ಮೈಸೂರು: ಮೈಸೂರಿನ ಮಂಡಿ ಠಾಣಾ ವ್ಯಾಪ್ತಿಯಲ್ಲಿ ಹಾಡು ಹಗಲೇ ಹೋಟೆಲ್ ಮುಂಭಾಗ ಇಬ್ಬರೂ ವ್ಯಕ್ತಿಗಳು ಲಾಂಗ್ ಹಿಡಿದು ವ್ಯಕ್ತಿಯೋರ್ವನಿಗೆ ಹೊಡೆಯಲೆತ್ನಿಸಿರುವ ವಿಡಿಯೋ ವೈರಲ್ ಆಗಿದೆ.
ನಗರದಲ್ಲೆಡೆ ದಸರಾಗೆ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ಮಂಡಿ ಮೊಹಲ್ಲಾದ ಹನುಮಂತು ಹೋಟೆಲ್ ಸಮೀಪ ಬಳಿ ಇಂತಹದೊಂದು ಘಟನೆ ನಡೆದಿದ್ದು, ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ. ಈ ಸಂಬಂಧ ಮಂಡಿ ಠಾಣೆಯಲ್ಲಿ ದೂರು ದಾಖಲಾಗಿದೆ.