ಮೈಸೂರು: ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಹೇಳಿಕೆ ನೀಡಿದ ಪ್ರೊ.ಭಗವಾನ್ ಅವರನ್ನು ಗಡಿಪಾರು ಮಾಡಬೇಕಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಆಗ್ರಹಿಸಿತು.
ಮೈಸೂರು ನಗರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ.ಗಂಗಾಧರ್ ಮಾತನಾಡಿ, ಈ ಬಗ್ಗೆ ದೂರು ನೀಡಿದರೂ ಪೊಲೀಸ್ ಇಲಾಖೆ ದೂರು ದಾಖಲಿಸಲು ವಿಳಂಬ ಮಾಡಿದ್ದರಿಂದ ಸಮುದಾಯ ಪ್ರತಿಭಟನೆ ಮಾಡಬೇಕಾಯಿತು. ಅನಂತರ ಪೊಲೀಸರು ನಮ್ಮ ಒತ್ತಡಕ್ಕೆ ಮಣಿದು ದೂರು ದಾಖಲಿಸಿದ್ದಾರೆ. ಈಗ ದೂರು ದಾಖಲಿಸಿರುವ ಮೇರೆಗೆ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಗೌರವಾಧ್ಯಕ್ಷ ಡಾ.ಸಿ.ವೈ.ಶಿವೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಕಾರ್ಯದರ್ಶಿ ಚೇತನ್ ಗೋಷ್ಠಿಯಲ್ಲಿದ್ದರು.