ಬೆಂಗಳೂರು:- ಸ್ಪಾ ವ್ಯವಸ್ಥಾಪಕರಿಗೆ ಬೆದರಿಸಿ 15 ಲಕ್ಷ ಸುಲಿಗೆಗೆ ಪ್ರಯತ್ನಿಸಿದ್ದ ಆರೋಪದಡಿ ದಿವ್ಯಾ ವಸಂತಾ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇಂದಿರಾನಗರದ ಸ್ಪಾ ವ್ಯವಸ್ಥಾಪಕರಿಗೆ ಬೆದರಿಸಿ ಸುಲಿಗೆಗೆ ಪ್ರಯತ್ನಿಸಿದ್ದ ಆರೋಪದಡಿ ರಾಜ್ ನ್ಯೂಸ್ ಸುದ್ದಿವಾಹಿನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂದು ಹೇಳಿಕೊಂಡಿದ್ದ ವ್ಯಕ್ತಿ ಸೇರಿ ಇಬ್ಬರನ್ನು ಜೆ.ಬಿ.ನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ವಾಹಿನಿಯ ಸಿಇಒ ರಾಜಾನುಕುಂಟೆ ವೆಂಕಟೇಶ್ ಹಾಗೂ ನಿರೂಪಕಿ ದಿವ್ಯಾ ವಸಂತಾ ಅವರ ಸಹೋದರ ಸಂದೇಶ್ ಎಂಬುವವರನ್ನು ಪೆÇಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಮೂರು ಮೊಬೈಲ್ ಫೆÇೀನ್ ಜಪ್ತಿ ಮಾಡಲಾಗಿದೆ ಎಂದು ಪೆÇಲೀಸರು ಹೇಳಿದರು. ಪ್ರಕರಣ ದಾಖಲಾದ ಮೇಲೆ ದಿವ್ಯಾ, ಸಚಿನ್, ಆಕಾಶ್ ತಲೆಮರೆಸಿಕೊಂಡಿದ್ದಾರೆ.
ಇಂದಿರಾನಗರದ 100 ಅಡಿ ರಸ್ತೆಯ 15ನೇ ಮುಖ್ಯರಸ್ತೆಯಲ್ಲಿರುವ ಟ್ರೀ ಸ್ಪಾ ಆಂಡ್ ಬ್ಯೂಟಿ ಪಾರ್ಲರ್ನ ವ್ಯವಸ್ಥಾಪಕ ಶಿವಕುಮಾರ್ ಅವರು ಜುಲೈ 1ರಂದು ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು.
ಸುಲಿಗೆಗೆ ಪ್ರಯತ್ನ: ದಿವ್ಯಾ ವಸಂತಾ ಸೇರಿ ನಾಲ್ವರ ವಿರುದ್ಧ ಪ್ರಕರಣ
