ಪಿರಿಯಾಪಟ್ಟಣ: ಕಳೆದ 10 ದಿನಗಳಿಂದ ಎಡಡಬಿಡದೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ವಾಸದ ಮನೆಯ ಗೋಡೆ ಕುಸಿದು ಹೇಮಲತಾ (22) ಎಂಬುವವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. 2 ವರ್ಷದ ಅವರ ಗಂಡು ಮಗು ಬದುಕುಳಿದಿದೆ.
ಎಂದಿನಂತೆ ಮನೆಯಲ್ಲಿದ್ದಾಗ ಹೇಮಲತಾ ತನ್ನ ಮಗುವನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ವಾಪಸ್ ಬರುವಾಗ ಗೋಡೆ ಬೀಳುವುದು ತಕ್ಷಣ ಅವರಿಗೆ ತಿಳಿದು, ಮಗುವನ್ನು ಸ್ವಲ್ಪ ದೂರಕ್ಕೆ ಎಸೆದು ಮಗವನ್ನು ಉಳಿಸಿ ತಾಯಿ ಸಾವಿನಲ್ಲೂ ಕೂಡ ಸಾರ್ಥಕತೆಯನ್ನು ಮೆರೆದಿದ್ದಾರೆ ಹೇಮಲತಾರವರ ಪತ್ನಿ ಶಿವರಾಜು ತಮ್ಮ ದುಖಃವನ್ನು ತೋಡಿಕೊಂಡಿದ್ದಾರೆ.
ಉಪತಹಸೀಲ್ದಾರ್ ಸ್ಥಳಕ್ಕೆ ಬೇಟಿ: ಕಗ್ಗುಂಡಿ ಗ್ರಾಮ ರಾವಂದೂರು ಹೋಬಳಿ ವ್ಯಾಪ್ತಿಯಾಗಿರುವುದರಿಂದ ಅಲ್ಲಿನ ಉಪತಹಸೀಲ್ದಾರ್ ಶುಭ ಮತ್ತು ಕಂದಾಯ ನಿರೀಕ್ಷಕ ಶ್ರೀಧರ್ ಬೆಟಿ ನಿಡಿ ಸ್ಥಳ ಪರಿಶಿಲನೆ ಮಾಡಿ, ಮೃತಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ತಹಸೀಲ್ದಾರ್ ಕುಂಞ ಅಹಮ್ಮದ್: ಪಿರಿಯಾಪಟ್ಟಣ ಸಕಾರಿ ಆಸ್ಪತ್ರೆಗೆ ಬೇಟಿ ನೀಡಿ ಮೃತ ದೇಹವನ್ನು ಮರಣೊತ್ತರ ಪರೀಕ್ಷೆ ಮಾಡಿಸಿ, ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಪರಿಹಾರದ ಚೆಕ್ಕನ್ನು ವಿತರಿಸಲಾಗುವುದು ಎಂದು ತಿಳಿಸಿದರು. ಹಾನಿಯುಂಟಾಗಿರುವ ತಾಲೂಕಿನ ಬೈಲುಕುಪ್ಪೆ, ದೊಡ್ಡಕಮರವಳ್ಳಿ, ಐಚನಹಳ್ಳಿ, ಹಿಟ್ನೆಹೆಬ್ಬಾಗಿಲು, ಚಪ್ಪರದಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ತಹಸೀಲ್ದಾರ್ ಬೇಟಿ ನೀಡಿ ವರದಿ ಪಡೆದಿದ್ದಾರೆ.
ತಾಲೂಕಿನ ಹೆಟ್ಟಿನೆಹೆಬ್ಬಾಗಿಲು ಗ್ರಾಮದ ಯೋಗೇಶ್ರವರ ಮನೆ ಗೋಡೆ ಕುಸಿದಿದೆ, ಯಾವುದೇ ಅನಾಹುತ ಆಗಿಲ್ಲ, ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಹನುಮಂತೇಗೌಡರಿಗೆ ಸೇರಿದ ಮನೆಯ ಗೋಡೆಗಳು ಪೂರ್ಣ ಕುಸಿದು ಬಿದ್ದಿವೆ, ಯಾವುದೇ ಅನಾಹುತ ಕಂಡು ಬಂದಿಲ್ಲ. ಕಣಗಾಲು ವ್ಯಾಪ್ತಿಯ ಐಚನಹಳ್ಳಿ ಪಾರ್ವತಮ್ಮರವರಿಗೆ ಸೇರಿ ಮನೆಯ ಗೋಡೆ ಕುಸಿದು, ವಾಸಕ್ಕೆ ತೊಂದರೆಯಾಗಿದೆ.
ಕಗ್ಗುಂಡಿ ಗ್ರಾಮ ರಾವಂದೂರು ಹೋಬಳಿ ವ್ಯಾಪ್ತಿಯಾಗಿರುವುದರಿಂದ ಅಲ್ಲಿನ ಉಪತಹಸೀಲ್ದಾರ್ ಶುಭ ಮತ್ತು ಕಂದಾಯ ನಿರೀಕ್ಷಕ ಶ್ರೀಧರ್ ಬೆಟಿ ನಿಡಿ ಸ್ಥಳ ಪರಿಶಿಲನೆ ಮಾಡಿ, ಮೃತಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.