿಡುವುದು ಒಳ್ಳೆಯದು. ಮಹಾವಿಷ್ಣುವಿನ ಸ್ತೋತ್ರವನ್ನು ಮಾಡಿ.
ವೃಷಭ ರಾಶಿ: ಕೋಪದಲ್ಲಿ ಏನನ್ನಾದರೂ ಹೇಳಬಹುದು. ಜಾಗ್ರತೆ. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ತಡೆಗಟ್ಟುವಿರಿ. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಇರಲಿದೆ. ಯಂತ್ರಗಳ ವ್ಯಾಪಾರಿಗಳಿಗೆ ಲಾಭದಾಯಕ ದಿನ ಇಂದು. ಉತ್ಸಾಹವು ಎಷ್ಟೇ ಇದ್ದರೂ ನೆಮ್ಮದಿಯ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಹಿರಿಯರಿಂದ ಉತ್ತಮ ವಿಚಾರಗಳು ಗೊತ್ತಾಗುವುದು. ಇಂದು ನಿಮ್ಮ ಪರಿಶ್ರಮವು ವ್ಯರ್ಥವಾಗಬಹುದು. ಯಾರಾದರೂ ಏನನ್ನಾದರೂ ಕೊಡಲು ಬಂದರೆ ನಿರಾಕರಿಸಿ. ಹಿತಶತ್ರುಗಳಿಗೆ ನಿಮ್ಮ ಯಶಸ್ಸನ್ನು ಸಹಿಸಲಾಗದು. ವ್ಯರ್ಥವಾದ ಚರ್ಚೆಗಳಿಂದ ಸಮಯವನ್ನು ಕಳೆಯುವಿರಿ. ನಿಮ್ಮ ಆಲೋಚನೆಯನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ.
ಮಿಥುನ ರಾಶಿ: ಸ್ವಪ್ರತಿಷ್ಠೆಯಿಂದ ಎಲ್ಲವನ್ನೂ ಹಾಳು ಮಾಡಿಕೊಳ್ಳುವಿರಿ. ಹಿರಿಯರೆದುರು ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ದೇವತಾಕಾರ್ಯಗಳಲ್ಲಿ ಆಸಕ್ತಿಯು ಇದ್ದರೂ ಕಾರಣಾಂತರಗಳಿAದ ಅದು ಸಾಧ್ಯವಾಗದು. ಕಛೇರಿಯಲ್ಲಿ ಅಧಿಕಾರಿಗಳ ನಿಮ್ಮ ಕಾರ್ಯಕ್ಕೆ ಸಂಬAಧಿಸಿದAತೆ ವಾದ ಮಾಡಬಹುದು. ಸಾಲವನ್ನು ಕೊಡಲು ಹೋಗುವುದು ಬೇಡ. ಸಹೋದರರಿಗೆ ಮಾರ್ಗದರ್ಶನ ನೀಡಿ ಮತ್ತು ಅವರ ಅಗತ್ಯಕ್ಕೆ ಅನುಗುಣವಾಗಿ ಅವರನ್ನು ಬೆಂಬಲಿಸಿ. ನಿಮ್ಮ ಸಂಬAಧಗಳು ಬಳಕೆಯಲ್ಲಿ ಇಲ್ಲದೇ ದೂರವಾಗುವುದು. ಬುದ್ಧಿಪೂರ್ವಕವಾಗಿ ತಪುö್ಪಗಳನ್ನು ಮಾಡಿ ಪಶ್ಚಾತ್ತಪಪಡುವಿರಿ. ಸಕಾರಾತ್ಮಕ ಅಂಶಗಳನ್ನು ಸ್ವೀಕರಿಸಲು ಸಿದ್ಧರಿರಿ. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವುದು ನಿಮಗೆ ಖುಷಿ ಕೊಡುವುದು.
