ದಾವಣಗೆರೆ:- ಪ್ರೀತಿಸಿ ಮದುವೆಯಾದ ನವೀನ್ ನ್ಯಾಯಪಂಚಾಯತಿಗೆ ಕರೆಸಿಕೊಂಡು ತನ್ನ ಹೆಂಡತಿ, ಅತ್ತೆ ಮತ್ತು ಮಾವನನ್ನೇ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನಿವಾಸಿ ನವೀನ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪತ್ನಿ ಅನ್ನಪೂರ್ಣ, ಮಾವ ಬಸವರಾಜ ಹಾಗೂ ಅತ್ತೆ ಕವೀತಾ ಮೃತ ದುರ್ದೈವಿಗಳು.
ದಾವಣಗೆರೆ ಜಿಲ್ಲೆಯ ನಿಟ್ಟೊಳ್ಳಿ ಗ್ರಾಮದ ಅನ್ನಪೂರ್ಣ ಹಾಗೂ ನವೀನ್ ಪರಸ್ಪರ ಫೇಸ್ ಬುಕ್ ಮೂಲಕ ಸ್ನೇಹಿತರಾಗಿ ಬಳಿಕ ಪ್ರೀತಿ ಮಾಡುತ್ತಿದ್ದರು. ಪ್ರೀತಿಸಿ ಮೂರು ವರ್ಷದ ನಂತರ ಮದುವೆಯಾಗಿದ್ದರು. ನವೀನ್ ಸೈದಾಪುರನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು. ದಂಪತಿಗಳಿಗೆ ಎರಡು ವರ್ಷದ ಗಂಡು ಮಗುವಿದೆ. ಮದುವೆಯಾದ ಒಂದೂವರೇ ವರ್ಷದ ನಂತ್ರ ದಂಪತಿಗಳಲ್ಲಿ ಕಲಹ ಶುರುವಾಗಿದೆ.
ಹೆರಿಗೆ ನಂತರ ಅನ್ನಪೂರ್ಣ ಗಂಡನ ಮನೆಗೆ ಹೋಗಿದ್ದಳು. ಮೂರು ತಿಂಗಳ ನಂತರ ನವೀನ್ ಕುಮಾರ್ ಹಾಗೂ ಅವರ ಮನೆಯವರು ಅನ್ನಪೂರ್ಣಗೆ ವರದಕ್ಷಿಣೆ ಕಿರುಕುಳ ನೀಡಿದ್ದರು. ಗಂಡನ ಕಿರುಕುಳಕ್ಕೆ ಬೇಸತ್ತು ಅನ್ನಪೂರ್ಣ ತವರು ಮನೆಗೆ ಬಂದಿದ್ದಳು. ನಂತರ ಅನ್ನಪೂರ್ಣಗೆ ಕರೆದುಕೊಂಡು ಹೋಗು ಅಂದ್ರು ನವೀನ್ ಕರೆದುಕೊಂಡು ಹೋಗಿರಲಿಲ್ಲ. ಅನ್ನಪೂರ್ಣಾಳ ಪೆÇೀಷಕರು ಒಂದು ವರ್ಷದಲ್ಲಿ 4 ಸಲ ಬಿಡಲು ಯತ್ನಿಸಿದರು. ನವೀನ್ ಹಾಗೂ ಅವರ ಪೆÇೀಷಕರು ಅನ್ನಪೂರ್ಣಳನ್ನು ಮನೆಯೊಳಗಡೆ ಕರೆದುಕೊಂಡಿಲ್ಲವಂತೆ. ನಂತ್ರ ನವೀನ್ ಹೆಂಡತಿಗೆ ರಾಜಿ ಪಂಚಾಯತೆಗೆ ಬರಲು ಹೇಳಿದ್ದನಂತೆ. ಅಳಿಯ ಕರೆಯುತ್ತಿದ್ದಾನೆಂದು ಮಗಳ ಜೊತೆ ಹೆತ್ತವರು ದಾವಣಗೇರಿಯಿಂದ 15 ರಂದು ಯಾದಗಿರಿ ಜಿಲ್ಲೆಯ ಸೈದಾಪುರಗೆ ಬಂದಿದ್ದರು.
