ಮೇಷ ರಾಶಿ :
ನಿಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ÷್ಯ ಮಾಡುವುದು ಬೇಡ. ಸಂಗಾತಿಯನ್ನು ಹೆಚ್ಚು ಇಷ್ಟುಪಡುವಿರಿ. ಏನಾದರೂ ಉಡುಗೊರೆಯನ್ನು ಕೊಡುವಿರಿ. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆ ಬರುವುದು. ಮಿತ್ರರ ಸಹಾಯದಿಂದ ವಾಹನವನ್ನು ಖರೀದಿಸುವಿರಿ. ವಿದೇಶೀಯ ವ್ಯಾಪಾರದಿಂದ ಲಾಭವಾಗುವುದು. ನಿಮ್ಮ ವಿರುದ್ಧ ಯಾರಾದರೂ ಮಾತು ಕೇಳಿಬರಬಹುದು. ಹಿತಶತ್ರುಗಳ ಬಗ್ಗೆ ಗಮನವು ಅವಶ್ಯಕ. ಅಪರಿಚಿತರ ಕರೆಯನ್ನು ನಿರ್ಲಕ್ಷಿಸಿ. ದೂರ ಪ್ರಯಾಣವನ್ನು ಮಾಡುವಿರಿ. ಅನಿರೀಕ್ಷಿತವಾಗಿ ಒತ್ತಡಕ್ಕೆ ಸಿಲುಕುವಿರಿ.
ವೃಷಭ ರಾಶಿ :
ವೃತ್ತಿಯ ಸ್ಥಳದಲ್ಲಿ ನಿಮಗೆ ಕಿರಿಕಿರಿ ಆಗಬಹುದು. ಲೆಕ್ಕ ಶೋಧಕರು ಹೆಚ್ಚಿನ ಒತ್ತಡದಲ್ಲಿ ಸಿಲುಕುವರು. ಅಪರಿಚಿತರ ಜೊತೆ ಮಾತನ್ನು ಕಡಿಮೆ ಮಾಡಿ. ಸಂಗಾತಿಯ ಮಾತು ನಿಮಗೆ ಇಷ್ಟವಾಗದೇ ಹೋಗದಬಹುದು. ಕಫಕ್ಕೆ ಸಂಬAಧಿಸಿದ ರೋಗವು ಬರಬಹುದು. ವಾಹನದಿಂದ ತೊಂದರೆಯಾಗಬಹುದು. ಮಿತ್ರರನ್ನು ಪಾಲುದಾರರನ್ನಾಗಿ ಮಾಡುವಿರಿ. ರಾಜಕಾರಣಿಗಳು ಹಿನ್ನಡೆಯನ್ನು ಪಡೆಯುವರು. ನಿಮ್ಮ ಮಾತಿಗೆ ವಿರೋಧವು ಬರುವುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಇಂದು ಸಮಯವನ್ನು ಸಂತೋಷದಿAದ ಕಳೆಯುವಿರಿ.
ಮಿಥುನ ರಾಶಿ :
ಹಿಂದೆ ಮಾಡಿದ ಹೂಡಿಕೆಯು ಇಂದು ಪ್ರಯೋಜನವಾಗುವುದು. ಸ್ವಂತ ವ್ಯವಹಾರವು ಲಾಭದಾಯಕವಾಗುವುದು. ಮನೆಯನ್ನು ಬದಲಾಯಿಸಬೇಕಾಗಬಹುದು. ಕಛೇರಿಯ ಒತ್ತಡದಿಂದ ಕುಟುಂಬದ ಜೊತೆ ಕಳೆಯುವುದು ಆಗದು. ಯಾರದೋ ವಿಚಾರಕ್ಕೆ ನಿಮ್ಮನ್ನು ತೋರಿಸುವರು. ನೀವು ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಪಡುವಿರಿ. ಇಷ್ಟದೇವರ ಆರಾಧನೆಯನ್ನು ಮಾಡುವ ಮನಸ್ಸು ಮಾಡುವಿರಿ. ಸಂಬAಧಗಳನ್ನು ನೀವು ಚೆನ್ನಾಗಿ ಇಟ್ಟುಕೊಳ್ಳುವಿರಿ. ನಿದ್ರೆಯಿಂದ ಸುಖವು ಸಿಗಲಿದೆ.