ಕರ್ಕ ರಾಶಿ: ನಾನಾ ಮಾರ್ಗಗಳಿಂದ ಹಣವು ಬರಬಹುದು. ಉತ್ಸಾಹಕ್ಕೆ ಭಂಗ ಬರುವ ಕಡೆ ನೀವು ಇರಲಾರಿರಿ. ನಿಮ್ಮ ಉದ್ಯೋಗವು ನಿಮಗೆ ಸಾಕೆನಿಸಬಹುದು. ಪ್ರಸಿದ್ಧಿಗಾಗಿ ನೀವು ಹಂಬಲಿಸುವಿರಿ. ನಿಮ್ಮ ಕೆಲಸವನ್ನು ಬಿಟ್ಟು ಇತರರ ಕೆಲಸದ ಕಡೆ ಗಮನ ಹರಿಸುವಿರಿ. ಉದ್ಯೋಗದಲ್ಲಿ ಅಧಿಕ ಲಾಭಕ್ಕಾಗಿ ಶ್ರಮಿರಿಸಿದರೂ ಲಾಭವನ್ನು ಪಡೆಯುವುದು ಕಷಗಟವಾದೀತು. ಪ್ರಾಮಾಣಿಕತೆಯಿಂದ ನಿಮಗೆ ಉನ್ನತ ಸ್ಥಾನವು ಸಿಗಬಹುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಗೊಂದಲವು ಬರಬಹುದು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಲು ನಿಮಗೆ ಕಷ್ಟವಾದೀತು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ಆಡಿಕೊಂಡಾರು.
ಸಿAಹ ರಾಶಿ: ಅಸೂಯೆಯು ನಿಮ್ಮ ಇತರ ಕೆಲಸಗಳನ್ನು ನಷ್ಟ ಮಾಡಿಸುವುದು. ಸ್ನೇಹಿತರ ಸಹಾಯವು ನಿಮಗೆ ಬಲವನ್ನು ತಂದುಕೊಡುವುದು. ಪ್ರಭಾವೀ ವ್ಯಕ್ತಿಗಳು ನಿಮ್ಮನ್ನು ಆಕರ್ಷಿಸಬಹುದು. ದಾಂಪತ್ಯದಲ್ಲಿ ಮಧುರ ಕ್ಷಣಗಳು ಇರಲಿವೆ. ಎಲ್ಲವನ್ನೂ ತಿಳಿದುಕೊಂಡೂ ನೀವು ಮುಂದೆ ಸಾಗಲು ಭಯಪಡುವಿರಿ. ಬಂಧುಗಳ ಕಾರಣದಿಂದ ಮನೆಯಲ್ಲಿ ಕಲಹಗಳು ಉಂಟಾಗಬಹುದು. ಒತ್ತಡದಿಂದ ನೀವು ಕೆಟ್ಟ ಮಾರ್ಗವನ್ನು ಅನುಸರಿಸಬೇಕಾದೀತು. ವ್ಯಾಪಾರವನ್ನು ಮಿತವಾದ ಲಾಭದಲ್ಲಿ ಮಾಡಿ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮಗೆ ಅಸಮಾಧಾನದ ವಾತಾವರಣವು ಉಂಟಾಗಬಹುದು.
ಕನ್ಯಾ ರಾಶಿ: ಬಹು ದಿನಗಳಿಂದ ಇದ್ದ ನಿರುದ್ಯೋಗ ಸಮಸ್ಯೆಯು ಇಂದು ದೂರಾಗಿ, ಬೇಸರವೂ ಕಳೆಯಬಹುದು. ನಿಮ್ಮ ಗುರಿಯಾಗಿಸಿಕೊಂಡು ಸಹೋದ್ಯೋಗಿಗಳು ಕೆಲಸವನ್ನು ಮಾಡುವರು. ಭೂಮಿಯು ಲಾಭವಾಗುವಂತೆ ಇದ್ದರೂ ಕೈ ತಪ್ಪಿ ಹೋಗಬಹುದು. ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿ ತರಿಸಬಹುದು. ಒಳ್ಳೆಯ ವಸ್ತುವಿನ ಲಾಭವಾಗುವುದು. ಯಾರನ್ನೂ ನೀವು ಕೆಳಮಟ್ಟದಲ್ಲಿ ಕಾಣಲು ಬೇಡ. ಉನ್ನತ ವ್ಯಾಸಂಗಕ್ಕಾಗಿ ನೀವು ಸ್ನೇಹಿತನ ಜೊತೆ ತರಳುವಿರಿ. ಸ್ಥಾನಚ್ಯುತಿಯ ಭಯವು ನಿಮ್ಮನ್ನು ಕಾಡಬಹುದು.ಮನೆಯ ಸಂದರ್ಭವನ್ನು ನೆನೆದು ದುಃಖಿಸಬಹುದು. ಬಂಧುಗಳು ನಿಮ್ಮನ್ನು ಅಳೆಯಬಹುದು.
