ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ರ ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿನ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ಯಶಸ್ವಿಯಾಗಿದೆ.
ಮೈಸೂರು ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಆವರಣದಲ್ಲಿ ತಾಲೀಮು ನಡೆಯಿತು. ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಿ ಅಭ್ಯಾಸ ಮಾಡಲಾಯಿತು. 7 ಪಿರಂಗಿಗಳ ಮೂಲಕ ಮೂರು ಸುತ್ತಿನ ತಾಲೀಮು ನಡೆಯಿತು. ತಾಲೀಮಿನಲ್ಲಿ 43 ಅಶ್ವಾರೋಹಿ ದಳ ಭಾಗವಹಿಸಿದ್ದವು.
ಚಿನ್ನದ ಅಂಬಾರಿ ನೇತೃತ್ವವಹಿಸಿರುವ ಅಭಿಮನ್ಯು ನೇತೃತ್ವದ 14 ಆನೆಗಳು ಭಾಗಿಯಾಗಿದ್ದವು. ಪೋಲಿಸರು, ಅಶ್ವಾರೋಹಿ ದಳ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಅನೇಕರು ಭಾಗವಹಿಸಿದ್ದರು.
ಮೊದಲ ತಾಲೀಮಿನಲ್ಲಿ ಸುಗ್ರೀವ ಹಾಗೂ ಹಿರಣ್ಯ ಆನೆಗಳು ವಿಚಲರಿತರಾಗಿ ಬೆದರಿದವು. ಮುನ್ನೆಚ್ಚರಿಕೆಯಾಗಿ ಆನೆ ಎರಡು ಕಾಲುಗಳಿಗೆ ಸರಪಳಿ ಕಟ್ಟಿದ್ದರಿಂದ ಆನೆಗಳು ನಿಂತಲ್ಲ ಅಲುಗಾಡಿದವು. ಮೊದಲ ಬಾರಿ ಭಾಗಿಯಾಗಿರುವ ಹಿರಣ್ಯ ಎರಡನೇ ಬಾರಿ ಭಾಗಿಯಾಗಿರುವ ಸುಗ್ರೀವನೂ ಸಹ ಹೆದರಿ ಸದ್ದು ಮಾಡಿದ್ದು ಕಂಡು ಬಂದಿತು.
ಇನ್ನು ಸಿಡಿಮದ್ದು ತಾಲೀಮಿಗೆ ಅಶ್ವಗಳು ಹೆದರಿದ್ದು ಕಂಡು ಬಂದಿತು.