ಮಂಡ್ಯ:- ಮಳೆ ಅಭಾವ ಮತ್ತು ತಮಿಳುನಾಡಿಗೆ ನೀರು ಬಿಟ್ಟ ಹಿನ್ನೆಲೆ ಕೆ ಆರ್ ಎಸ್ ಜಲಾಶಯದ ಮಟ್ಟ ಕುಸಿಯುತ್ತಿದೆ. ಇಂದು ನೀರಿನ ಮಟ್ಟ 99.86 ಅಡಿ ಇದೆ. ಅದಕ್ಕೆ ರೈತರು ಆತಂಕಕ್ಕೊಳಗಾಗಿದ್ದಾರೆ.
ರಾಜ್ಯದಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದ್ದರೂ, ಕರ್ನಾಟಕ ಸರ್ಕಾರವು ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದು ಕೆ ಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿದೆ.
ಮಳೆ ಅಭಾವ ಮತ್ತು ತಮಿಳುನಾಡಿಗೆ ನೀರು ಬಿಟ್ಟ ಹಿನ್ನೆಲೆ ಕೆ ಆರ್ ಎಸ್ ಜಲಾಶಯದ ಮಟ್ಟ ಕುಸಿಯುತ್ತಿದೆ. ಇಂದು ನೀರಿನ ಮಟ್ಟ 99.86 ಅಡಿ ಇದೆ. ಇದಕ್ಕೆ ರೈತರು ಆತಂಕಕ್ಕೊಳಗಾಗಿದ್ದಾರೆ.
ಮೊನ್ನೆಯಷ್ಟೇ ಕೆ ಆರ್ ಎಸ್ ನೀರಿನ ಮಟ್ಟ 100.96 ಅಡಿಗೆ ಕುಸಿದಿತ್ತು. ಈಗ ಮತ್ತೆ ಕಡಿಮೆಯಾಗಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಸದ್ಯ ಈಗ 99.86 ಅಡಿಗೆ ಕುಸಿದಿದೆ.
ಜಲಾಶಯದ ಗರಿಷ್ಠ ಮಟ್ಟ 124.80 ಅಡಿ, ಒಳಹರಿವು 2870 ಕ್ಯೂಸೆಕ್, ಹೊರಹರಿವು 7053 ಕ್ಯೂಸೆಕ್,ಇಂದಿನ ಮಟ್ಟ 99.86 ಅಡಿ, ಗರಿಷ್ಠ 49.452 ಟಿಎಂಸಿ, ಇಂದು 22.700 ಟಿಎಂಸಿ ಇದೆ.