ಸೈದಾಪುರ ಠಾಣೆಯಲ್ಲಿ ನ್ಯಾಯ ಪಂಚಾಯತ ನಡೆದಿದೆ. ನವೀನ್ ಅನ್ನಪೂರ್ಣಾಳಿಗೆ ಡೈವೊರ್ಸ್ ಕೊಡಲು ಬಯಸಿದ್ದ, ಆದ್ರೆ ಅನ್ನಪೂರ್ಣ ಪತಿ ಜೊತೆ ಇರಲು ಬಯಸಿದ್ದಳು. ಇದಕ್ಕೆ ನವೀನ್ ಪತ್ನಿ ಅತ್ತೆ ಹಾಗೂ ಮಾವ ನಡುವೆ ಜಗಳವಾಗಿದೆ. ನವೀನ್ ಅನ್ನಪೂರ್ಣಾಳ ಜೊತೆ ಜೀವನ ನಡೆಸಬಾರದೆಂದು ನಿರ್ಧರಿಸಿದನಂತೆ. ಸೈದಾಪುರ ಪೆÇಲೀಸರು ಕೂಡ ದಂಪತಿಗಳಿಗೆ ಸಣ್ಣ ವಯಸ್ಸಿದೆ ಚನ್ನಾಗಿ ಜೀವನ ನಡೆಸಿ ಎಂದು ಬುದ್ದಿ ಮಾತು ಹೇಳಿದರಂತೆ. ಗಂಡನ ಜೊತೆ ಇರುತ್ತೇನೆ ಡೈವೋರ್ಸ್ ಕೊಡುವದಿಲ್ಲವೆಂದು ಅನ್ನಪೂರ್ಣ ಸೈದಾಪುರ ಠಾಣೆಯಲ್ಲಿ ಬರೆದುಕೊಟ್ಟಿದ್ದಳಂತೆ. ನವೀನ್ ಸೈದಾಪುರನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಹೆಂಡತಿ ಹಾಗೂ ಅತ್ತೆ, ಮಾವರನ್ನು ಬಾಡಿಗೆ ಮನೆಗೆ ಕರೆದುಕೊಂಡು ಹೋಗದೆ ಸೈದಾಪುರ ಪಟ್ಟಣದ ಲಾಡ್ಜ್ನಲ್ಲಿ ಇರಿಸಿದ್ದನಂತೆ.
ನ್ಯಾಯ ಪಂಚಾಯತಿಯಲ್ಲಿ ದಾವಣಗೆರೆಯಲ್ಲಿ ಹೆಂಡತಿ ಜೊತೆ ಇರುತ್ತೇನೆಂದು ಹೇಳಿದ್ದ. ಆದ್ರೆ ಡೈವೊರ್ಸ್ ನಿರಾಕರಣೆ ಮಾಡಿದ್ದು ಕೋಪ ನವೀನ್?ನಲ್ಲಿತ್ತು. ಜೂಲೈ 16ರಂದು ದಾವಣಗೆರೆ ಕಾರ್ ತೆಗೆದುಕೊಂಡು ಹೊಗೋಣ ಎಂದು ಹೇಳಿದನು. ನವೀನ್ ದೊಡ್ಡಮ್ಮಳ ಊರಾದ ವಡಗೇರಾ ತಾಲೂಕಿನ ಮನಗನಾಳ ಗ್ರಾಮಕ್ಕೆ ಹೋಗಿದ್ದನು. ಮನಗನಾಳ ಗ್ರಾಮದ ದೊಡ್ಡಮ್ಮಳ ಮಗನ ಹತ್ತಿರ 50 ಸಾವಿರ ರೂಪಾಯಿ ಸಾಲ ಪಡೆದುಕೊಂಡು ದಾವಣಗೆರೆಗೆ ಹೊಗೋಣ ಅಂದಿದ್ದನಂತೆ. ನವೀನ್ ದೊಡ್ಡಮ್ಮಳ ಊರಲ್ಲಿ ಇದ್ದಾಗ ಅನ್ನಪೂರ್ಣ ತಮ್ಮ ಚಿಕ್ಕಮ್ಮಳಿಗೆ ಫೆÇನ್ ಮೂಲಕ ತಿಳಿಸಿದ್ದಾಳೆ. ಮನಗನಾಳನಲ್ಲಿದ್ದೇವೆ ಬರುತ್ತೇವೆಂದು ಹೇಳಿದ್ದಾಳಂತೆ. ಆದ್ರೆ ದೊಡ್ಡಮ್ಮಳ ಊರಲ್ಲಿಯೇ ಇದ್ದಾಗ ನವೀನ್ ಮಾವ ಬಸವರಾಜ ಸಾಲ ಮಾಡಿ ಜೀವನ ಮಾಡಿದ್ರೆ ಹೇಗೆ ಎಂದು ಅಳಿಯನಿಗೆ ಬುದ್ದಿ ಮಾತು ಹೇಳಿದ್ದಾನೆ. ಇದರಿಂದ ಕೋಪಕೊಂಡು ಜೂಲೈ 16ರಂದು ಮಂಗಳವಾರ ಹಾಡಹಗಲೇ ಎಲ್ಲರ ಎದುರೆ ರಾಡ್ ಹಾಗೂ ಚಾಕು ಇರಿದು ಕೊಲೆ ಮಾಡಿದ್ದಾನೆ.
