ಮೈಸೂರು: ನಗರ ಹಾಗೂ ತಾಲ್ಲೂಕಿನೆಲೆಡೆ ಸಂಭ್ರನಮದ ಷಷ್ಠಿ ಪೂಜೆಯ ಧಾರ್ಮಿಕ ಕಾರ್ಯ ಮನೆ ಮಾಡಿದೆ.
ಮುಂಜಾನೆ ಮಂಜಿನಲ್ಲೇ ನಗರದ ವಿವಿಧ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಹಾಗೂ ಹುತ್ತಗಳಿಗೆ ಕುಂಕುಮ, ಬೆಣ್ಣೆ, ಬಾಳೆಹಣ್ಣು, ಎಲೆ, ಅಡಿಕೆ, ಹೂ ಅಗರಬತ್ತಿ, ಕರ್ಪೂರ ಸೇರಿದಂತೆ ವಿವಿಧ ಬಗೆಯ ಪೂಜಾ ಸಾಮಗ್ರಿಗಳನ್ನು ಹುತ್ತಕ್ಕೆ ಅರ್ಪಿಸಿದರು. ಸಿದ್ಧಲಿಂಗಪುರದಲ್ಲಿರುವ 300 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಸುಬ್ರಹ್ಮಣ್ಯೇಶ್ವರಸ್ವಾಮಿ ದೇಗುಲದ ನಿರ್ಮಾಣ ಕಾರ್ಯ ಹಿನ್ನೆಲೆಯಲ್ಲಿ ಅಲ್ಲಿ ಆಚರಣೆಗೆ ಬ್ರೇಕ್ ಹಾಕಿದ್ದರೂ ಕೆಲವರು ಪಕ್ಕದ ಖಾಲಿ ಜಾಗದಲ್ಲೇ ಪೂಜೆ ಸಲ್ಲಿಸಿ ಮರಳಿದ್ದರು.