ಮೈಸೂರು: ಎರಡು ಆನೆಗಳ ಗೈರಿನೊಂದಿಗೆ ಸಿಡಿಮದ್ದಿನ ಕೊನೆಯ ತಾಲೀಮು ಯಶಸ್ವಿಯಾಯಿತು.
ಕಳೆದ ಬಾರಿ ಆರು ಆನೆಗಳ ಗೈರಿನೊಂದಿಗೆ ಎರಡನೇ ಸಿಡಿಮದ್ದು ತಾಲೀಮು ಯಶಸ್ವಿಯಾಗಿತ್ತು.
ನಗರದ ವಸ್ತು ಪ್ರದರ್ಶನ ಆವರಣದಲ್ಲಿ ದಸರಾ ಜಂಬೂ ಸವಾರಿ ಪೂರ್ವಭಾವಿಯಾಗಿ ಕೊನೆಯ ಹಂತದ ಸಿಡಿಮದ್ದು ತಾಲೀಮನ್ನು ನಡೆಸಲಾಯಿತು. ಗಜಪಡೆಯ ತಂಡದ ಸದಸ್ಯರಾದ ಅಭಿಮನ್ಯು, ವರಲಕ್ಷ್ಮಿ, ವಿಜಯ, ಧನಂಜಯ, ಮಹೇಂದ್ರ, ಗೋಪಿ, ಭೀಮ, ಕಂಜನ್, ಅರ್ಜುನ, ಲಕ್ಷ್ಮಿ ಮೊದಲಾದವು ಪಾಲ್ಗೊಂಡಿದ್ದವು. ಈ ವೇಳೆ ಸಹಜವಾಗಿ ಗೋಪಿ, ಪ್ರಶಾಂತ, ಸುಗ್ರೀವ ಆನೆಗಳು ಬೆದರಿ ನಿಂತಲ್ಲೇ ಸುತ್ತು ಹಾಕಿದವಾದರೂ ಮಾವುತರು ಅವುಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಉಳಿದಂತೆ ಹಿರಣ್ಯ, ರೋಹಿತ ಆನೆಗಳು ಅಂತಿಮ ತಾಲೀಮಿನಿಂದಲೂ ದೂರ ಉಳಿದಿದ್ದವು.
ಒಟ್ಟು 37 ಅಶ್ವಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು ಒಂದೆರಡು ಅಶ್ವಗಳು ಹೊರತು ಪಡಿಸಿ ಉಳಿದ ಅಶ್ವಗಳು ನಿಯಂತ್ರಣದಲ್ಲಿದ್ದವು.
ಈ ಕುರಿತು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಎಂದಿನಂತೆ ಕೊನೆಯ ತಾಲೀಮು ನಡೆಸಲಾಗಿದೆ. ಉಳಿದಂತೆ ಏರ್ ಶೋ ಸಹ ಇರಲಿದೆ.
ಅರಣ್ಯ ಇಲಾಖೆ ಉಪನಿರ್ದೇಶಕ ಸೌರಬ್ ಮಾತನಾಡಿ, ಎಂದಿನಂತೆ ತಾಲೀಮು ಯಶಸ್ವಿಯಾಗಿದೆ. ಜಂಬೂ ಸವಾರಿಗೆ ಗಜಪಡೆ ಸನ್ನದ್ದವಾಗಿದೆ ಎಂದರು.
ನಗರಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸೇರಿ ಅನೇಕರು ಉಪಸ್ಥಿತರಿದ್ದರು.