ಮೈಸೂರು: ನಗರದ ಸ್ವಾಮಿ ವಿವೇಕಾನಂದ ಯೂತ್ಮೂಮೆಂಟ್ ಹಾಗೂ ಜೀವರಕ್ಷಕ ಸಂಘದಿಂದ ನ.೧೮ರಂದು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಬೈಕ್ಥಾನ್ -೨೦೨೩ಅನ್ನು ಆಯೋಜಿಸಲಾಗಿದೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೀವರಕ್ಷ ತಂಡದ ಮೈಸೂರು ವಿಭಾಗದ ಮುಖ್ಯಸ್ಥೆ ರೇಖಾ, ನಗರದ ಸೇಂಟ್ ಜೋಸೆಫ್ ನರ್ಸಿಂಗ್ ಕಾಲೇಜಿನಿಂದ ಬೆ.೭ಕ್ಕೆ ಬೀದಿ ನಾಟಕದ ಮೂಲಕ ಚಾಲನೆ ಸಿಗಲಿದೆ. ನಂತರ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಎದುರಿನಿಂದ ಬೆ.೭.೩೦ಕ್ಕೆ ಬೈಕ್ ರ್ಯಾಲಿ ನಡೆಯಲಿದೆ. ೮.೩೦ಕ್ಕೆ ಮಂಡ್ಯ ಸಂಜಯ್ ವೃತ್ತ ನಂತರ ಜಾಗೃತಿ ಭಾಷಣ, ಫಲಕಗಳ ಸಂದೇಶ ಅರಿವು ಅನಂತರ ಚಿತ್ರದುರ್ಗದ ಕಡೆಗೆ ಬೈಕ್ಥಾನ್ ಸಂಚರಿಸಲಿದೆ ಎಂದರು.
೧೦೮ಕ್ಕೂ ಬೈಕ್ಗಳು ಹಾಗೂ ೧೦ ವಿಂಟೇಜ್ ಕಾರುಗಳು ರ್ಯಾಲಿಯಲ್ಲಿರಲಿವೆ. ಮಾತ್ರವಲ್ಲದೆ, ಇದೇ ಸಂಸ್ಥೆಯ ಮತ್ತೊಂದು ತಂಡ ನ.೧೮ರಂದು ವಿಧಾನಸೌದದ ಮುಂಭಾಗದಿಂದ ಬೆ.೬ಕ್ಕೆ ಬೈಕ್ಥಾನ್ ತುಮಕೂರಿಗೆ ತೆರಳಿ ಅನಂತರ ೧.೩೦ಕ್ಕೆ ಚಿತ್ರದುರ್ಗದಲ್ಲಿ ಅಂತ್ಯಗೊಳ್ಳಲಿದೆ. ನ.೧೯ರಂದು ಹೊಸಪೇಟೆ ಹಾಗೂ ಹಂಪೆಯಲ್ಲಿ ಬೀದಿ ನಾಟಕದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ ಎಂದರು. ರೋಟರಿ ಮೈಸೂರು ಅಧ್ಯಕ್ಷ ಅರುಣ್ ಬೆಳವಾಡಿ, ಮಾಜಿ ಅಧ್ಯಕ್ಷ ರಾಜರಾಮ್, ರೋಟರಿಯನ್ ಜಸ್ವಂತ್ಧರ್, ಡಾ.ದೀಪು ಗೋಷ್ಠಿಯಲ್ಲಿದ್ದರು.
ಹೆಚ್ಚಿನ ಮಾಹಿತಿಗಾಗಿ ಆರ್.ಯಶ್ವಂತ್ ೯೦೩೬೭೫೦೩೦೦, ೭೦೧೯೭೪೯೧೬೩ ಅನ್ನು ಸಂಪರ್ಕಿಸಬಹುದಾಗಿದೆ.