Lಮೈಸೂರು: ಇದೇ ತಿಂಗಳ ನ.8 ರಿಂದ 121ರವರೆಗೆ ಈಜಿಪ್ಟಿನ ಫೆಲಿಪೈಲಿನಲ್ಲಿ ನಡೆಯುವ ಏಷ್ಯನ್ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ ನಲ್ಲಿ ಭಾಗವಹಿಸುತ್ತಿರುವ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮರದೂರು ಗ್ರಾಮದ ಅಥ್ಲೆಟಿಕ್ ಸ್ಚಾಮಿನಾಯಕ ಅವರನ್ನು ಮೈಸೂರು ರೌಂಡ್ ಟೇಬಲ್ ಎಲೈಟ್ 256 ತಂಡ ಸನ್ಮಾನಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕರನ್ನು ಸನ್ಮಾನಿಸಿದ ತಂಡದ ಸುನೀಲ್ ಕುಮಾರ್ ಮಾತನಾಡಿ, ಅಥ್ಲೆಟಿಕ್ ನ ಸಾಧನೆಯನ್ನು ಮೆಚ್ಚಿ ದಿಯಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ನಮ್ರತಾಷಣೈ, ಸದಸ್ಯ ಸತೀಶ್ ಮೇತ್ರಿ, ರಮ್ಯ ಅಶೋಕ್, ಸಮಿನಾ ಮೇಡಂ, ಅಶೋಕ್, ಭಾಗೀರಥಿ ಎಲ್ಲರೂ ಒಗ್ಗೂಡಿ 50 ಸಾವಿರ ರೂ.ಗಳನ್ನು ಪ್ರೋತ್ಸಾಹ ಧನವಾಗಿ ನೀಡುತ್ತಿರುವುದಾಗಿ ಹೇಳಿದರು.