ಮಂಡ್ಯ :ಮಂಡ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಸ್ ಶಿವಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್.ಮೂರ್ತಿ ಆಯ್ಕೆಯಾದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಖಜಾಂಚಿಯಾಗಿ ಎನ್. ನಾಗೇಶ್, ಉಪಾಧ್ಯಕ್ಷರಾಗಿ ಬಸವರಾಜ್ ಹೆಗಡೆ,ಮಂಜುಳಾ ಕಿರುಗಾವಲು, ಕಾರ್ಯದರ್ಶಿಯಾಗಿ ಶಿವಕುಮಾರ್, ಎಲ್.ಸಿದ್ದರಾಜು ರವರನ್ನು ಆಯ್ಕೆ ಮಾಡಲಾಯಿತು.
ನಿರ್ಗಮಿತ ಅಧ್ಯಕ್ಷ ಕೆ.ಎನ್.ನವೀನ್ ಕುಮಾರ್, ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಎ.ಎಲ್.ಶಿವಶಂಕರ್, ಸಂಘದ ಮಾಜಿ ಅಧ್ಯಕ್ಷರಾದ ಸೋಮಶೇಖರ್ ಕೆರಗೋಡು,ಕೆ.ಸಿ ಮಂಜುನಾಥ್, ಬಿ.ಪಿ ಪ್ರಕಾಶ್, ಕೃಷ್ಣ ಸ್ವರ್ಣಸಂದ್ರ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತಿಕೆರೆ ಜಯರಾಮ್,ಸಂಪಾದಕರಾದ ಕೆ. ಎನ್.ಪುಟ್ಟಲಿಂಗೇಗೌಡ, ಜಿ. ಚೆನ್ನಯ್ಯ, ಪಿ.ವೆಂಕಟರಾಮಯ್ಯ, ಈ.ಶಿವಸ್ವಾಮಿ, ಎ.ಎಲ್.ಶೇಖರ್, ಸುಮಾ ಪುರುಷೋತ್ತಮ್, ನವೀನ್ ಬಸವೇಗೌಡ,ಅಶೋಕ್, ಮದನ್ಗೌಡ, ಚಂದ್ರೇಗೌಡ ಸೇರಿದಂತೆ ಇತರರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಸಂಪಾದಕರ ಸಂಘದ ಅಧ್ಯಕ್ಷರಾಗಿ ಎಂ.ಎಸ್.ಶಿವಪ್ರಕಾಶ್ ಆಯ್ಕೆ
