ಕೆ.ಆರ್.ಪೇಟೆ:- ತಾಲೂಕಿನ ಹರಿಹರಪುರ ಗ್ರಾಮದ ನಾಗರಾಜು ಮತ್ತು ಸರಸ್ವತಿಯ ಸುಪುತ್ರ ಪರಭಾಷೆಯ (ಹಿಂದಿ. ತಮಿಳು.) ಕಿರುತೆರೆಯ ಕಲಾವಿದರಾಗಿ ಹೊರಹೊಮ್ಮುತ್ತಿದ ಪವನ್ (25) ಹಾಲಿ ವಾಸವಾಗಿದ್ದ ಮುಂಬೈ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಮುಂಜಾನೆ 5:00 ಗಂಟೆಗೆ ತೀವ್ರ ಹೃದಯಘಾತದಿಂದ ಕೊನೆ ಉಸಿರೆಳೆದಿದ್ದಾರೆ.
ತನ್ನ ದೇಹ ಆಕರ್ಷಣೆಗಾಗಿ ಅತಿಯಾದ ವ್ಯಾಯಮಕ್ಕೆ (ಜಿಮ್)ತಲ್ಲಿನರಾಗಿದ್ದ ಕಾರಣವೇ ಈ ಘಟನೆಗೆ ಕಾರಣವಾಗಿದೆ ಎಂದು ಕುಟುಂಬಸ್ಥರ ಮೂಲಗಳು ತಿಳಿಸಿವೆ ಮೃತರ ಮೃತದೇಹವು ಮುಂಬೈನ ಆಸ್ಪತ್ರೆಯಲ್ಲಿದ್ದು ಮರಣೋತ್ತರ ಪರೀಕ್ಷೆ ನಂತರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಹರಿಹರಪುರದಲ್ಲಿರುವ ಮೃತರ ತಮ್ಮ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರ ಮೂಲಗಳು ತಿಳಿಸಿ.
ಕುಟುಂಬದ ಮಿನುಗುವ ನಕ್ಷತ್ರವಾಗಿದ್ದ ಕಲಾವಿದ ಪವನ್ ಅಗಲಿಕೆಯಿಂದ ದುಃಖದ ಮಡುವಿನಲ್ಲಿರುವ ಮೃತರ ಕುಟುಂಬಕ್ಕೆ ಶಾಸಕ ಹೆಚ್.ಟಿ. ಮಂಜು,ಮಾಜಿ ಸಚಿವ ಕೆ.ಸಿ ನಾರಾಯಣಗೌಡ, ಮಾಜಿ ಶಾಸಕ ಕೆ.ಬಿ ಚಂದ್ರಶೇಖರ, ಮಾಜಿ ಶಾಸಕ ಬಿ ಪ್ರಕಾಶ್,ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷ ಬಿ ಎಲ್ ದೇವರಾಜು,ಮನ್ಮುಲ್ ನಿರ್ದೇಶಕ ಡಾಲು ರವಿ,ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ ರಾಮೇಗೌಡ, ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ನಾಗೇಂದ್ರ ಕುಮಾರ್, ಎಂ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್, ಜೆಡಿಎಸ್ ಮುಖಂಡ ಅಕ್ಕಿಹೆಬ್ಬಾಳು ರಘು,ಟಿ ಎ ಪಿ ಸಿ ಎಂ ಎಸ್ ನಿರ್ದೇಶಕ ಬಲದೇವ್,ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್,ಸೇರಿದಂತೆ ಗಣ್ಯರು ತೀವ್ರಸಂತಾಪ ಸೂಚಿಸಿದ್ದಾರೆ.