ಆರ್ ಸಿಎಚ್ ವರದಿ
ಮೈಸೂರು: ಸರಳ, ವೈಭವವೂ ಅಲ್ಲದ ಸಂಪ್ರದಾಯಿಕ ದಸರೆಗೆ ಸರ್ಕಾರ ತೀರ್ಮಾನಿಸಿದ ಬೆನ್ನಲ್ಲೇ ಕೈಗಾರಿಕಾ ದಸರೆ ಇಲ್ಲವಾಗಿರುವುದು ಕೈಗಾರಿಕೋದ್ಯಮಿಗಳಿಗೆ ಬೇಸರ ತರಿಸಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅದ್ಧೂರಿ ದಸರೆ ಆಚರಣೆಗೆ ಕತ್ತರಿ ಬಿದ್ದಿದೆ. ಈಹಿನ್ನೆಲೆಯಲ್ಲಿ ಹಲವು ದಸರೆಯನ್ನು ಕೈ ಬಿಡಲಾಗಿದೆ. ಅದರ ಭಾಗವಾಗಿ ಕೈಗಾರಿಕೆಗಳ ಸ್ಥಾಪನೆ, ಮುನ್ನಡೆಸುವ ಕುರಿತು ಸರ್ಕಾರದ ಇನ್ನಿತರ ವಿಚಾರಗಳ ವಿನಿಮಯಕ್ಕೆ ವೇದಿಕೆಯಾಗಿದ್ದ ಕೈಗಾರಿಕಾ ದಸರೆಯನ್ನು ಈ ಬಾರಿ ಕೈ ಬಿಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು ಅವರು ಸಂಬಂಧಿಸಿದ ಇಲಾಖೆಯವರು ಈ ಬಾರಿ ಕೈಗಾರಿಕೆ ದಸರೆ ನಡೆಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಂದಿ ಕೈಗಾರಿಕೆಗಳ ಸ್ಥಾಪಿಸಲು ಉತ್ತೇಜಿಸುವ ಇಂತಹ ಕಾರ್ಯಕ್ರಮ ನಿಲ್ಲಿಸಿರುವುದು ಬೇಸರದ ಸಂಗತಿಯಾಗಿದೆ. ರೈತರ ವಿಚಾರ ಮುಂದಿಟ್ಟಿರುವ ಹಿನ್ನೆಲೆಯಲ್ಲಿ ನಾವು ಸಹ ಹೆಚ್ವಾಗಿ ಹೇಳದಂತಾಗಿದೆ ಎಂದು ತಿಳಿಸಿದ್ದಾರೆ.