ತುಲಾ ರಾಶಿ: ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವಿರಿ. ಮಾತನಾಡುವಾಗ ಹೆಚ್ಚು ಸ್ಪಷ್ಟತೆ ಇರಲಿ. ಹಣಕಾಸಿನ ಲೆಕ್ಕಾಚಾರದಲ್ಲಿ ನಿಮಗೆ ಕೆಲವು ಗೊಂದಲಗಳು ಬರಬಹುದು. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ನಿಯಮಗಳನ್ನು ಹಾಕಿಕೊಳ್ಳುವರು. ಅಥವಾ ಪೋಷಕರು ಹಾಕಿಕೊಡಬೇಕಾಗುವುದು. ಸಹೋದ್ಯೋಗಿಗಳ ಜೊತೆ ನಿಮ್ಮ ವರ್ತನೆಯು ಸರಿಯಾಗಿ ಇರಲಿ. ಅಧಿಕಲಾಭಕ್ಕಾಗಿ ಏನನ್ನಾದರೂ ಮಾಡಲು ಹೋಗುವುದು ಬೇಡ. ಶತ್ರುಗಳು ನಿಮ್ಮ ಕಾರ್ಯವನ್ನು ತಪ್ಪಿಸಲು ಹುಟ್ಟಿಕೊಳ್ಳಬಹುದು. ಕ್ರೀಡಾಸಕ್ತರು ಜಯಗಳಿಸುವರು. ಮನೋರಂಜನೆಗಾಗಿ ಹೆಚ್ಚು ಸಮಯವನ್ನು ನೀಡುವಿರಿ. ನಿಮ್ಮ ವಿದ್ಯೆಗೆ ಯೋಗ್ಯವಾದ ಉದ್ಯಮವನ್ನು ಅನ್ವೇಷಣೆ ಮಾಡುವಿರಿ.
ವೃಶ್ಚಿಕ ರಾಶಿ: ಲಾಭವು ಇಲ್ಲದ ಪ್ರಯಾಣವು ನಿಮಗೆ ಬೇಸರವನ್ನು ತರಿಸಬಹುದು. ನಿಮಗೆ ಪ್ರಶಂಸೆಯ ಜೊತೆ ಹೆಚ್ಚಿನ ಜವಾಬ್ದಾರಿಗಳೂ ಬರಬಹುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನೌಕರರು ಹಿಂದೇಟು ಹಾಕಬಹುದು. ಪ್ರಯಾಣದ ಆಯಾಸವನ್ನು ಪರಿಹರಿಸಿಕೊಳ್ಖುವುದು ನಿಮಗೆ ಕಷ್ಟವಾದೀತು. ಇಬ್ಬರೂ ಒಪ್ಪಿಕೊಂಡ ಸಂಗಾತಿಗಳು ದೂರವಾಗುವ ಸಾಧ್ಯತೆಯೂ ಇದೆ. ನಿಮ್ಮ ಕಂಡು ಹಾಸ್ಯ ಮಾಡಬಹುದು. ಪಕ್ಷಪಾತ ಮಾಡುವುದನ್ನು ಯಾರೂ ಒಪ್ಪಲಾರರು. ಅಧಿಕ ಖರ್ಚನ್ನು ನೀವು ನಿಯಂತ್ರಿಸುವುದು ಒಳ್ಳೆಯದೇ.