ಕರ್ಕ ರಾಶಿ :
ನಿಮ್ಮ ಹಳೆಯ ವಸ್ತುಗಳನ್ನು ಆರ್ಥಿಕ ಸಮಸ್ಯೆಯಿಂದಾಗಿ ಮಾರಾಟ ಮಾಡುವಿರಿ. ಸ್ಥಿರಾಸ್ತಿಯನ್ನೂ ಕಳೆದುಕೊಳ್ಳುವ ಸ್ಥಿತಿಯು ಬರಬಹುದು. ಮನೆಯವರ ಜೊತೆ ಚರ್ಚಿಸಿ ತೀರ್ಮಾನಿಸಿ. ಪ್ರಯಾಣ ಮಾಡವ ಮನಸ್ಸಿದ್ದರೂ ಶರೀರಕ್ಕೆ ಅದು ಅಸಾಧ್ಯ ಎನಿಸಬಹುದು. ಬೇಕು ಎನಿಸಿದವರಿಗೆ ಸಹಾಯವನ್ನು ಮಾಡುವಿರಿ. ನೀವು ನಂಬಿಕೆಯನ್ನು ಒಂದು ಮಾತಿನಿಂದ ಕಳೆದುಕೊಳ್ಳುವಿರಿ. ಆಕಸ್ಮಿಕವಾಗಿ ಅಶುಭವಾರ್ತೆಯು ಬರಲಿದೆ. ಕಾರ್ಯದ ಒತ್ತಡವನ್ನು ನೀವು ಕಡಿಮೆ ಮಾಡಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಚಿಂತೆ ಇರಲಿದೆ.
ಸಿಂಹ ರಾಶಿ :
ಆಲಸ್ಯದಿಂದಾಗಿ ನಿಮಗೆ ಸಿಗುವ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಅಲಂಕಾರಿಕ ವಸ್ತುಗಳನ್ನು ಹೆಚ್ಚು ಬಳಕೆ ಮಾಡುವಿರಿ. ನಿಮ್ಮ ಮಾತುಗಳು ಅಸ್ಪಷ್ಟವಾಗಿರುವುದು. ಹೊಸ ವಿಚಾರಗಳ ಕಲಿಕೆಗೆ ಅವಕಾಶಗಳು ಸಿಗುವುದು. ಆರ್ಥಿಕತೆಯನ್ನು ಸದೃಢ ಮಾಡಿಕೊಳ್ಳುವಿರಿ. ವ್ಯಾಪಾರದಲ್ಲಿ ಸಂಪತ್ತನ್ನು ಪಡೆದುಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಹಳೆಯ ಸ್ನೇಹಿತರ ಬಗ್ಗೆ ನಿಮಗೆ ಅಸಮಾಧಾನವಿರುವುದು. ಪುಣ್ಯಕ್ಷೇತ್ರಕ್ಕೆ ಕುಟುಂಬದ ಜೊತೆ ಹೋಗುವಿರಿ. ಸಾಹಿತ್ಯಾಸಕ್ತರಿಗೆ ಪ್ರಶಂಸೆಯು ಸಿಗುವುದು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯು ಕಷ್ಟವಾಗುವುದು.
