ನೀವು ಚಿಕನ್ ಪ್ರಿಯರೇ? ಹಾಗಾದರೆ ನಿಮಗೆ ನಾವು ತುಂಬಾ ಸುಲಭದಲ್ಲಿ ಮಾಡಬಹುದಾದ ಯಮ್ಮಿ ಚಿಕನ್ ಸ್ನಾಕ್ಸ್ ರೆಸಿಪಿ ಹೇಳುತ್ತೇವೆ. ಇದನ್ನು ನೀವು ಮಾಡಿ ಸವಿದರೆ ನಿಮ್ಮ ಫೇವರೆಟ್ ರೆಸ್ಟೋರೆಂಟ್ ಶೆಫ್ನಂತೆಯೇ ನನಗೂ ಅಡುಗೆ ಮಾಡೋಕೆ ಬರುತ್ತೆ ಎಂಬ ಆತ್ಮವಿಶ್ವಾಸ ಬರುವುದರಲ್ಲಿ ನೋ ಡೌಟ್, ಅಷ್ಟೊಂದು ರುಚಿಯಾಗಿರುತ್ತದೆ.
ಈ ಚಿಕನ್ ಸ್ನಾಕ್ಸ್ ಮಾಡಲು ತುಂಬಾ ಸಾಮಗ್ರಿ ಬೇಕಾಗಿಲ್ಲ, ಮಾಮೂಲಿಯಾಗಿ ಕಿಚನ್ನಲ್ಲಿರುವ ಸಾಮಗ್ರಿಗಳೇ ಸಾಕು, ಅಲ್ಲದೆ ಹೆಚ್ಚು ಸಮಯ ಕೂಡ ಬೇಕಾಗಿಲ್ಲ. ಮೀನು ಫ್ರೆಶ್ ಇದೆಯೇ? ಇಲ್ಲವೇ ಎಂದು ತಿಳಿಯಲು ಈ ಸಿಂಪಲ್ ಟೆಸ್ಟ್ ಮಾಡಿಮೀನು ಫ್ರೆಶ್ ಇದೆಯೇ? ಇಲ್ಲವೇ ಎಂದು ತಿಳಿಯಲು ಈ ಸಿಂಪಲ್ ಟೆಸ್ಟ್ ಮಾಡಿ ಇದನ್ನು ನೀವು ಸಂಜೆ ಸ್ನಾ÷್ಯಕ್ಸ್ಗೆ ಮಾಡಬಹುದು ಅಥವಾ ನೈಡ್ ಡಿನ್ನರ್ಗೆ ಸ್ಪೆಷಲ್ ಐಟಂ ಆಗಿ ಸೇರಿಸಿಬಹುದು,
ತಡವೇಕೆ? ರೆಸಿಪಿ ನೋಡೋಣ: ಬೇಕಾಗುವ ಸಾಮಗ್ರಿ *1/4 ಕೆಜಿ ಬೋನ್ಲೆಸ್ ಚಿಕನ್ *1/2 ಕಪ್ ಮಜ್ಜಿಗೆ * 1/ 2 ಚಮಚ ಜೋಳದ ಹಿಟ್ಟು (ಕಾರ್ನ್ ಫ್ಲೋರ್) * 1/2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ * 1/8 ಚಮಚ ಅರಿಶಿಣ ಪುಡಿ * 1/ 2 ಚಮಚ ಖಾರದ ಪುಡಿ ರುಚಿಗೆ ತಕ್ಕ ಉಪುö್ಪ ಸಾಸ್ 2-3 ಬಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು) ಸ್ವಲ್ಪ ಕರಿಬೇವು ಸ್ವಲ್ಪ ಪುದೀನಾ 1 ಚಮಚ ಸೋಯಾ ಸಾಸ್ 1/ 2 ಚಮಚ ಖಾರದ ಪುಡಿ 1/2 ಚಮಚ ಗರಂ ಮಸಾಲ 3 ಚಮಚ ಮೊಸರು
ಮಾಡುವ ವಿಧಾನ * ಚಿಕನ್ ಅನ್ನು ಮಜ್ಜಿಗೆಯಲ್ಲಿ ನಾಲ್ಕು ಗಂಟೆ ಕಾಲ ನೆನೆ ಹಾಕಿ. ನಂತರ ಸೋಸಿ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಜೋಳದ ಹಿಟ್ಟು, ಖಾರದ ಪುಡಿ, ರುಚಿಗೆ ತಕ್ಕ ಉಪುö್ಪ ಹಾಕಿ ಮಿಶ್ರ ಮಾಡಿಡಿ. * ನಂತರ ಚಿಕನ್ ಅನ್ನು ಡೀಪ್ ಫ್ರೆöÊ ಮಾಡಿಡಿ, ಬೇಕಿದ್ದರೆ ಪ್ಯಾನ್ ಫ್ರೆöÊ ಮಾಡಿಡಬಹುದು. * ನಂತರ ಮಸಾಲೆ ಮಾಡಲು ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಹಸಿ ಮೆಣಸು, ಕರಿಬವು ಹಾಕಿ ಫ್ರೆöÊ ಮಾಡಿ, ಬೆಳ್ಳುಳ್ಳಿ ಜೊತೆಗೆ ಹಾಕಿ ಫ್ರೆöÊ ಮಾಡಿ. ಕರಿಬೇವು-ಬೆಳ್ಳುಳ್ಳಿ ಕ್ರಿಸ್ಪಿ ರೀತಿ ಇರಲಿ. * ಈಗ ಪುದೀನಾ ಎಲೆ, ಖಾರದ ಪುಡಿ, ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿ, ನಂತರ ಮೊಸರು ಹಾಕಿ, ಮಿಶ್ರಣ ಸ್ವಲ್ಪ ಗಟ್ಟಿಯಾದಾಗ, ಸೋಯಾ ಸಾಸ್ ಸೇರಿಸಿ. ಈಗ ಫ್ರೆöÊ ಮಾಡಿಟ್ಟ ಚಿಕನ್ ಹಾಕಿ ಡ್ರೆöÊಯಾಗುವಂತೆ ಮಾಡಿದರೆ ಸರ್ವ್ ಮಾಡಲು ಮೆಜೆಸ್ಟಿಕ್ ಚಿಕನ್ ರೆಡಿ.