ಧನು ರಾಶಿ: ಪ್ರಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಜಯವನ್ನು ತಂದುಕೊಡುವುವು. ಸ್ವಂತ ಉದ್ಯೋಗಸ್ಥರಿಗೆ ಲಾಭವಾಗುವುದು. ಸರ್ಕಾರದ ಅಧಿಕಾರಿಗಳು ನಿಮ್ಮನ್ನು ಪೀಡಿಸಬಹುದು. ಸ್ವತಂತ್ರವಾಗಿದ್ದರೂ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎಂಬ ಭಯವು ಇರುವುದು. ಮಕ್ಕಳಿಂದ ನೀವು ಪೀಡಿತರಾಗುವಿರಿ. ದಾಂಪತ್ಯದ ಬಿರುಕನ್ನು ನೀವು ಸರಿಮಾಡಲು ಅರ್ಹರು. ಹೊಸತನ್ನು ಕಲಿಯುವ ಆಸೆಯಿದ್ದು ಅವಕಾಶವನ್ನು ಹುಡುಕುವಿರಿ. ನಿಮ್ಮ ಕುಲದಿಂದ ಗೌರವಬು ಸಿಗಬಹುದು. ಅಧಿಕಾರಯುತವಾದ ಮಾತು ಲೆಕ್ಕಕ್ಕೆ ಬಾರದು. ಹೊಸ ಆರಂಭದಲ್ಲಿ ವೇಗವನ್ನು ಪಡೆದುಕೊಳ್ಳುವುದು. ಅಕ್ರಮ ಆಸ್ತಿಯಿಂದ ತೊಂದರೆಯಾಗಬಹುದು. ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರುವಿರಿ.
ಮಕರ ರಾಶಿ: ಉದ್ಯೋಗದಲ್ಲಿ ಮನಸ್ತಾಪ ಬಂದು ನೀವು ಆ ಉದ್ಯೋಗವನ್ನು ಬಿಡುವಿರಿ. ಮೇಲಧಿಕಾರಿಗಳ ಜೊತೆ ವಾಗ್ವಾದ ಬೇಡ. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಆಗದೇ ಇರುತ್ತವೆ. ನೀವು ಹೇಳಬೇಕಾದ ವಿಷಯಗಳನ್ನು ಇನ್ನೊಬ್ಬರಿಗೆ ಹೇಳುವಿರಿ. ಕಫದಿಂದ ತೊಂದರೆ ಆಗಬಹುದು. ಭೂಮಿಯ ವಿಚಾರಕ್ಕೆ ಸಂಬAಧಿಸಿದAತೆ ಕೆಲವು ಕಾನೂನಾತ್ಮಕ ತೊಂದರೆಗಳು ಬರಬಹುದು. ಉದ್ಯಮವನ್ನು ಮಾಡುವ ಮೊದಲು ಅದರ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಿ. ಅಪರಿಚಿತರ ಕರೆಯಿಂದ ನಿಮಗೆ ಕಷ್ಟವು ಬರಬಹುದು. ನಿಮಗೆ ಏಕಾಂತ ಬೇಕೆನಿಸಿ ದೂರ ಎಲ್ಲಿಯಾದರೂ ಹೋಗುವ ಮನಸ್ಸು ಮಾಡುವಿರಿ. ಸಜ್ಜನರ ಸಹವಾಸವು ನಿಮ್ಮ ಅಹಂಕಾರದಿAದ ಇರುವ ಕಾರಣ ಸಿಗದು.