ಕನ್ಯಾ ರಾಶಿ :
ವೃತ್ತಿಯ ಸ್ಥಳದಲ್ಲಿ ನಿಮಗೆ ಕಿರಿಕಿರಿಯಾಗಲಿದೆ. ಸಹೋದ್ಯೋಗಿಗಳಿಂದ ನಿಮಗೆ ಅಸಹಕಾರವು ಸಿಗುವುದು. ಸಣ್ಣ ತಪ್ಪನ್ನೂ ಅಪಹಾಸ್ಯ ಮಾಡುವರು. ನೀವು ಹೋಗುತ್ತಿರುವ ಮಾರ್ಗದ ಬಗ್ಗೆ ನಿಮಗೆ ಸಂದೇಹವು ಬರಬಹುದು. ಉಸಿರಾಟಕ್ಕೆ ಸಂಬAಧಿಸಿದAತೆ ತೊಂದರೆಯಾಗಲಿದೆ. ವಿವಾಹಕ್ಕಾಗಿ ಹೆಚ್ಚು ತಿರುಗಾಟವಿರಲಿದೆ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ನಿಮಗೆ ಆಗದು. ನಿಮ್ಮ ತಿಳಿವಳಿಕೆಯ ಮಟ್ಟಾವು ನಿಮಗೆ ಗೊತ್ತಾಗಲಿದೆ. ನಿಮ್ಮ ಮಾತನಲ್ಲೂ ಇಂದು ವ್ಯಂಗ್ಯ ಇರಲುದೆ. ದೂರವಿದ್ದ ಸಂಗಾತಿಯನ್ನು ನೀವು ಭೇಟಿ ಮಾಡುವಿರಿ. ಅನಗತ್ಯ ಖರ್ಚಿಗೆ ಅವಕಾಶವನ್ನು ಕೊಟ್ಟು ಸಂಕಟಪಡುವಿರಿ.
ತುಲಾ ರಾಶಿ :
ಸ್ಥಿರಾಸ್ತಿಯ ವಿಚಾರದಲ್ಲಿ ನಿಮಗೆ ಲಾಭವಾಗುವುದು. ಯಾವುದೇ ಸಂದರ್ಭವು ಬಂದರೂ ಅದನ್ನು ಧೈರ್ಯದಿಂದ ಎದುರಿಸುವಿರಿ. ನಿಮಗೆ ಅಭದ್ರತೆಯು ಕಾಡಬಹುದು. ಸ್ನೇಹಿತರ ಸಹವಾಸದಿಂದ ನಿಮಗೆ ಅಪವಾದಗಳು ಬರಬಹುದು. ಮಕ್ಕಳಿಂದ ಸಂತೋಷವು ಸಿಗಲಿದೆ. ನಿಮ್ಮ ರಹಸ್ಯವನ್ನು ತಿಳಿದು ನಿಮಗೆ ತೊಂದರೆಕೊಡುವರು. ಆಪ್ತರು ನಿಮ್ಮ ಮಾತನ್ನು ಕಡಿಮೆ ಮಾಡುವರು. ನಿಮ್ಮ ಸಮಯವು ಬೇರೆಯವರ ಕಾರಣಕ್ಕೆ ದುರಪಯೋಗವಾಗಬಹುದು. ತೊಂದರೆಯಾಗುತ್ತದೆ ಎಂದು ಏನನ್ನೂ ಮಾಡದೇ ಇರುವುದು ಬೇಡ. ಹೊಸ ವಸ್ತುವನ್ನು ಖರೀದಿಸುವಾಗ ಪರೀಕ್ಷಿಸಿ. ನಿಮ್ಮ ನಿಲುವು ಸ್ಪಷ್ಟವಾಗಿರಿ.
