ಮೈಸೂರು:ಪ್ರತಿ ವರ್ಷ ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರ ನಮ್ಮ ಚಾಮುಂಡೇಶ್ವರಿ ಸೇವಾ ಸಮಿತಿ 1೦೦ಅಡಿ ರಸ್ತೆ ವತಿಯಿಂದ 25000.ಭಕ್ತರಿಗೆ ಪ್ರಸಾದ ಅನ್ನಸಂತರ್ಪಣೆ ಹಮ್ಮಿಕೊಂಡಿದೆ,ಸಿಹಿತಿಂಡಿ (ಮೈಸೂರು ಪಾಕ್) ಇಂದು ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ತಯಾರಾಗಿದೆ. ಹಾಗೂ ಅಂದು ಬೆಳಿಗ್ಗೆ. ಅಂದರೆ 17ನೇ ತಾರೀಕು ಬೆಳಿಗ್ಗೆ. 6:00ಯಿಂದ 10 ಗಂಟೆ ತನಕ ಬೆಳಿಗ್ಗೆ ಟಿಫನ್ ಇರುತ್ತದೆ. ಪೊಂಗಲ್ ಇಡ್ಲಿ ಚಟ್ನಿ ಭಕ್ತಾದಿಗಳಿಗೆ ಕೊಡಲಾಗುತ್ತದೆ. ಹನ್ನೊಂದು ಗಂಟೆಯ ನಂತರ ಊಟವನ್ನು ಪ್ರಾರಂಭಿಸಲಾಗುತ್ತದೆ. ಊಟಕ್ಕೆ ಪಲ್ಯ ಕೋಸಂಬರಿ ಚಟ್ನಿ. ಬಿಸಿಬೇಳೆ ಬಾತ್ ಅನ್ನ ಸಾಂಬಾರ್.ಮೊಸರು. ಲಾಡು ಮೈಸೂರುಪಾಕು. ಹೀಗೆ 11:00 ಯಿಂದ ಸಂಜೆ 4:00 ತನಕ ಪ್ರಸಾದ ವಿತರಿಸಲಾಗುತ್ತದೆ. ಭಕ್ತಾದಿಗಳು ಎಲ್ಲರಿಗೂ ಬಾಳೆ ಎಲೆಯ ಊಟವನ್ನು ಹಾಕಲಾಗುತ್ತದೆ ಎಂದು. ಸೇವಾ ಸಮಿತಿಯ ಸದಸ್ಯರ ಒಬ್ಬರಾದ.ಅರುಣ್ ಹಾಗೂ ನಾಗೇಶ್ ತಿಳಿಸಿದರು ಅದರ ಪೂರ್ವಭಾವಿಯಾಗಿ ಇಂದು ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ 25000 ಮೈಸೂರು ಪಾಕುಗಳನ್ನು ತಯಾರಿಸಲಾಯಿತುಕಡಲೆ ಹಿಟ್ಟು 200ಕೆಜಿ ಸಕ್ಕರೆ 500 ಕೆಜಿ ರಿಫೈಂಡ್ ಆಯಿಲ್ 30 ಕೆಜಿ ಡಾಲ್ಡಾ ತುಪ್ಪ ನೂರು ಕೆಜಿ ಬೆಣ್ಣೆ ಕಾಯಿಸಿದ ತುಪ್ಪ ನೂರು ಕೆಜಿ. ಏಲಕ್ಕಿ 3 ಕೆ.ಜಿ ಅರಿಶಿನ 2 ಕೆಜಿ. ಇಷ್ಟೆಲ್ಲಾ ಸಾಮಗ್ರಿಗಳನ್ನು ಹಾಕಿ. 40 ಜನ ಅಡಿಗೆ ಕೆಲಸಗಾರರು 25,000 ಮೈಸೂರುಪಾಕ್ ಅನ್ನು ತಯಾರಿ ಮಾಡಿದ್ದಾರೆ.