ಹೆಂಡತಿ ಡೈವೋರ್ಸ್ ನಿರಾಕರಣೆ ಕೋಪದಿಂದ ಹೆಣ್ಣು ಕೊಟ್ಟ ಮಾವನನ್ನೇ ಹತ್ಯೆ ಮಾಡಿದ್ದಾನೆ. ಬಳಿಕ ಆಸ್ಪತ್ರೆಗೆ ಹೊಗೋಣ ಎಂದು ಕಾರ್?ನಲ್ಲಿ ಮಾವನ ಶವ ಹಾಕಿಕೊಂಡು ಆಸ್ಪತ್ರೆಗೆ ತೆರಳದೇ ಬೆಂಡಬೆಂಬಳಿ ಕಡೆ ತೆರಳಿ ರಸ್ತೆ ಪಕ್ಕದಲ್ಲಿ ಮಾವ ಬಸವರಾಜನ ಶವ ಬಿಸಾಕಿದ್ದಾನೆ. ನಂತ್ರ ಹೆಣ್ಣು ಕೊಟ್ಟ ಅತ್ತೆ ಕವೀತಾ ಅಲಿಯಾಸ್ ಚಂದ್ರಮ್ಮ ಹಾಗೂ ಹೆಂಡತಿ ಅನ್ನಪೂರ್ಣಳಿಗೆ ಬೆದರಿಕೆ ಹಾಕಿ ಜೋಳದಡಗಿ ಹತ್ತಿರ ಕರೆದುಕೊಂಡು ಹೋಗಿ ರಾಡ್ ಹಾಗೂ ಚಾಕುವಿನಿಂದ ಅತ್ತೆ ಹಾಗೂ ಹೆಂಡತಿಯನ್ನ ಭೀಕರವಾಗಿ ಕೊಲೆ ಮಾಡಿ, ಜೋಳದಡಗಿ ಹೊರ ಭಾಗದ ರಸ್ತೆ ಪಕ್ಕದಲ್ಲಿ ಬಿಸಾಕಿದ್ದಾನೆ. ಆದ್ರೆ ನವೀನ್ ಎರಡು ವರ್ಷದ ಮಗುವಾದ ನೆಹಾಂತನನ್ನು ಯಾಕೋ ಕೊಲೆ ಮಾಡಿಲ್ಲ. ಎರಡು ವರ್ಷದ ಮಗುವಿನ ಎದುರೆ ತ್ರಿವಳಿ ಕೊಲೆ ಮಾಡಿದ್ದಾನೆ ಪಾಪಿ ಅಳಿಯ ನವೀನ್.
ಯಾದಗಿರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬದ ಸಂಭ್ರಮ ವಿತ್ತು. ಮೊಹರಂ ಹಬ್ಬದ ವೇಳೆಯೇ ಹಂತಕ ನವೀನ್, ಹೆಣ್ಣು ಕೊಟ್ಟ ಅತ್ತೆ, ಮಾವ ಹಾಗೂ ತನ್ನ ಒಡತಿಯ ಕೊಲೆ ಮಾಡಿದ್ದಾನೆ. ಈ ವೇಳೆ ದಾವಣಗೆರೆಗೆ ಬರುತ್ತೆನೆಂದು ಹೇಳಿದವರ ಫೆÇೀನ್ ಸ್ವಿಚ್ ಆಫ್ ಆಗಿದಕ್ಕೆ ಅನ್ನಪೂರ್ಣ ತವರು ಮನೆಯವರು ಆತಂಕಗೊಂಡಿದ್ರು. ಈ ಬಗ್ಗೆ ನವೀನ್?ಗೆ ಫೆÇನ್ ಮಾಡಿ ಕೇಳಿದ್ರೆ ಅವರಿಗೆ ಬಸ್ ಮೂಲಕ ದಾವಣಗೆರೆಗೆ ಕಳುಹಿಸಿದ್ದೆನೆಂದು ಸುಳ್ಳು ಹೇಳಿದ್ದಾನೆ. ಕೊಲೆ ಮಾಡಿ ಜೂಲೈ 16ರಂದು ರಾತ್ರಿ ನವೀನ್ ಊರಲ್ಲಿ ಏನು ಆಗಿಲ್ಲ ಎಂಬಂತೆ ಆರಾಮಾಗಿ ಇದ್ದನಂತೆ. ಅನ್ನಪೂರ್ಣ ತವರು ಮನೆಯವರು ಈ ಬಗ್ಗೆ ಸೈದಾಪುರ ಪೆÇಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ಪಡೆದ ಪೆÇಲೀಸರು ನವೀನ್?ನನ್ನ ವಿಚಾರಣೆ ನಡೆಸಿದಾಗ ಅಳಿಯನ ನಿಜಬಣ್ಣ ಬೆಳಕಿಗೆ ಬಂದಿದೆ. ಪೆÇಲೀಸ್ ಭಾಷೆಯಲ್ಲಿ ವಿಚಾರಣೆ ಮಾಡಿದಾಗ ಕೊಲೆ ಮಾಡಿರುವ ಕರಾಳ ಮುಖ ಬೆಳಕಿಗೆ ಬಂದಿದೆ. ಅನ್ನಪೂರ್ಣಾಳ ಜೊತೆ ಜೀವನ ನಡೆಸಬಾರದೆಂದು, ಡೈವೋರ್ಸ್ ನೀಡದಕ್ಕೆ ಕೋಪಗೊಂಡು ಕೊಲೆ ಮಾಡಿದ್ದಾನಂತೆ. ವಡಗೇರಾ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮಾಡಿ ಮಾವ ಬಸವರಾಜ ಶವ ಬೆಂಡಬೆಂಬಳಿ ರಸ್ತೆ ಪಕ್ಕದಲ್ಲಿ ಎಸೆದಿದ್ದಾನೆ.