ವೃಶ್ಚಿಕ ರಾಶಿ :
ಹಳೆಯ ನೋವು ಮತ್ತೆ ಬರಬಹುದು. ಸಂಗಾತಿಯ ನಡುವೆ ಅತಿಯಾದ ಕಲಹವು ಆಗಬಹುದು. ಆಸ್ತಿಯ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಉದ್ಯೋಗವನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಯಾರದೋ ಮನಸ್ಸಿಗೂ ನೋವಾಗುವಂತೆ ಮಾತನಾಡುವಿರಿ. ನಿಮ್ಮ ಆರೋಗ್ಯದ ರಕ್ಷಣೆಯ ಬಗ್ಗೆ ನಿಮಗೇ ನಂಬಿಕೆ ಸಾಲದು. ನಿರ್ಲಕ್ಷ÷್ಯದಿಂದ ನೀವು ಹಣವನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳೂ ಹಿನ್ನಡೆಯನ್ನು ಸಾಧಿಸುವರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆಯು ಕಾಣಿಸುವುದು. ಕಣ್ಣಿನ ತೊಂದರೆಯು ಹೆಚ್ಚಾಗಬಹುದು.
ಧನು ರಾಶಿ :
ಯಾರ ಜೊತೆ ಹೇಗೆ ವ್ಯವಹರಿಸಬೇಕು ಎಂಬ ಔಚಿತ್ಯದ ಕೊರತೆಯು ಕಾಣಿಸುವುದು. ವ್ಯಾಪಾರದಲ್ಲಿ ಇದು ಬಹಳ ಮುಖ್ಯವಾಗಿ ಬೇಕಾಗಬಹುದು. ಸ್ತಿçÃಯರ ಮಾತಿಗೆ ನಿಮ್ಮ ಬೆಂಬಲವು ಇರಲಿದೆ. ಆಕಸ್ಮಿಕ ಧನಲಾಭವು ನಿಮಗೆ ಗೊಂದಲವನ್ನೂ ಸಂತೋಷವನ್ನೂ ತರುವುದು. ಸಂಗಾತಿಯ ಜೊತೆ ಅಕಾರಣವಾಗಿ ಕಲಹವಾಗಬಹುದ. ಮನೆಯಿಂದ ದೂರದಲ್ಲಿ ವಾಸ ಮಾಡುವ ಸ್ಥಿತಿಯು ಬರಬಹುದು. ಆಪ್ತರನ್ನು ದೂರ ಮಾಡಿಕೊಳ್ಳುವುದು ನಿಮಗೆ ಕಷ್ಟವಾದೀತು. ನಿಮ್ಮ ಯೋಜನೆಯನ್ನು ನೀವಂದುಕೊAಡAತೆ ನಡೆಸಲಾಗದು. ಹೆಚ್ಚು ನಿದ್ರೆಯಲ್ಲಿ ಸಮಯವನ್ನು ಕಳೆಯುವಿರಿ.
ಮಕರ ರಾಶಿ :
ನಿಮ್ಮ ಕಾರ್ಯಗಳಿಗೆ ಕೂಡಲೇ ಫಲವನ್ನು ನಿರೀಕ್ಷಿಸುವ ಅಗತ್ಯವಿಲ್ಲ. ನಿಮ್ಮ ಕಾರ್ಯದಲ್ಲಿ ನಿಷ್ಠೆಯಿಂದ ಇರಲಿ. ವ್ಯಾಪಾರದಲ್ಲಿ ಲಾಭಗಳಿಸಲು ಹೋಗಿ ಮುಗ್ಗರಿಸಬಹುದು. ಇನ್ನೊಬ್ಬರಿಗೆ ಸಹಾಯವನ್ನು ಮಾಡುವ ಮನಸ್ಸಾಗುವುದು. ಮಕ್ಕಳಿಂದ ಶುಭಸಮಾಚಾರವು ಬರಲಿದೆ. ತಪ್ಪಿಲ್ಲದೇ ಇದ್ದರೂ ತಲೆ ತಗ್ಗಿಸಬೇಕಾದ ಸ್ಥಿತಿಯು ಬರಬಹುದು. ಸಾಹಸ ಕಾರ್ಯಗಳಿಗೆ ಹೋಗುವುದು ಬೇಡ. ಸಿಟ್ಟಾಗಲು ಇಂದು ನಿಮಗೆ ಬಹಳ ಅವಕಾಶಗಳು ಸಿಗಲಿದೆ. ನಿಮ್ಮ ವರ್ತನೆಯ ಮೇಲೆ ಮುಂದಿನದ್ದು ನಿರ್ಣಯವಾಗುವುದು. ಒತ್ತಡದಿಂದ ಮುಕ್ತರಾಗ ಸಂದರ್ಭವು ಬರಬಹುದು.
