ಆರ್ ಸಿಎಚ್ ವರದಿ
ಮೈಸೂರು: ರಂಗ ಸಂಪದ ತಂಡದ ಅಧ್ಯಕ್ಷ ಜೆ.ಲೋಕೇಶ್ ಮಾತನಾಡಿ, 1972 ರಲ್ಲಿ ಇಂದಿಗೆ 51 ವರ್ಷ ಪೂರೈಸಿದೆ. ಈ ವೇಳೆ ಅನೇಕ ಮೈಲಿಗಲ್ಲನ್ನು ದಾಟಿದ್ದೇವೆ. ಹಿಂದೆಯೆಲ್ಲಾ ಶತಮಾನೋತ್ಸವ ಭವನದಲ್ಲಿ ಅನೇಕ ನಾಟಕ ಮಾಡಿದ್ದೇವೆ. ಇಂದು ಮಂಡ್ಯ ರಮೇಶ್ ನಟ ರಂಗ ವೇದಿಕೆ ಸಿದ್ದವಾಗಿದೆ. 50 ವರ್ಷದ ಸಂಭ್ರಮದಂದೂ ಡಿ.ಸುರೇಶ್ ನಿರ್ದೇಶನದ ‘ಲೋಕದ ಒಳ ಹೊರಗೆ’ ನಾಟಕವನ್ನು ಅ.7ರಲ್ಲಿ ಕುವೆಂಪುನಗರದ ನಟನದಲ್ಲಿ ಸಂಜೆ 6.30ಕ್ಕೆ ಪ್ರದರ್ಶನ ನಡೆಯಲಿದೆ ಎಲ್ಲರೂ ಇದರಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ನಿರ್ದೇಶಕರಾದ ಡಿ.ಸುರೇಶ್ ಮಾತನಾಡಿ, ಈ ಕಾದಂಬರಿಯನ್ನು ರವೀಂದ್ರ ನಾಥ್ ಠಾಗೂರ್ ಅವರು ನಿಯತಕಾಲಿಕೆಯಲ್ಲಿ ಧಾರವಾಹಿಯ ರೂಪದಲ್ಲಿ ತಂದಿದ್ದರು. ಅದೇ ಕಾದಂಬರಿಯನ್ನು ಈಗ ನಾಟಕದ ರೂಪದಲ್ಲಿ ತರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ನಾಟಕ ಪ್ರದರ್ಶನ ಮಾಡುವ ಆಲೋಚನೆಯೂ ನಮಗಿದೆ ಎಂದರು.
ಮಂಡ್ಯ ರಮೇಶ್ ಮಾತನಾಡಿ, 50 ವರ್ಷ ಕಲಾತಂಡ ಚಟುವಟಿಕೆ ನಡೆಯುವುದು ಸುಲಭದ ಮಾತಲ್ಲ. ಒಂದೇ ತಂಡದ ಇಬ್ಬರು ನಾಟಕ ಅಕಾಡೆಮಿಗೆ ಅಧ್ಯಕ್ಷರಾದದ್ದು ಈ ತಂಡದ ಹಿರಿಮೆಯಾಗಿದೆ. ಇಲ್ಲಿ ಅಭಿನಯಿಸಿರುವ ಉಮಾಶ್ರೀ ಅವರು ಸಚಿವರಾಗಿ ಹೊರ ಹೊಮ್ಮಿರುವುದು ರಂಗಸಂಪದದ ವಿಶೇಷತೆಯಾಗಿದೆ ಎಂದರು.
ನಾಟಕದ ಅವಧಿ ನೂರು ನಿಮಿಷಗಳಾಗಿದ್ದು, 150 ರೂ. ಪ್ರವೇಶದರ ಇರಲಿದೆ.
ಕಾರ್ಯದರ್ಶಿ ನಾಗೇಶ್, ಗಣೇಶ ಅಮಿನಗಡ
ಅ.7ಕ್ಕೆ ಡಿ.ಸುರೇಶ್ ಅವರ ‘ಲೋಕದ ಒಳಹೊರಗೆ’ ನಾಟಕ ಪ್ರದರ್ಶನ
![](https://stateroute.in/wp-content/uploads/no-image.jpg)