ಮಂಡ್ಯ: ಮಳೆರಾಯ ಕರುಣೆ ತೋರದ ಹಿನ್ನೆಲೆ ಆಗಸ್ಟ್ ತಿಂಗಳ ಆರಂಭದಿಂದಲೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಏರುತ್ತಲೇ ಇದೆ. ಅಲ್ಲದೆ ಪ್ರಮುಖ ಜಲಾಶಯಗಲ್ಲಿ ನೀರಿನ ಮಟ್ಟವೂ ಕೂಡ ಕುಸಿಯುತ್ತಿದೆ. ಅದರಲ್ಲೂ ಇಂದು ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳ ಜೀವನಾಡಿಯಾದ ಕೃಷ್ಣರಾಜ ಸಾಗರ ದಲ್ಲಿ ನೀರಿನ ಮಟ್ಟ 104 ಅಡಿಗೆ ಕುಸಿದಿದೆ.
ಇದೀಗ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗತ್ತಲೇ ಇದ್ದು, ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಇದನ್ನು ಗಮನಿಸಿದೆ ಬೇಸಿಗೆ ಕಣ್ಣಮುಂದೆ ಬಂದಾಂತಾಗುತ್ತದೆ. ಮತ್ತೊಂದೆಡೆ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಆಗಸ್ಟ್ ತಿಂಗಳ ಕೊನೆಯಲ್ಲಿ ಮಳೆಯಾಗದಿದ್ದರೆ ಭರದ ಛಾಯೆ ಆವರಿಸುವುದಂತೂ ಖಚಿತ ಎನ್ನುವಂತಾಗಿದೆ.
ಬುಧವಾರ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 104.62 ಅಡಿಗೆ ಕುಸಿತ ಕಂಡಿದೆ. ಇದರಿಂದ ಇದನ್ನೇ ನಂಬಿಕೊಂಡು ಕುಳಿತಿದ್ದ ಸಕ್ಕರೆ ನಾಡು ಮಂಡ್ಯ, ಸಾಂಸ್ಕೃತಿ ನಗರಿ ಮೈಸೂರು, ರಾಜ್ಯದ ರಾಜಧಾನಿ ಬೆಂಗಳೂರಿನ ಜನರಲ್ಲಿ ಆತಂಕ ಮನೆ ಮಾಡಿದೆ. ಹಾಗಾದರೆ ಇನ್ನುಳಿದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಕೆಆರ್ಎಸ್ ಜಲಾಶಯ ನೀರಿನ ಮಟ್ಟ:
* ಗರಿಷ್ಠ ನೀರಿನ ಮಟ್ಟ – 124.80 ಅಡಿ
* ಇಂದಿನ ನೀರಿನ ಮಟ್ಟ- 104.62 ಅಡಿ
* ಒಳಹರಿವು – 4,986 ಕ್ಯೂಸೆಕ್
* ಹೊರಹರಿವು – 11,797 ಕ್ಯೂಸೆಕ್