ಕುಂಭ ರಾಶಿ :
ನಿಮ್ಮ ಬಗ್ಗೆ ಕುಟುಂಬಕ್ಕೆ ಕನಿಕರ ಬರಬಹುದು. ಉದ್ಯೋಗಕ್ಕೆ ಬಂಧುಗಳಿAದ ಸಹಾಯ ದೊರೆಯುವುದು. ವೃತ್ತಿಯಲ್ಲಿ ಯಶಸ್ಸು ಸಿಗಲಿದೆ. ಕೆಲಸಗಳಿಗೆ ನಿಮ್ಮ ಮೇಲೆ ಒತ್ತಡ ಬರಬಹುದು. ಸ್ನೇಹಿತರ ಮಧ್ಯದಲ್ಲಿ ಅನ್ಯರ ಪ್ರವೇಶವು ಆಗಬಹುದು. ನಿಮ್ಮ ವೈಫಲ್ಯವನ್ನು ನೀವು ಸಕಾರಾತ್ಮಕವಾಗಿಯೇ ತೆಗೆದುಕೊಳ್ಳುವಿರಿ. ಹೆಚ್ಚಿನ ವೆಚ್ಚಕ್ಕೆ ಕಡಿವಾಣ ಹಾಕುವ ನಿರ್ಧಾರವನ್ನು ಮಾಡುವಿರಿ. ಉದರಕ್ಕೆ ಸಂಬAಧಿಸಿದ ತೊಂದರೆ ಕಾಣಿಸಿಕೊಳ್ಳಬಹುದು. ಮನೆಯಲ್ಲಿಯೇ ಸೂಕ್ತ ಔಷಧವನ್ನು ಮಾಡಿಕೊಳ್ಳಿ. ಶನೈಶ್ಚರನಿಗೆ ಪ್ರೀತ್ಯರ್ಥವಾಗಿ ಎಳ್ಳನ್ನು ದಾನವಾಗಿ ಕೊಡಿ. ಗೋಗ್ರಾಸವನ್ನು ಕೊಟ್ಟು ಗೋಸೇವೆಯನ್ನು ಮಾಡಿ.
ಮೀನ ರಾಶಿ :
ಉದ್ಯೋಗವು ಮಂದಗತಿಯಲ್ಲಿ ಸಾಗಲಿದೆ. ಮಾನಸಿಕ ಜಾಡ್ಯವು ನಿಮ್ಮ ಎಲ್ಲ ಕೆಲಸವೂ ಹಿಂದುಳಿಯುವುದು. ಹಿರಿಯರಿಗೆ ಅಗೌರವವನ್ನು ಕೊಡುವುದು ಬೇಡ. ವಾಹನದಿಂದ ಗಾಯವಾಗಲಿದೆ. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ಅರ್ಥಿಕವಾಗಿ ಕಷ್ಟವಿದ್ದರೂ ವಿದ್ಯಾಭ್ಯಾಸಕ್ಕೆ ಒತ್ತು ಕೊಡುವಿರಿ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ನಿಮಗೆ ಸಿಕ್ಕ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವಿರಿ. ಅನಧಿಕೃತ ವ್ಯವಹಾರದಿಂದ ನಿಮಗೆ ತೊಂದರೆಯಾಗಲಿದೆ. ನಿಮ್ಮ ಮಿತ್ರರನ್ನು ಭೇಟಿಯಾಗಲಿದ್ದೀರಿ. ಕುಲದೇವರ ಅರಾಧನೆಯಲ್ಲಿ ಸಮಯವನ್ನು ಕಳೆಯುವಿರಿ.