ಕುಂಭ ರಾಶಿ: ಬಹಳ ದಿನಗಳ ಅನಂತರ ದೂರಪ್ರಯಾಣವನ್ನು ಮಾಡಲು ಹೊರಟಿರುವಿರಿ. ಪುಣ್ಯಸ್ಥಳಗಳ ದರ್ಶನವನ್ನು ಮಾಡಲು ಇಚ್ಛಿಸುವಿರಿ. ಸಾಮಾಜಿಕ ಕಾರ್ಯಗಳು ನಿಮಗೆ ಯಶಸ್ಸನ್ನು ತಂದುಕೊಡಲಿವೆ. ಇರುವ ಸಮಯವನ್ನು ವ್ಯರ್ಥ ಮಾಡಿಕೊಳ್ಳದೇ ಭವಿಷ್ಯಕ್ಕೆ ಬರುವ ಹಾಗೆ ಮಾಡಿಕೊಳ್ಳಿ. ವೃತ್ತಿಯಲ್ಲಿ ನಿಮಗೆ ಭಯವು ಆರಂಭವಾಗಿದ್ದು ಆಪ್ತರ ಜೊತೆ ಹಂಚಿಕೊಳ್ಳಿ. ನಿಮ್ಮ ಸಾಮರ್ಥ್ಯವು ಎಲೆಮರೆಯ ಕಾತಿಯಂತೆ ಇರಲಿದೆ. ಪ್ರೇಮವನ್ನು ಹೇಳಿಕೊಳ್ಳಲು ನೀವು ಹಿಂದೇಟು ಹಾಕುವಿರಿ. ನಡೆಯುವ ಘಟನೆಗಳನ್ನು ಸಕಾರಾತ್ಮಕವಾಗಿ ನೋಡುವಿರಿ. ಮಕ್ಕಳ ವಿಚಾರದಲ್ಲಿ ನೀವು ದುರ್ಬಲರಾಗುವಿರಿ. ಕುಲದೇವರ ಆರಧನೆಯಿಂದ ಕಾರ್ಯಗಳು ಸಫಲವಾಗುವುವು.
ಮೀನ ರಾಶಿ: ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡಲ್ಲಿ ಕೆಲಸದಲ್ಲಿ ಪ್ರಗತಿ ಇರಲಿದೆ. ಸ್ಥಿರಾಸ್ತಿಗೆ ಸಂಬAಧಿಸಿದAತೆ ಕೆಲವು ಮಾರ್ಪಾಡುಗಳು ಆಗಬಹುದು. ಮಕ್ಕಳಿಂದ ಆಗುವ ಅಸಮಾಧಾನವನ್ನು ನೀವು ಸಹಿಸಿಕೊಳ್ಳಲಾರಿರಿ. ನಿಮ್ಮ ಇಂದಿನ ಸ್ಥೆöÊರ್ಯವು ನಿಮಗೆ ಹೆಚ್ಚಿನ ಸಹಾಯವನ್ನು ಮಾಡಬಹುದು. ನಿಮ್ಮ ಉದ್ಯೋಗಕ್ಕೆ ಬರವ ಅಡೆತಡೆಗಳನ್ನು ಸರಿಮಾಡಿಕೊಂಡು ಮುನ್ನಡೆಯುವಿರಿ. ಯುವಕರಿಗೆ ಸರಿಯಾದ ಮಾರ್ಗರ್ಶನದವು ಸಿಗದೇ ಕಷ್ಟಪಡುವಿರು. ವಾಹನ ಖರೀದಿಯ ವ್ಯವಹಾರವು ನಿಮಗೆ ಸರಿಯಾಗಿ ಮುಕ್ತಾಯವಾಗದು. ಉಪಕಾರ ಸ್ಮರಣೆಯನ್ನು ನೀವು ಬಿಡುವುದಿಲ್ಲ. ಸಹೋದರರ ನಡುವೆ ಆಪ್ತತೆಯು ಹೆಚ್ಚಾಗಬಹುದು. ನಿಮ್ಮ ಕೈತಪ್ಪಿ ಹೋದುದನ್ನು ಪುನಃ ಸ್ವಾಧೀನ ಮಾಡಿಕೊಳ್ಳುವಿರಿ