ಮೈಸೂರು: ಅನಾವಶ್ಯಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ದಿ ಗ್ರಾಜ್ಯುಯೀಟ್ಸ್ ಕೋ- ಅಪರೇಟಿವ್ ಬ್ಯಾಂಕ್ ಲಿ. ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವುದು ವಿಷಾಧನೀಯ. ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಎನ್.ಶ್ರೀನಿವಾಸ್ ಸ್ಪಷ್ಟಪಡಿಸಿದರು.
ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ಯಾಂಕಿನ ಆರ್ಥಿಕ ನಿರ್ವಹಣೆ ಹಾಗೂ ಬ್ಯಾಂಕಿನ ಠೇವಣಿ, ಗ್ರಾಹಕರ ಕುರಿತು ಅಪಪ್ರಚಾರ ಮಾಡಲಾಗಿದೆ. ಸುಂದರೇಶ್ ಗೌಡ ಅವರಿಗೆ 2021 ರ ಮಾ.2 ರಂದು 50 ಲಕ್ಷ ಸಾಲ ಮಂಜೂರು ಮಾಡಲಾಗಿದೆ. 49,07742 ಅಸಲು ಜತೆಗೆ ಬಡ್ಡಿ ಬಾಬ್ತು 12,13,084 ರೂ ಬಾಕಿ ಬರಬೇಕಿದೆ. ಬ್ಯಾಂಕಿನ ಗಮನಕ್ಕೆ ತಾರದೇ ಬೇರೆ ಬ್ಯಾಂಕಿನಲ್ಲೂ ಸಾಲ ಪಡೆದಿದ್ದರಿಂದ ಇವರ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಈ ವಿಷಯವನ್ನು ಈ ಸಾಲಿನ ವಾರ್ಷಿಕ ಸಭೆಯಲ್ಲಿ ದಾಖಲೆ ಸಮೇತ ನೀಡಲಾಗಿದೆ. ಹೀಗಾಗಿ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದ್ದು, ಠೇವಣಿದಾರರು ಹಾಗೂ ಸದಸ್ಯರು ಯಾವುದೇ ಆತಂಕಕ್ಕೆ ಒಳಗಾಗ ಬಾರದು ಎಂದು ಈ ಮೂಲಕ ಕೋರಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಕಾನೂನು ಸಲಹೆಗಾರ ಜಯಂತ್ ಕುಮಾರ್, ನಿರ್ದೇಶಕ ಕೆ.ಜಿ.ಸತೀಶ್, ವ್ಯವಸ್ಥಾಪಕ ಮಹೇಶ್, ಉಪಾಧ್ಯಕ್ಷ ಅನಂತರಾಮು, ಟಿ.ಎಸ್. ರವಿಶಂಕರ್ ಇದ್ದರು.