ಮೈಸೂರು: ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಗುವುದು ಎಂದು ಶಾಸಕ ಹರೀಶಗೌಡ ಹೇಳಿದರು.
ಡಿ ದೇವರಾಜ ಅರಸು ರಸ್ತೆಯಲ್ಲಿ ಪ್ರತಿ ಅಂಗಡಿಗಳಿಗೆ ಕರ್ನಾಟಕ ಹಿತ ರಕ್ಷಣಾ ವೇದಿಕೆಯ ಸದಸ್ಯರೊಂದಿಗೆ ತೆರಳಿ ಕನ್ನಡ ಬಾವುಟ ನೀಡಿ ಪ್ರತಿಯೊಬ್ಬರೂ ಈ ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಬಳಿಕ ಮಾತನಾಡಿ, ರಾಜ್ಯ ಕಂಡ ಧೀಮಂತ ನಾಯಕ ಡಿ.ದೇವರಾಜ ಅರಸು ಅವರು ಕರ್ನಾಟಕ ಎಂದು ಘೋಷಿಸಿ ಇಲ್ಲಿಗೆ ೫೦ ವರ್ಷ ತುಂಬಿದೆ. ಹಾಗಾಗಿ ಈ ಬಾರಿ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಹೀಗಾಗಿ ಇಲ್ಲಿನ ಪ್ರತಿ ಅಂಗಡಿಗಳಿಗೂ ಕನ್ನಡತಾಯಿ ಭುವನೇಶ್ವರಿ ಚಿತ್ರ ಇರುವ ಬಾವುಟ ಹಾಗೂ ಮತ್ತು ಕನ್ನಡದ ಶಲ್ಯವನ್ನು ನೀಡಿ ಎಲ್ಲರೂ ರಾಜ್ಯೋತ್ಸವ ದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.
ಈ ವೇಳೆ ಕರ್ನಾಟಕ ರಕ್ಷಣ ವೇದಿಕೆಯ ಅಧ್ಯಕ್ಷ ವಿನಯ್ ಕುಮಾರ್, ಗೌರವಾಧ್ಯಕ್ಷ ವೀರಣ್ಣಗೌಡ, ಕಾರ್ಯದರ್ಶಿ ರವಿ, ಮೂಡ ಮಾಜಿ ಸದಸ್ಯ ನವೀನ್ ಕುಮಾರ್, ಪ್ರಮೋದ್ ಗೌಡ, ಗುರುರಾಜ್ ಶೆಟ್ಟಿ, ರವಿಚಂದ್ರ, ನಿತಿನ್, ನಂಜುಂಡಿ, ಸಂತೋಷ್, ಕಾಂತಿಲಾಲ್ ಜೈನ್, ಶರವಣ, ನವೀನ, ಮತ್ತಿತರರು ಹಾಜರಿದ್ದರು.